ಕ್ಷೇತ್ರದ ಜನರ ಸೇವೆ, ಕ್ಷೇತ್ರದ ಅಭಿವೃದ್ದಿಗೆ ಶಕ್ತಿ ಮೀರಿ ಶ್ರಮಿಸುವೆ- ಸಂಸದ ಕುಮಾರ ನಾಯಕ

Eshanya Times

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ. ಕಾರ್ಯಕರ್ತರ ಕೃತಜ್ಞತೆ ಔತಣಕೂಟ
ರಾಯಚೂರು: ಜೂ-23:

ರಾಯಚೂರು ಲೋಕ ಸಭಾ ಕ್ಷೇತ್ರದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಜನರ ಸೇವೆ ಮತ್ತು ಕ್ಷೇತ್ರದ ಅಭಿವೃದ್ದಿಗೆ ಶಕ್ತಿ ಮೀರಿ ಶ್ರಮಿಸುವುದಾಗಿ ನೂತನ ಸಂಸದ ಜಿ.ಕುಮಾರ ನಾಯಕ ಹೇಳಿದರು.
ನಗರಸಭೆ ವ್ಯಾಪ್ತಿಯ ಅಸ್ಕಿಹಾಳ ಗ್ರಾಮದ ಕೋಲ್ಡ್ ಸ್ಟೋರೇಜ್ ಅವರಣದಲ್ಲಿ ಆಯೋಜಿಸಿದ ರಾಯಚೂರು ಲೋಕಸಭಾ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ಕೃತಜ್ಞತಾ ಮತ್ತು ಔತನಕೂಟ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತ, ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ ನನ್ನನ್ನು ಅತಿ ಹೆಚ್ಚಿನ ಮತಗಳ ಅಂತರ ದಿಂದ ಗೆಲ್ಲುವಂತೆ ಮಾಡಿ ನನಗೊಂದು ಜವಾಬ್ದಾರಿ ನೀಡಿದ ಈ ಕ್ಷೇತ್ರದ ಜನತೆಯ ಋಣ ನಾನು ಎಂದು ಮರೆಯುವುದಿಲ್ಲವೆಂದರು.
ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಮೊದಲನೇ ಬಾರಿ ಸ್ಪರ್ಧಿಸಿದ ನನ್ನಗೆ ಕ್ಷೇತ್ರದ ಜನತೆ ಅತ್ಯಂತ ಆತ್ಮೀಯತೆಯಿಂದ ಬರ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿದರು. ಕ್ಷೇತ್ರದ ಸಮಗ್ರ ಅಭಿವೃದ್ದಿಗ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕ್ಷೇತ್ರದ ಜನತೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತೇನೆಂದರು. ಕೇಂದ್ರ ಸರಕಾರ ದಿಂದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ದೊರೆಯಬೇಕಾಗದ ಹಾಗೂ ಈ ಭಾಗದ ಅಭಿವೃದ್ದಿಗೆ ಪೂರಕವಾದ ಯೋಜನೆ ಮಂಜುರಾತಿಗೆ ಶ್ರಮಿಸುತ್ತೇನೆ. ಮುಖಂಡರ, ಕಾರ್ಯಕರ್ತರ, ಮತದಾರರು ಹಿತೈಷಿಗಳ,ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ಅನುಗುಣವಾಗಿ ಕಾರ್ಯಗಳಿಗೆ ಸ್ಪಂದಿಸುತ್ತೇನೆAದರು.
ಚುನಾವಣೆಯಲ್ಲಿ ರಾಯಚೂರು ಮತ್ತು ಯಾದಗಿರಿ ಎಂಟು ವಿಧಾನಸಭಾ ಕ್ಷೇತ್ರದ ಸಚಿವರು, ಶಾಸಕರು, ವಿಧಾನಪರಿಷತ ಸದಸ್ಯರು,ಮಾಜಿ ಶಾಸಕರು ಸ್ಥಳೀಯ ಸಂಸ್ಥೆಗಳ ಸದಸ್ಯರು ಪಕ್ಷದ ಮುಖಂಡರು,ಕಾರ್ಯಕರ್ತರು ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿದ ಪರಿಣಾಮ ಭಾರಿ ಬಹುಮತದೊಂದಿಗೆ ನಾನು ಗೆಲ್ಲಲು ಸಾಧ್ಯವಾಗಿದೆ ಎಂದರು.
ನನ್ನ ಚುನಾವಣೆಗೆ ಶ್ರಮಿಸಿದಪ್ರತಿಯೊಬ್ಬರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತಾ ನಿಮ್ಮ ಋಣವನ್ನು ನಾನು ಈ ಕ್ಷೇತ್ರದ ಅಭಿವೃದ್ದಿಯ ಮೂಲಕ ತೀರಿಸುತ್ತೇನೆಂದರು.
ವೇದಿಕೆ ಮೇಲೆ ಶಾಸಕರಾದ ಹಂಪಯ್ಯ ಸಾಹುಕಾರ,ವೇನುಗೋಪಾಲ ನಾಯಕ,ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಮುಖಂಡರಾದ ರವಿ ಬೋಸರಾಜ್, ಮಹ್ಮದ್ ಶಾಲಂ, ಕೆ.ಶಾಂತಪ್ಪ, ನಗರಸಭೆ ಸದಸ್ಯ ಜಯಣ್ಣ,ಸಾಜೀದ್ ಸಮೀರ್, ಜಿಲ್ಲಾ ವಕ್ಫ್ ಬೋರ್ಡ ಅಧ್ಯಕ್ಷ ಮೌಲನಾ ಫರೀದ್ ಖಾನ್,ಕೆ.ಬಸವಂತಪ್ಪ, ರಾಮಣ್ಣ ಇರಬಗೇರ,ಕಿರಿಲಿಂಗಪ್ಪ ನರಸಿಂಹಲು ಮಾಡಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";