ನ್ಯಾಯಬೆಲೆ ಅಂಗಡಿಯಲ್ಲಿ ತಿಂಗಳ ಪೂರ್ತಿ ದಿವಸ ಧಾನ್ಯ ವಿತರಣೆಗೆ ಸ್ಲಂ ನಿವಾಸಿಗಳ ಒತ್ತಾಯ

Eshanya Times

ರಾಯಚೂರು: ಜೂ-24:

ನಗರದ ನ್ಯಾಯಬೆಲೆ ಅಂಗಡಿಯಲ್ಲಿ ತಿಂಗಳ ಪೂರ್ತಿ ದಿವಸ ಧಾನ್ಯ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ನಗರದ ವಾರ್ಡ ನಂ.೨೮ರ ಸಿಸಿಎಸ್ ಶಾಸ್ತಿç ನಗರ ನ್ಯಾಯಬೆಲೆ ಅಂಗಡಿ ಮತ್ತು ೩ರಲ್ಲಿ ಬುರವ ವಿಜಯನಗರ ವೈ.ಎಮ್. ಸೇರಿದಂತೆ ನಗರದ ಎಲ್ಲಾ ನ್ಯಾಯ ಬೆಲೆ ಅಂಗಡಿಗಳು ತಿಂಗಳ ಪೂರ್ತಿ ಆಹಾರ ಪಡಿತರ ಧಾನ್ಯ ವಿತರಿಸ ಬೇಕೆಂದು ಒತ್ತಾಯಿಸಿದರು.
ವಿಜಯನಗರ ವೈ.ಎಮ್, ನ್ಯಾಯಬೆಲೆ ಅಂಗಡಿ ಮಾಲೀಕರು ತಿಂಗಳ ಪೂರ್ತಿ ಆಹಾರ ಧಾನ್ಯ ವಿತರಸದೆ ತಿಂಗಳಲ್ಲಿ ಒಂದೇ ಒಂದು ಆಹಾರ ಧಾನ್ಯ ವಿತರಿಸಿ ಪಡಿತರ ಚೀಟಿದಾರರಿಗೆ ವಂಚಿಸುತ್ತಿದ್ದಾರೆAದು ದೂರಿದ್ದಾರೆ. ಒಂದು ದಿನ ಬೆಳಚ್ಚು(ತಂಬ್) ತೆಗೆದ ಕೊಂಡು ಮರು ದಿನವಸ ಪಡಿತರ ಧಾನ್ಯ ವಿತರಿಸುತ್ತಿರುವುದರಿಮದ ಬಡ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ವಾರ್ಡ ನಂ.೨೮ರಲ್ಲಿ ನ್ಯಾಯಬೆಲೆ ಅಂಗಡಿಯಿAದ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ. ಮೈಲಾರ ನಗರದ, ಆಶ್ರಯ ಕಾಲೋನಿ, ಕಾಳಿದಾಸ ನಗರದ ಪಡಿತರ ಚೀಟಿದಾರರು ೫ ಕಿ.ಮೀ.ದೂರದಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಅಂಗಡಿ ತೆರೆಯುವುದರಿಮದ ತೊಂದರೆ ಅನದುಭವಿಸುತ್ತಿದ್ದಾರೆ.
ಆಹಾರ ನಿರೀಕ್ಷಕರು ಪ್ರತಿ ತಿಂಗಳಜು ಪ್ರತಿ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ಜಾಗೃತಿ ಸಭೆಯಲ್ಲಿ ಭಾಗವಹಿಸಿ ವರದಿ ಪಡೆಯಬೇಕು, ಆಹಾರ ನಿರೀಕ್ಷಕರು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ನಿಯಮಗಳನ್ನು ಪಾಲಿಸದೇ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಾರ್ಡ ನಂ.೨೮ರ ಸಿಸಿಎಸ್ ಶಾಸ್ತಿç ನಗರ ನ್ಯಾಯಬೆಲೆ ಅಂಗಡಿ ಸೇರಿದಂತೆ ನಗರದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ತಿಂಗಳ ಪೂರ್ತಿ ಪಡಿತರ ಧಾನ್ಯ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ಆಹಾರ ನಿರೀಕ್ಷಕರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪ್ರತಿದಿನ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ದೊರೆಯುವಂತೆ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ, ಕಾರ್ಯದರ್ಶಿ ನೂರಜಾನ್, ಸಂಘಟನಾ ಕಾರ್ಯದರ್ಶಿ ಬಸವರಾಜ್ ಹೊಸೂರು, ಮಾಧವರೆಡ್ಡಿ ಮಹೇಶ, ನಾಗರಾಜ್,ಜಿ.ರಾಜು, ಪವನ್ ಕುಮಾರ, ನಿತೀನ್, ಜಂಬಣ್ಣ, ಸಿ.ಆರ್. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";