ರಾಯಚೂರು: ಮೇ-೪: ದೇಶದ ಜನತೆಯನ್ನು ಕಾರ್ಪೋರೇಟ್ ಶಕ್ತಿಗಳ ಜೀತದಾಳು ಮಾಡುವ ಶಕ್ತಿಯನ್ನು ಹಿಮ್ಮಟ್ಟಿಸಿ ಪ್ರಜಾಪ್ರಭುತ್ವ ಉಳಿಸಲು ಮತ ನೀಡುವ ಅವಶ್ಯಕತೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ನಗರದ ಖಾಸಗೀ ಹೋಟಲ್‌ನಲ್ಲಿ ಎದ್ದೇಳು ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಸಹಯೋದಲ್ಲಿ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನ ಆಶಯಗಳು ಉಳಿಯ ಬೇಕಾದರೆ ಜನರ ಬದುಕು ರೂಪಿಸುವ ಆಧಾರ ಅವಶ್ಯಕವಾಗಿದೆ. ಹೊರತು ಕಟ್ಟು ಕಥೆಗಳಿಂದಲ್ಲ ಎಲ್ಲಾ ಜಾತಿ ರೈತು, ಮಹಿಳೆಯರು, ಕಾರ್ಮಿಕರು ಸೇರಿ ಶೇ.೭೦ರಷ್ಟು ಬಹುಸಂಖ್ಯಾತರಿದ್ದಾರೆ. ಕೆಲವೇ ಕೆಲವರ ಹಿತಕ್ಕಾಗಿ ವ್ಯವಸ್ಥೆ ರೂಪಿತವಾಗಬಾರದು. ಕೇಂದ್ರ ಸರಕಾರ ಶೇ.೬೫ರಷ್ಟು ಮತ್ತು ರಾಜ್ಯ ಸರಕಾರ ಶೇ.೩೫ರಷ್ಟು ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಸರಕಾರ ರಾಜ್ಯಗಳ ಸಮಾನ ಅಭಿವೃದ್ದಿ ದೃಷ್ಠಿಕೋನ ದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ಮಲತಾಯಿ ಧೋರಣೆ ಪ್ರಜಾಪ್ರಭುತ್ವಕ್ಕೆ ಮಾರಕವೆಂದರು. ಕೇಂದ್ರ ದಿಂದ ರಾಜ್ಯಕ್ಕೆ ಬಿಡುಗಡೆಯಾಗಬೇಕಿರುವ ರಾಜ್ಯ ಪಾಲಿನ ಅನುದಾನ ಹಂಚಿಕೆ ಅನ್ಯಾಯದ ಕುರಿತು ವಿವರಿಸಿದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರದ ಉದ್ದೇಶ, ಕಳೆದ ವರ್ಷದ ಅವಧಿಯಲ್ಲಿ ದೇಶದ ಬಡವರು ಶ್ರಮಿಕರು ಮತ್ತು ದುಡಿಯುವ ವರ್ಗದ ಜನರ ಪಾಲು ಶ್ರೀಮಂತರ ಜೇಬಿಗೆ ಸೇರುತ್ತದೆ. ಅದರಲ್ಲಿ ರೈತರ ಪಾಲು ಕೂಡ ಎಂದರು. ಕೇಂದ್ರ ಬಿಜೆಪಿ ಸರಕಾರ ರೈತರ ಮೇಲೆ ದಬ್ಬಾಳಿಕೆ ನಡೆಸಿ ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಆದರೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಇಲ್ಲ, ರೈತರ ಹೋರಾಟಗಳನ್ನು ಬೆಂಬಲಿಸುತ್ತೇವೆ ಎಂದರು.
ರೈತರಿಗೆ ನ್ಯಾಯ ಒದಗಿಸಲುವ ಕೆಲಸ ಮಾಡುತ್ತೇವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಬಹುದೊಡ್ಡ ಸವಾಲ್ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಆಧಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಚಾಮರಾಜ ಪಾಲೀಪಾಟಿಲ್, ಪದ್ಮಾವತಿ, ಎದ್ದೇಳು ಕರ್ನಾಟಕ ಸಂಘಟನೆಯ ಕುಮಾರ ಸಮತಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಪೋರೇಟ್ ಶಕ್ತಿಗಳ ಜೀತದಾಳ ಮಾಡುವ ಶಕ್ತಿಯನ್ನು ಹಿಮ್ಮೆಟ್ಟಿಸಿ-ಕೃಷ್ಣ ಬೈರೇಗೌಡ
