ರಾಯಚೂರು: ಜೂ-25:
ಸಂಸತ್ತಿನಲ್ಲಿ ನಡೆದ ಸಂಸದರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಜಿ ಕುಮಾರ ನಾಯಕ ಅವರು ಸೂಟ್-ಬೂಟ್ ನೊಂದಿಗೆ ಬಂದರೂ ಅಖಿಲ ಭಾರತದ ಪ್ರಜ್ಞೆಯೊಂದಿಗೆ ರಾಷ್ಟç ಮಟ್ಟದ ವೇದಿಕೆಯಲ್ಲಿ ಕರ್ನಾಟಕದ ಅಸ್ಮಿತೆಯನ್ನು ಮೈಗೂಡಿಸಿಕೊಂಡು ಕರ್ನಾಟಕ ಮಾತೃ ಭಾಷೆ ಕನ್ನಡದಲ್ಲಿ ಪ್ರಮಾಣ ವಚನಸ್ವೀಕರಿಸಿದರು. ಕೊನೆಯಲ್ಲಿ ಜೈ ಹಿಂದ್ ಜೈ ಕರ್ನಾಟಕ ಎನ್ನುವ ಮೂಲಕ ಪ್ರತಿಜ್ಞೆ ವಿಧಿ ಸ್ವೀಕರಿಸಿದ್ದು ವೈಶಿಷ್ಟ್ಯವಾಗಿತ್ತು..
ಜಿ. ಕುಮಾರ ನಾಯಕ ಅವರು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಸೇವಾ ಅವಧಿಯ ನಂತರ ಪ್ರಥಮ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸಂಸತ್ ನಲ್ಲಿನ ಅವರ ಪ್ರಮಾಣ ವಚನದ ವಿಶಿಷ್ಠತೆಯನ್ನು ರಾಜ್ಯವೆ ಗಮನ ಸೆಳೆಯಿತು.
ರಾಜ್ಯದ ಇನ್ನುಳಿದ ಸದಸ್ಯರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಜಿ ಕುಮಾರ ನಾಯಕರ ಕನ್ನಡದಲ್ಲಿನ ಪ್ರಮಾಣ ವಚನ ಮಾತೃಭೂಮಿಯ ಮೇಲಿನ ಅಭಿಮಾನವನ್ನು ಸೂಚಿಸುತ್ತದೆ.
ಸಂಸತ್ತಿಗೆ ಪ್ರವೇಶಿಸಿದ ಮೊದಲ ದಿನವೆ ಕರ್ನಾಟಕ ಹೆಸರನ್ನು ಸಂಸತ್ತಿನಲ್ಲಿ ನುಡಿದರು. ಇವರಿಗಿರುವ ಆಡಳಿತದ ಅನುಭವ ಸಂಸತ್ತಿನಲ್ಲಿ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗ ಹಾಗೂ ರಾಯಚೂರು ಕ್ಷೇತ್ರ ಕನಸುಗಳನ್ನು ನನಸು ಮಾಡಲು ಸಂಸತ್ತಿನಲ್ಲಿ ಸಮರ್ಥವಾಗಿ ಪ್ರತಿಧ್ವನಿಸಲಿ ಎಂಬುದು ಕ್ಷೇತ್ರದ ಜನತೆಯ ಆಶಯವಾಗಿದೆ.