ಮುಂದಿನ ಬೆಳ್ಳಿ ತೆರೆ ಸಾಂಸ್ಕೃತಿಕ ಹಬ್ಬಕ್ಕೆ ಎರಡು ರಾಜ್ಯದ ಮುಖ್ಯಮಂತ್ರಿ ಆಗಮನ -ಪಾಪಾರೆಡ್ಡಿ

Eshanya Times

ರಾಯಚೂರು, ಜೂ.23-

ಮುಂದಿನ ವರ್ಷ ನಡೆಯುವ ಮುಂಗಾರು ಸಾಂಸ್ಕೃತಿಕ ಬೆಳ್ಳಿತೆರೆ ಹಬ್ಬಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತಿ ರೆಡ್ಡಿ ಅವರು ಆಗಮಿಸಲಿದ್ದಾರೆ ಎಂದು ಹಬ್ಬದ ರೂವಾರಿ ಮತ್ತು ಮಾಜಿ ಶಾಸಕ ಎ. ಪಾಪಾರೆಡ್ಡಿ ಅವರು ಹೇಳಿದರು.
ನಗರದ ಗಂಜ್ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಮುಂಗಾರು ಸಾಂಸ್ಕೃತಿಕ ರಾಯಚೂರು ನಾಡ ಹಬ್ಬದ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಭಾರಿ ಯಶಸ್ವಿಗೆ ಕಾರಣಭೂತರಾದ ಎಲ್ಲ ಗಣ್ಯರು ಸಮಾಜದ ಮುಖಂಡರು ವೀಕ್ಷಣೆಗೆ ಕಿಕ್ಕಿರಿದ ಜನರಿಗೆ ಹಾಗೂ ರೈತರಿಗೆ ರಾಯಚೂರು ಜಿಲ್ಲೆಯ ಜನತೆ ಧನ್ಯವಾದಗಳು ತಿಳಿಸುತ್ತಾ ಮಾತನಾಡಿದ ಅವರು, ಕಳೆದ ೨೪ ವರ್ಷಗಳಿಂದ ಸಮಾಜದ ಸಮ್ಮುಖದಲ್ಲಿ ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಮುಂಗಾರು ಹಬ್ಬ ಭಾರಿ ಜನಪ್ರಿಯತೆ ಗಳಿಸುವುದರ ಮೂಲಕ ದೇಶಕ್ಕೆ ಮಾದರಿಯಾಗಿದೆ. ಮುಂಗಾರು ಸಾಂಸ್ಕೃತಿಕ ರಾಯಚೂರು ನಾಡ ಹಬ್ಬ ಮುನ್ನೂರು ಕಾಪು ಸಮಾಜಕ್ಕೆ ಮತ್ತಿಷ್ಟು ವರ್ಚಸ್ಸು ತಂದಿದೆ.
ತೆಲAಗಾಣ, ತಮಿಳುನಾಡು, ಕೇರಳ ರಾಜ್ಯಗಳಿಂದ ಅಲ್ಲಿಯ ಪ್ರತಿಭಾನ್ವಿತ ಕಲಾ ತಂಡಗಳು ಅಲ್ಲಿಯ ಸಂಸ್ಕೃತಿ ನೃತ್ಯರೂಪಕ ಪ್ರದರ್ಶಿಸಿ ನಮ್ಮ ಭಾಗದ ಜನರಿಗೆ ಮನೋರಂಜನೆ ನೀಡುವ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಪ್ರದರ್ಶನೆಗೆ ಈ ಹಬ್ಬ ವೇದಿಕೆಯಾಗಿದೆ ಎಂದರು.
ಈ ಹಿಂದೆ ಎತ್ತುಗಳ ಪ್ರದರ್ಶನವೆಂದರೇ, ಕೇವಲ ಕೃಷಿಯ ಎತ್ತುಗಳಿಗೆ ಮಾತ್ರ ಸೀಮಿತವಾಗಿದ್ದು, ಆದರೆ, ಮುಂಗಾರು ಸಮಾಜ ಆರಂಭಿಸಿದ ಭಾರದ ಕಲ್ಲು ಎಳೆಯುವ ಎತ್ತುಗಳ ಸ್ಪರ್ಧೆ ಇಂದು ಎತ್ತುಗಳನ್ನು ಕೃಷಿಗೆ ಮಾತ್ರವಲ್ಲದೇ, ಇಂತಹ ಸ್ಪರ್ಧೆಗಳಿಗೂ ಸಾಕಾಣಿಕೆ ಮಾಡುವಂತಹ ಪರಂಪರೆಗೆ ಮುಂಗಾರು ಸಾಂಸ್ಕೃತಿಕ ಹಬ್ಬ ನಾಂದಿಯಾಗಿದೆ. ಆರಂಭದಲ್ಲಿ ಕೇವಲ ಆಂಧ್ರದ ಎತ್ತುಗಳು ಮಾತ್ರ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದವು. ಕರ್ನಾಟಕದಲ್ಲಿ ಅದರಲ್ಲೂ ಜಿಲ್ಲೆಯಲ್ಲಿ ಭಾರದ ಕಲ್ಲು ಎಳೆಯುವ ಎತ್ತುಗಳನ್ನು ಸಾಕುವ ಬಹುದೊಡ್ಡ ಹವ್ಯಾಸಕ್ಕೆ ಈ ಹಬ್ಬ ಕಾರಣವಾಗಿದೆ.
ಇಂದು ಜಿಲ್ಲೆಯ ಅನೇಕ ಕಡೆ ಮುಂಗಾರು ಸಾಂಸ್ಕೃತಿಕ ಹಬ್ಬಗಳನ್ನು ಆಯೋಜಿಸುವ ಮತ್ತು ಭಾರದ ಕಲ್ಲು ಎಳೆಯುವ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತಿವೆ. ಇದು ನಿಜಕ್ಕೂ ಸಂತೋಷದ ಸಂಗತಿಯಾಗಿದೆ. ಈ ಕಾರ್ಯಕ್ರಮ ನಡೆಯಲು ಮುನ್ನೂರುಕಾಪು ಸಮಾಜ ಮಾದರಿಯಾಗಿರುವುದು ಈ ಸಮಾಜದ ಪ್ರಾಬಲ್ಯ ಪ್ರದರ್ಶಿಸುತ್ತದೆ. ಮೂಲತಃ ಕೃಷಿಯನ್ನು ಅವಲಂಬಿತ ಮುನ್ನೂರುಕಾಪು ಸಮಾಜ ತನ್ನ ಕಷ್ಟಾರ್ಜಿತ, ವಿಶ್ವಾರ್ಹತೆ ಮತ್ತು ಸ್ವಾವಲಂಬಿ ತನದಿಂದ ಇಂದು ಎಲ್ಲಾ ರಂಗಗಳಲ್ಲೂ ಪ್ರಬಲ ಸಮುದಾಯವಾಗಿ ಬೆಳೆದು ನಿಂತಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಶಿವರಾಜ ಪಾಟೀಲ್, ಸಮಾಜದ ಹಿರಿಯ ಮುಖಂಡ ಬೆಲ್ಲಂ ನರಸರೆಡ್ಡಿ, ಜಿ. ಬಸವರಾಜ ರೆಡ್ಡಿ, ಯು ಕೃಷ್ಣಮೂರ್ತಿ, ಮುನ್ನೂರು ಕಾಪು ಸಮಾಜದ ಮುಖಂಡರು ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";