ಸಿಂಧನೂರು.ಜು.3-
ನಾಳೆಯಿಂದ ಸಿಂಧನೂರು ನಗರ ನಿವಾಸಿಗಳಿಗೆ ೬ ದಿವಸಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು ನೀರಿನ ಸಮಸ್ಯೆಯ ಬಗ್ಗೆ ಶಾಶ್ವತ ಪರಿಹಾರಕ್ಕೆ ಡಿಪಿಆರ್ ಸಿದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂಧನೂರು ನಗರಕ್ಕೆ ಮುಂದಿನ ೫೦ ವರ್ಷಗಳ ಕಾಲ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎರಡು ಡಿಪಿಆರ್ ಈಗಾಗಲೇ ಸಿದ್ಧಪಡಿಸಿದ್ದು, ಅನುದಾನ ಮಂಜೂರಾತಿ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು, ಕ್ಷೇತ್ರಕ್ಕೆ ೨೫ ಕೋಟಿ ವಿಶೇಷ ಶಾಸಕರ ಅನುದಾನ ನೀಡಲಾಗಿದ್ದು, ಸಂಪೂರ್ಣ ಹಣವನ್ನು ಕುಡಿಯುವ ನೀರಿನ ಕಾಮಗಾರಿ ಕೈಗೆತ್ತಿಕೊಳ್ಳಲು ಬಳಸಲಾಗುತ್ತದೆ. ತುರ್ವಿಹಾಳ ಬಳಿ ಇರುವ ಕೆರೆಯ ಉಳಿದ ೧೪೦ ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣ ಮಾಡಲು ಈಗಾಗಲೇ ಎರಡು ಡಿಪಿಆರ್ ಸಿದ್ದಪಡಿಸಿದ್ದು, ೩೪೨೨ ಎಂಎಲ್ ಡಿ ನೀರಿನ ಮಟ್ಟ ಸಂಗ್ರಹಿಸಲು ೧೨೦ ಕೋಟಿ ರೂ ಹಾಗೂ ೭೧೬ ಎಂಎಲ್ ಡಿ ನೀರಿನ ಮಟ್ಟ ಸಂಗ್ರಹಿಸಲು ೩೦ ಕೋಟಿ ವೆಚ್ಚದಲ್ಲಿ ಎರಡು ಡಿಪಿಆರ್ಗಳನ್ನು ಸಿದ್ದಪಡಿಸಲಾಗಿದೆ, ಇದರ ಕುರಿತು ಮುಖ್ಯಮಂತ್ರಿಯೊAದಿಗೆ ಚರ್ಚಿಸಿ ಅನುಮೋದನೆ ಪಡೆದು, ಅನುದಾನ ಬಿಡುಗಡೆಯ ಅನುಸಾರವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಶಾಸಕರ ವಿಶೇಷ ಅನುದಾನ ಸೇರಿದಂತೆ ನಗರ ಯೋಜನಾ ಪ್ರಾಧಿಕಾರ ೬.೫ ಕೋಟಿ ರೂ, ನಗರಸಭೆ ಅನುದಾನ ೨.೫ ಕೋಟಿ ರೂ ಒಟ್ಟು ೩೪ ಕೋಟಿ ವೆಚ್ಚದಲ್ಲಿ ಸಂಪೂರ್ಣ ಕೆರೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದೆಂದರು.
ತುAಗಭದ್ರಾ ಜಲಾಶಯದ ಮುಖಾಂತರ ಕಾಲುವೆಗೆ ನೀರು ಹರಿಸಿದ್ದು, ತುರ್ವಿಹಾಳ ಕೆರೆ ಸೇರಿ ಸಿಂಧನೂರು ನಗರ ವ್ಯಾಪ್ತಿಯ ೨ ಕೆರೆಗಳಿಗೆ ಕುಡಿಯುವ ನೀರಿನ ಉದ್ದೇಶದಿಂದ ನೀರು ತುಂಬಿಸಕೊಳ್ಳಲಾಗಿದೆ. ಒಟ್ಟು ೧೭೦೦ ಎಂಎಲ್ ಡಿ ನೀರು ಸಂಗ್ರಹ ಮಾಡಿಕೊಳ್ಳಲಾಗಿದೆ. ನಗರದಲ್ಲಿ ಪ್ರತಿದಿನ ೧೬ ಎಂಎಲ್ ಡಿ ನೀರು ಸರಬರಾಜು ಮಾಡಲಾಗುವುದು. ನೀರಿನ ಲಭ್ಯತೆ ಹಿನ್ನಲೆಯಲ್ಲಿ ಒಂದು ತಿಂಗಳಗಳು ಕಾಲ ೧೦ ದಿನಕ್ಕೊಮ್ಮೆ ನೀರು ಬಿಡಲಾಗಿತ್ತು. ನಾಳೆಯಿಂದ ೬ ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ: ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ಶೇಖರಪ್ಪ ಗಿಣಿವಾರ, ಕೆ.ಜಿಲಾನಿಪಾಷಾ, ಚಂದ್ರಶೇಖರ ಮೈಲಾರ್, ಆಲಂಭಾಷಾ, ಮುರ್ತುಜಾ ಹುಸೇನ್, ಮುಖಂಡರಾದ ಛತ್ರಪ್ಪ ಕುರಕುಂದಿ, ಇಲಿಯಾಸ್ ಪಟೇಲ್, ಎಸ್ ಪಿ ಟೇಲರ್, ವೆಂಕಟೇಶ ದತ್ತುರಾವ್, ಸುರೇಶ ಜಾಧವ್, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮುಂತಾದವರಿದ್ದರು.