ರಾಯಚೂರು: ಜೂ-24:
ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಜಾರಿಗೊಳೀಸಬೇಕೆಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ೧೯೮೬ರಲ್ಲಿ ಸರೋಜಿನಿ ಮಹಿಷಿ ವರದಿ ಸರಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸೇರಿದಂತೆ ಅನೇಕ ವಿಷಯಗಳಿವೆ. ತಮಿಳು ನಾಡಿನಲ್ಲಿ ಸ್ಥಳಿಯರಿಗೆ ಉದ್ಯೋಗದಲ್ಲಿ ಶೇ.೮೦ರಷ್ಟು ಮೀಸಲಾತಿ ನೀಡಿದೆ. ರಾಜ್ಯದಲ್ಲಿ ೨೦೧೬ರಲ್ಲಿ ವರದಿ ಪುನರ್ ಪರಿಶೀಲನಾ ಸಮಿತಿ ಮಾಡಲಾಯಿತು. ಸರಕಾರಿ ವಲಯದಲ್ಲಿ ಹೆಚ್ಚು ಉದ್ಯೋಗ ನೀಡಬೇಕಾಗಿದೆ. ಸರಕಾರ ಮತ್ತು ಖಾಸಗಿ ವಲಯದಲ್ಲಿ ಹೆಚ್ಚು ಉದ್ಯೋಗ ನೀಡಬೇಕಾಗಿದೆ. ಸರಕಾರಿ ಖಾಸಗೀ ವಲಯದಲ್ಲಿ ಕನ್ನಡಿಗೆಇಗೆ ಉದ್ಯೋಗದಲ್ಲಿ ಮೀಸಲಾತಿ ಬೇಡಿಕೆ ಈಡೇರಿಕೆಗೆ ವರದಿ ಜಾರಿಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕೊಂಡಪ್ಪ.ಕೆ., ಸಂಚಾಲಕ ಮಾಣಿಕ ಇಂಗಳೆ, ವೀರೇಶ ಜಲಗಾರ, ಮಹೇಶ ಪಾಟೀಲ್, ಹೊನ್ನಪ್ಪ, ರಮಕೃಷ್ಣ, ಸುನೀಲ್ ಶೆಟ್ಟಿ, ಮಂಜುನಾಥ ಗಾಣಿಗೇರ, ನಾಗರಾಜ,ಶಿವರಾಜ ನಾಯಕ, ಜಂಗ್ಲಪ್ಪ, ಸೈಯದ್ ಮನ್ಸಲಾಪೂರ, ನರಿಸಿಂಹಲು ದಿನ್ನಿ,ಭಗವಂತ,ವೆAಕಟೇಶ, ರಂಗಪ್ಪ, ಶ್ರಿನಿವಾಸ, ಹುಸೇನಪ್ಪ, ನರೇಶ, ಹನುಮಂತ ಸೇರಿದಂತೆ ಅನೇಕರು ಭಾಗವಹಿಸಿದರು.