ಮಾನ್ವಿ: ತಾಲೂಕಿನ ಕಪಗಲ್ ಗ್ರಾಮದ ಬಸವಣ್ಣ ದೇವಸ್ಥಾನದ ಹತ್ತಿರ ರಾಜಶೇಖರಗೌಡ ಎನ್ನುವ ರೈತ ತನ್ನ 14 ಎಕರೆ ಜಮೀನಿನಲ್ಲಿ ಬೆಳೆದ ಜೋಳದ ತೆನೆಯ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಜಮೀನಿನಲ್ಲಿ ಸಂಗ್ರಹಿಸಲಾದ 250 ಚೀಲಕಿಂತ ಹೆಚ್ಚು ಜೋಳದ ತೆನೆ ಬೆಂಕಿಗೆ ಆವುತಿಯಾಗಿದ್ದು ಅಂದಾಜು15 ಲಕ್ಷ ರೂ. ನಷ್ಟವುಂಟಾಗಿದೆ.
ಕಪಗಲ್ ಗ್ರಾಮದ ಎನ್. ರಾಜಶೇಖರಗೌಡ ಎಂಬ ರೈತ ಜಮೀನಿನಲ್ಲಿ ಜೋಳದ ರಾಶಿ ಹಾಗೂ ಸಪ್ಪೆಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಅಧಿಕಾರಿಗಳು ಆಗಮಿಸಿ ಬೆಂಕಿ ನಂದಿಸಿದ್ದು.
ತಹಸೀಲ್ದಾರ ರಾಜು ಫಿರಂಗಿ ಹಾಗೂ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.