ರಾಯಚೂರು:ಜು-8:
ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಕೊನೆ ಸ್ಥಾನಗಳಲ್ಲಿರುವ ಬ್ಲಾಕ್‌ಗಳ ಅಭಿವೃದ್ದಿಗೆ ರೂಪಿತವಾಗಿರುವ ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಬೇಕೆಂದು ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮದ ಕರ್ನಾಟಕ ನೂಡಲ್ ಅಧಿಕಾರಿ ಆಪ್ತ ಸಿಂಗ್ ಶ್ರಮಿಸಬೇಕೆಂದು ಕರೆ ನೀಡಿದರು.ಅವರು ಜು.೦೮ರ ಸೋಮವಾರ ದಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮದಡಿ ಜುಲೈ ೦೪ರಿಂದ ಸೆಪ್ಟೆಂಬರ್ ೩೦ರವರೆಗೆ ಮೂರು ತಿಂಗಳ ಸಂಪೂರ್ಣತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಸೇರಿ ಪ್ರಮುಖ ಐದು ವಲಯಗಳ ಅಭಿವೃದ್ದಿ ಹಿಂದುಳುವಿಕೆ ಆಧರದ ಮೇಲೆ ರಾಜ್ಯದ ಏಳು ಜಿಲ್ಲೆಗಳು ಆಯ್ಕೆ ಮಾಡಲಾಗಿದೆ.ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಎರಡೆರಡು ಬ್ಲಾಕ್‌ಗಳ ಗುರಿ ಸಾಧನೆಗೆ ಆಯ್ಕೆ ಮಾಡಲಾಗಿದೆ. ಮುಂದಿನ ಸೆಪ್ಟಂಬರ್ ತಿಂಗಳವರೆಗೆ ಸಿರವಾರ ಮತ್ತು ಮಸ್ಕಿ ಬ್ಲಾಕ್ ಗುರಿ ಸಾಧನೆಗೆ ಆಭಿಯಾನ ನಡೆಸುವ ಮೂಲಕ ಎಲ್ಲಾ ಹಂತದ ಅಧಿಕಾರಿಗಳು ತೊಡಗಿಸುವಿಕೆಯಿಂದ ಮಾತ್ರ ಬದಲಾವಣೆ ಸಾಧ್ಯವೆಂದರು.
ಆಶಾ,ಅಂಗನವಾಡಿ, ಶಿಕ್ಷಕರು ಹಾಗೂ ತಾ.ಪಂ.ಅಧಿಕಾರಿಗಳು ವಿಶೇಷವಾಗಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಕೊರತೆಗಳನ್ನು ನೀಗಿಸುವ ಮೂಲಕ ಫಲಿತಾಂಶ ಆಧಾರಿತ ಅಭಿವೃದ್ದಿಗೆ ತೊಡಗಿಸಿಕೊಳ್ಳಬೇಕೆಂದರು. ಅಪೌಷ್ಠಿಕತೆ, ಸುರಕ್ಷಿತ ಹೆರಿಗೆ, ರಕ್ತಹಿನತೆಯಂತಹ ಗಂಭೀರ ಆರೋಗ್ಯ ಸಮಸ್ಯೆ ನಿವಾರಣಗೆ ಜನರಲ್ಲಿ ಜಾಗೃತಿ ಮೂಡಸಬೇಕಾದ ಅವಶ್ಯಕತೆಯಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಮಾತನಾಡಿ ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮದಡಿಯಲ್ಲಿ ವಿವಿಧ ಇಲಾಖೆಗಳ ಆಯ್ದ ಸೂಚ್ಯಂಕಗಳಲ್ಲಿ ಶೇಕಡಾ ೧೦೦% ಪ್ರಗತಿ ಸಾಧಿಸುವ ಮೂಲಕ ಉತ್ತಮ ಸಾಧನೆ ಮಾಡಬೇಕೆಂದು ಹೇಳಿದರು.
ನೀತಿ ಆಯೋಗವು ದೇಶದಲ್ಲಿ ೧೧೨ ಜಿಲ್ಲೆÀಗಳು ಹಾಗೂ ೫೦೦ ತಾಲೂಕುಗಳನ್ನು ಗುರುತಿಸಿದ್ದು, ಅದರಲ್ಲಿ ರಾಯಚೂರಿನಿಂದ ಸಿರವಾರ ಹಾಗೂ ಮಸ್ಕಿ ೨ ತಾಲೂಕುಗಳು ಆಯ್ಕೆಯಾಗಿವೆ. ನೀತಿ ಆಯೋಗದ ಸೂಚ್ಯಂಕಗಳಾದ ಶಿಕ್ಷಣ, ಆರೋಗ್ಯ ಕೃಷಿ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ ಅವರು ಮಾತನಾಡಿ, ಆಯೋಗವು ಆಶೋತ್ತರ ವಲಯಗಳಲ್ಲಿ ಅಭಿವೃದ್ಧಿಯ ಮಾನದಂಡಗಳನ್ನು ಸಾಧಿಸುವ ಗುರಿಯನ್ನು ಸಂಪೂರ್ಣತಾ ಅಭಿಯಾನ ಹೊಂದಿದ್ದು, ರಾಯಚೂರು ಜಿಲ್ಲೆಯು ನೀತಿ ಆಯೋಗದ ಪಟ್ಟಿಯಲ್ಲಿದ್ದು ಮಹತ್ವಕಾಂಕ್ಷೆ ಯೋಜನೆಯಡಿ ಜಿಲ್ಲೆಗೆ ಜಿಲ್ಲಾ ಮಟ್ಟದಲ್ಲಿ ೪೧ ಪ್ಯಾರಾ ಮೀಟರ್, ತಾಲೂಕು ಮಟ್ಟದಲ್ಲಿ ೪೦ಪ್ಯಾರಾಮೀಟರ್ ನಿಗದಿಪಡಿಸಲಾಗಿದ್ದು, ಗ್ರಾಮಮಟ್ಟದಿಂದ ಸರಿಯಾಗಿ ಪ್ಯಾರಮೀಟರ್‌ವನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದುವ ಮೂಲಕ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆಯಿಂದ ಹೊರ ಬರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರ ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಚೇತನ್ ಕುಮಾರ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕಾಳಪ್ಪ ಬಡಿಗೇರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್., ಸಿಡಾಕ್ ಜಂಟಿ ನಿರ್ದೇಶಕರಾದ ಜಿ.ಯು. ಹುಡೇದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸ್ವ-ಸಹಾಯ ಗುಂಪಿನ ಮಹಿಳೆಯರು, ಆಶಾ ಕಾರ್ಯಕರ್ತೆಯರು ಇತರರು ಇದ್ದರು ಕಾರ್ಯಕ್ರಮದ ನಿರೂಪಣೆಯನ್ನು ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮದ ಜಿಲ್ಲಾ ಕಾರ್ಯಕ್ರಮದ ಅಧಿಕಾರಿಗಳಾದ ಮಹಮ್ಮದ್ ಯೂಸುಫ್ ಅವರು ಮಾಡಿದರು.