ರಾಯಚೂರು:
ಸಾಮಾಜಿಕ ಜಾಲತಾಣಗಳ ಪ್ರಭಾವ ದಿಂದಾಗಿ ಇಂದು ಪುಸ್ತಕ ಓದುವವರ ಸಂಖ್ಯೆ ಇಳಿಮುಖವಾಗಿದೆ ಎಂದು ದೇವನಾಂಪ್ರಿಯ ಪ್ರಕಾಶನದ ಪ್ರಕಾಶಕ ಹಾಗೂ ಪತ್ರಕರ್ತ ವೀರೇಶ ಸೌದ್ರಿ ಕಳವಳ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಪರಿಷತ್ತು, ತಾಲೂಕ ಕನ್ನಡ ಪರಿಷತ್ತು, ದೇವನಾಂಪ್ರಿಯ ಪ್ರಕಾಶನ ಮತ್ತು ಓದಿಗರ ಸಂಘ ಮಸ್ಕಿ ಸಂಯುಕ್ತಶ್ರಯದಲ್ಲಿ ಸಂಶೋಧಕರಾದ ಡಾ. ಸರ್ವ ಮಂಗಳ ಸಕ್ರಿ ಇವರ ಎರಡು ಕೃತಿಗಳಾದ ಜಿಲ್ಲೆಯ ತತ್ವಪದಕಾರರು ಮತ್ತು ಅವ್ರ ಸಾಹಿತ್ಯ ಚಿತ್ ಜ್ಯೋತಿ ಪುಸ್ತಕ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಇಡೀ ಜಗತ್ತಿನ ವಿಷಯಗಳನ್ನು ತಿಳಿದುಕೊಳ್ಳವ ಮಹಾತಿ ನೀಡುತ್ತಿದೆ. ಹಿಂದೆ ಲೇಖಕರು ಬರೆದಿದನ್ನು ಪುಸ್ತಕ ರೂಪದಲ್ಲಿ ಹೊರತಂದು ಓದುಗರ ಕೈ ತಲುಪಿಸುವ ಮುದ್ರಣವು ಕಡಿಮೆಯಾಗಿದೆ. ಬರೆದಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಓದುಗರಿಗೆ ಅರ್ಪಿಸುತ್ತಿದ್ದೇವೆ. ಇದರಿಂದ ಮುದ್ರಣವು ಅವಸಾನದ ಅಂಚಿನಲ್ಲಿದೆ ಎಂದರು.
ಹಂಪಿ ವಿವಿಯ ಪ್ರಾಧ್ಯಾಪಕ ವೀರೇಶ ಬಡಿಗೇರ ಮಾತನಾಡಿ, ಸಾಹಿತ್ಯವನ್ನು ಪುಸ್ತಕದಲ್ಲಿ ಓದುವ ಅಭಿರುಚಿ ಕಡಿಮೆಯಾಗಿದೆ. ಧ್ವನಿ ಮೂಲಕ ಕೇಳುವುದು ಹೆಚ್ಚಾಗಿದೆ. ತತ್ವಪದಕಾರರು ಮತ್ತು ಅವರ ಸಾಹಿತ್ಯ ಪುಸ್ತಕವನ್ನು ಹೊರ ತಂದಿದ್ದು ಲೇಖಕರ ಪರಿಶ್ರಮ, ಅಧ್ಯಯನ ಮತ್ತು ಸಂಶೋಧನೆ ಮಾಡಿದ ಪ್ರತಿಫಲವಾಗಿದೆ. ಅವರು ಶ್ರದ್ದೆಯಿಂದ ಸಂಶೋಧನೆ ಮತ್ತು ಅನೇಕ ಪುಸ್ತಕಗಳ ಅಧ್ಯಯನ ಫಲ ಈ ಕೃತಿಯಾಗಿದೆ. ಸರ್ವ ಮಂಗಳ ಸಕ್ರಿ ಅವರು ಹೊರ ತಂದ ಎರಡು ಕೃತಿಗಳು ಉತ್ತಮವಾಗಿ ಮೂಡಿ ಬಂದಿವೆ ಎಂದರು.
ತಾಲೂಕ ಕಸಾಪ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ವಿಜಯ ಕುಮಾರ ಕಮ್ಮಾರ, ಹಿರಿಯ ಸಾಹಿತಿ ಅಮರೇಶ ನುಗಡೋಣಿ, ಸಾಹಿತಿ ಡಾ.ಚನ್ನಬಸವಯ್ಯ ಹಿರೇಮಠ, ಡಾ.ಜಯಲಕ್ಷಿö್ಮ ಮಂಗಳ ಮೂರ್ತಿ, ದಾನಮ್ಮ ಎಸ್.ಹಿರಿಯ ಸಾಹಿತಿ ವೀರ ಹನುಮಾನ, ಬಸವರಾಜ್ ಸಕ್ರಿ, ತಾಯಪ್ಪ ಹೊಸೂರ, ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಕೃತಿ ಕತೃ ಡ.ಸರ್ವ ಮಂಗಳ ಸಕ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.