ರಾಯಚೂರು: ಮೇ-25:
ಗಂಜಳ್ಳಿ ಗ್ರಾಮದ ಬಳಿಯ ಕೃಷ್ಣ ನದಿಯಲ್ಲಿ ಬಾಲಕನೋರ್ವನನ್ನು ಮೊಸಳೆ ಎಳೆದುಕೊಂಡು ಹೋದ ಘಟನೆ ನಡೆದಿದೆ.
ಎಂದಿನAತೆ ಗಂಜಳ್ಳಿಯ ಬಾಲಕ ವಿಶ್ವ (12) ಕುರಿ ಕಾಯಲು ನದಿ ದಂಡೆಯಲ್ಲಿ ಹೋಗಿ ನೀರು ಕುಡಿಸಲು ಮುಂದಾದಗ ದೊಡ್ಡ ಮೊಸಳೆ ಬಾಲಕನ ಮೇಲೆ ದಾಳಿ ಮಾಡಿ ಎಳೆದುಕೊಂಡು ಹೋಗಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಪೋಷಕರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಗ್ನಿ ಶಾಮಕ ದಳ ಸಿಬ್ಬಂದಿ,ಪೊಲೀಸರು,ಗ್ರಾಮಸ್ಥರು ನದಿಯಲ್ಲಿ ಬೋಟನಲ್ಲಿ ತೆರಳಿ ಬಾಲಕನ ಶೋಧದಲ್ಲಿ ತೊಡಗಿದ್ದಾರೆ. ಮಗು ಕಳೆದುಕೊಂಡ ಕುಟುಂಬದ ಅಕ್ರಂದನ ಮುಗಿಲು ಮುಟ್ಟಿದೆ.