WhatsApp Group
Join Now
ಕಾರಟಗಿ ಆ.12
ಪಿಎಸ್‌ಐ ಪರುಶರಾಮ್ ಅನುಮಾನಾಸ್ಪದ ಸಾವಿನಲ್ಲಿ ಯಾದಗಿರಿಯ ಆಡಳಿತ ಪಕ್ಷದ ಶಾಸಕನಾಗಿರುವ ಚೆನ್ನಾರೆಡ್ಡಿ ಅವರ ಕೈವಾಡ ಇದ್ದು, ಸಿಒಡಿ ತನಿಖೆಯಿಂದ ಯಾವುದೇ ರೀತಿಯ ನ್ಯಾಯ ಸಿಗುವುದು ಅಸಾಧ್ಯ, ಆ ಕಾರಣಕ್ಕೆ ಪ್ರಕರಣವನ್ನು ಸಿಬಿಐ ಒಪ್ಪಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ತಾಲೂಕಿನ ಸೋಮನಾಳ ಗ್ರಾಮದ ಮೃತ ಪಿಎಸ್‌ಐ ಪರಶುರಾಮ್ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಆತಂಕ ವ್ಯೆಕ್ತಪಡಿಸಿದ ಅವರು ರಾಜ್ಯ ಗೃಹ ಸಚಿವರು ಈ ದಲಿತ ಕುಟುಂಬಕ್ಕೆ ಸೇರಿದ ಈ ಮೃತ ಪಿಎಸ್‌ಐ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಆ ನ್ಯಾಯ ಸ್ಥಳೀಯ ಪೊಲೀಸ್ ತನಿಖಾಧಿಕಾರಿಗಳಿಂದ ಸಿಗುವುದು ಅಸಾಧ್ಯ. ಅನುಮಾನಾಸ್ಪದ ಸಾವು ನಡೆದು ೧೧ ದಿನಗಳು ದಾಟಿದರು. ಇಲ್ಲಿಯವರೆಗೂ ಮೃತ ಪಿಎಸ್‌ಐ ಕುಟುಂಬ ಏನು ಸಾವಿಗೆ ಆಡಳಿತ ಪಕ್ಷದ ಶಾಸಕರೇ ಕಾರಣ, ಅವರು ವರ್ಗಾವಣೆಯಲ್ಲಿ ಹಣ ಕೇಳಿದ್ದೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ. ಇಷ್ಟೆಲ್ಲಾ ಆರೋಪಗಳಿದ್ದರೂ ಇನ್ನು ಕೂಡಾ ಶಾಸಕರು ಮತ್ತು ಆತನ ಮಗನ ಬಂಧನವಾಗಿಲ್ಲ ಎಂದರೆ ನಾಚಿಕೆಗೇಡಿನ ಸಂಗತಿ. ತಮ್ಮದೇ ಸಮುದಾಯದ ಒಬ್ಬ ಪ್ರಾಮಾಣಿಕ ಅಧಿಕಾರಿಯ ಅನುಮಾನಾಸ್ಪದ ಸಾವಿಗೆ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸ್ಪಂಧಿಸಿದ ರೀತಿ ಮಾತ್ರ ಸರಿಯಾಗಿಲ್ಲ. ೧೧ ದಿನಗಳು ಕಳೆದರೂ ಸಂಕಷ್ಟದಲ್ಲಿರುವ ಆ ಕುಟುಂಬಕ್ಕೆ ಇನ್ನೂ ೫೦ಲಕ್ಷ ಪರಿಹಾರ ಮುಟ್ಟಿಲ್ಲ. ಇನ್ನು ನಿಷ್ಪಕ್ಷಪಾತ ತನಿಖೆಗೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೇಳಿದರೆ, ಗೃಹ ಸಚಿವರು ಮಾತ್ರ ಅತ್ಯಂತ ಬೇಜವಾಬ್ದಾರಿತನದ ಮತ್ತು ಅಹಂಕಾರದ ಮಾತುಗಳನ್ನಾಡಿ ಇಲ್ಲಿಂದ ತೆರಳಿದ್ದಾರೆ. ಕೂಡಲೇ ಗೃಹ ಸಚಿವರು ಪ್ರತಿಷ್ಠೆಯನ್ನು ಬದಿಗೆ ಸರಿಸಿ ಪ್ರಕರಣ ಸಿಬಿಐ ಒಪ್ಪಿಸಿದರೆ ಮಾತ್ರ ಆರೋಪಿ ಸ್ಥಾನದಲ್ಲಿರುವ ಆಡಳಿತ ಪಕ್ಷದ ಶಾಸಕನ ವಿರುದ್ಧ ನಿಷ್ಪಪಕ್ಷಪಾತವಾದ ತನಿಖೆ ಸಾಧ್ಯ. ಇಲ್ಲದಿದ್ದರೆ ನಿಮ್ಮ ಪಕ್ಷದ ಶಾಸಕನ ವಿರುದ್ಧವೇ ನೀವು ಪ್ರಾಮಾಣಿಕ ರೀತಿಯಲ್ಲಿ ತನಿಖೆ ಮಾಡಿ ನೋವಿನಲ್ಲಿರುವ ಕುಟುಂಬಕ್ಕೆ ನೀವು ನ್ಯಾಯ ನೀಡುತ್ತೀರಿ ಎಂದು ನಾವು ಭಾವಿಸುವುದಾದರೂ ಹೇಗೆ. ಅದರಲ್ಲೂ ಪ್ರಕರಣವನ್ನು ಹಳ್ಳ ಹಿಡಿಸುವುದರಲ್ಲಿ ನೀವು ನಿಸ್ಸೀಮರು ತಾನೇ ಎಂದು ಇತ್ತೀಚಿಗೆ ವಾಲ್ಮೀಕಿ ಪ್ರಕರಣದಲ್ಲಿ ಸಚಿವ ನಾಗೇಂದ್ರ, ಶಾಸಕ ಬಸನಗೌಡ ದದ್ದಲ್‌ರನ್ನು ನೀವು ಪ್ರಕರಣದಿಂದ ಹೊರತಂದಿರುವುದೇ ಸಾಕ್ಷಿ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜ ದಢೇಸೂಗೂರು, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಮುಖಂಡರಾದ ಬಸವರಾಜ್ ಕ್ಯಾವಟರ್, ಶರಣು ತಳ್ಳಿಕೇರಿ, ನಾಗರಾಜ್ ಬಿಲ್ಗಾರ್, ಅಮರೇಶ್ ಕುಳಗಿ, ರಮೇಶ್ ನಾಡಿಗೇರ್ ಜೂರಟಗಿ, ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ, ಶಿವಶರಣೇಗೌಡ ಯರಡೋಣಾ, ಪ್ರಭು ಬೂದಿ, ಉಮೇಶ್ ಭಂಗಿ, ಪುರಸಭೆ ಸದಸ್ಯ ಬಸವರಾಜ್ ಕೊಪ್ಪದ್, ಬಸವರಾಜ್ ಎತ್ತಿನಮನಿ, ರವಿಸಿಂಗ್ ಯರಡೋಣ, ಮಂಜುನಾಥ್ ಹೊಸಕೇರಿ, ರತ್ನಕುಮಾರಿ, ಪ್ರಿಯಾಂಕ ಪವಾರ್, ಹುಲಿಗೆಮ್ಮ ನಾಯಕ್, ಶರಣಬಸವರೆಡ್ಡಿ, ದೇವರಾಜ್ ನಾಯಕ್, ಶಿವಶರಣಪ್ಪ ಶಿವಪೂಜಿ, ಹನುಮಂತಪ್ಪ ಕಬ್ಬೇರ್, ಆದಿಲ್‌ಭಾಷಾ ಮಸ್ಟೂರು, ಶ್ರೀಶೈಲಗೌಡ ಚಳ್ಳೂರು ಇನ್ನಿತರರು ಇದ್ದರು.