ರಾಯಚೂರು,ಜು.23: ವಾಹನಗಳಿಗೆ ಜಿಪಿಎಸ್ ಪ್ಯಾನಿಕ್ ಬಟನ್ ಅಳವಡಿಸಲು ಮಾಡಿದ ಆದೇಶವನ್ನು ಹಿಂಪಡೆಯುವ0ತೆ ಒತ್ತಾಯಿಸಿ ಕರ್ನಾಟಕ ಚಾಲಕರ ಒಕ್ಕೂಟ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿನಟನೆ ನಡೆಸಿ ಮನವಿ ಸಲ್ಲಿಸಿ, ವಾಹನಗಳಿಗೆ ಜೆಇಪಿಎಸ್ ಪ್ಯಾನಿಕ್ ಬಟನ್ ಅಳವಡಿಸಲು ಸರಕಾ ಆದೇಶ ನೀಡಿದೆ. ಆದರೆ ಸಾರಿಗೆ ಇಲಾಖೆಯಲ್ಲಿ ವಾಹನಗಳ ಎಫ್‌ಸಿ ಮಾಡಲು ಹೋದಾಗ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಕೆಗೆ 14,700ಶುಲ್ಕ ತೆಗೆದುಕೊಳ್ಳುತ್ತಿದ್ದಾರೆ. ಮತ್ತು ಪಾಸಿಂಗ್ ಮಾಡಿಸಲು 4000 ಒಟ್ಟು 18,700 ರೂ. ತೆಗೆದುಕೊಳ್ಳುತ್ತಿದ್ದಾರೆ. ಬಾಡಿಗೆ ವಾಹದಲ್ಲಿ ಯಾರಾದರೂ ಪ್ರಯಾಣಿಕರ ಮಕ್ಕಳು ಪ್ಯಾನಿಕ್ ಬಟನ್ ಒತ್ತಿದರೆ ಅದಕ್ಕೆ ಕೂಡಾ ದಂಡ ವಿಧಿಸಲಾಗಿದೆ ಎಂದು ದೂರಿದರು.
ಕೂಡಲೇ ಇದನ್ನು ರದ್ದುಪಡಿಸಬೇಕು, ವರ್ಷಕ್ಕೆ ಶುಲ್ಕ ಭರಿಸುವಂತೆ ಆದೇಶವಾಗಿದ್ದು, ಇದರಿಂದ ಬಡ ಚಾಲಕರಿಗೆ ಆರ್ಥಿಕ ಹೊರಯಾಗುತ್ತಿದೆ. ಅವೈಜ್ಞಾನಿಕ ಆದೇಶವಾಗಿದ್ದು, ಬಡ ವಾಹನ ಚಾಲಕರಿಗೆ ತೊಂದರೆಯಾಗಿದೆ. ಒಂದು ವೇಳೆ ಜೆಪಿಎಸ್ ಮತ್ತು ಪ್ಯಾನಿಕ ಬಟನ್ ಅಳವಡಿಸುವುದಾದರೆ ವಾಹನಗಳಿಗೆ 5 ರಾಜ್ಯದ ಪರ್ಮಿಟ್ ನೀಡಿದರ ಇದಕ್ಕೆ ಒಪ್ಪಿಗೆ ನೀಡಲಾಗುತ್ತದೆ ಎಂದು ಮನವಿ ಮಾಡಲಾಗಿದೆ.
ಸರಕಾರಿ ಬಸ್‌ಗಳಿಗೆ ಯಾವುದೇ ಜೆಪಿಎಸ್ ಮತ್ತು ಪ್ಯಾನಿಕ್ ಬಟನ್ ಇಲ್ಲದೇ ಜೆಪಿಎಸ್ ಮಾಡುತ್ತಿದ್ದು,ಖಾಸಗೀ ವಾಹನಗಳಿಗೆ ಮಾತ್ರ ಯಾಕೆ ಈ ಆದೇಶವೆಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ. ಡಿ.ಎಲ್. ಹೆವಿ ಬ್ಯಾಡ್ಜನ್ನು ಸರಕಾರದ ಶುಲ್ಕದಲ್ಲಿ ಮಾಡಿಕೊಡಲು ಅಧಿಕಾರಿUಳಿಗೆ ಸೂಚಿಸಬೇಕು, ಬ್ರೂಕರ್‌ಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತದ್ದು, ಬಡ ಚಾಲಕನಿಗೆ ತೊಂದರೆಯಾಗಿದ್ದು, ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಈ.ವೆಂಟೇಶ ಮಡಿವಾಳ, ರಘು ಎಟೆಕಾರ್, ರಘು ನನ್ನರೆ, ಗೌರವಧ್ಯಕ್ಷ ಅಂಬಾಜಿ ರಾವ್, ಮೈದನಕರ್, ರಾಮು ಸೇರಿದಂತೆ ಅನೇಕರು ಉಪಸ್ಥಿರಿದ್ದರು.