ಆನ್ವರಿ: ಸರಕಾರಿ ಶಾಲಾ ಕೊಠಡಿ ಕುಸಿದು ವಿದ್ಯಾರ್ಥಿ ತೆಲೆಗೆ ಪಟ್ಟು

Eshanya Times

ರಾಯಚೂರು:

ಲಿಂಗಸೂಗೂರ ತಾಲೂಕಿನ ಆನ್ವರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ವರ್ಷಗಳ ಹಿಂದೆ ಅಷ್ಟೇ ನಿರ್ಮಾಣಗೊಂಡ ಶಾಲಾ ಕೊಠಡಿ ಕುಸಿದು ಒಂದನೇ ತರಗತಿಯ ವಿದ್ಯಾರ್ಥಿ ಅರುಣ್ ತಂದೆ ಗಂಗಪ್ಪ ತಲೆಗೆ ಗಂಭೀರ ಗಾಯಗೊಂಡಿದ್ದು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆನ್ವರಿ ಗೆ ದಾಖಲಿಸಲಾಗಿದ್ದು ೫ ಹೊಲಿಗೆಗಳು ಬಿದ್ದಿವೆ.
ನೂತನವಾಗಿ ನಿರ್ಮಾಣಗೊಂಡ ಕಟ್ಟಡ ಸಂಪೂರ್ಣವಾಗಿ ಕಳಪೆಯಾಗಿದ್ದು, ಈ ಘಟನೆಯ ಹೊಣೆಯನ್ನು ಕಟ್ಟಡ ನಿರ್ಮಾಣದ ಗುತ್ತಿಗೆದಾರರು ಹಾಗೂ ಶಾಸಕರು ಹಾಗೂ ಸಂಬAಧಪಟ್ಟ ಇಲಾಖೆಯವರು ಕಾರಣ ಇವರ ಮೇಲೆ ಸೂಕ್ತ ಕ್ರಮ ಆಗಬೇಕು. ಗುತ್ತಿಗೆದಾರನ ಲೈಸೆನ್ಸ್ ರದ್ದು ಆಗಬೇಕು ಎಂದು ಎಸ್‌ಎಫ್‌ಐ ಒತ್ತಾಯಿಸುತ್ತದೆ.
ತಕ್ಷಣೆವೇ ಗಾಯಗೊಂಡ ವಿದ್ಯಾರ್ಥಿಯ ಸಂಪೂರ್ಣ ಆಸ್ಪತ್ರೆ ವೆಚ್ಚವನ್ನು ಸಂಬAಧಪಟ್ಟ ಇಲಾಖೆ ಹಾಗೂ ತಾಲೂಕಾ ಆಡಳಿತ ಕೊಡಬೇಕು. ನಿರ್ಲಕ್ಷ್ಯ ವಹಿಸಿದರೆ ಬಿಇ ಓ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಸ್ಎಫ್ಐ ಎಚ್ಚರಿಸುತ್ತದೆ ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ, ತಾಲೂಕ ಅಧ್ಯಕ್ಷ ವಿಶ್ವ ಅಂಗಡಿ ತಿಳಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";