ರಾಯಚೂರು: ಸೆ.1-
ಕಂದಾಯ ಇಲಾಖೆಯ ವಿವಿಧ ಯೋಜನೆಗಳಾದ ಬೆಳೆ ಹಾನಿ,ವಿಪತ್ತು ನಿರ್ವಹಣೆ ಸೇರಿದಂತೆ ಇನ್ನೀತರ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ಜಿಲ್ಲೆ ರಾಜ್ಯದಲ್ಲಿ ಮುಂಚೂಣಿಯಲ್ಲಿ ತರಲು ಎಲ್ಲಾ ಹಂತದ ಅಧಿಕಾರಿಗಳು ಶ್ರಮಿಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಯಲ್ಲಪ್ಪ ಭಜಂತ್ರಿ ಹೇಳಿದರು.
ಜಿ.ಪಂ.ಸಭಾAಗಣದಲ್ಲಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿಮಾತನಾಡಿ, ಹಿಂದುಳಿದ ಜಿಲ್ಲೆಯ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯನ್ನು ಬದಾಲಾಯಿಸಲು ಎಲ್ಲಾ ಹಂತದ ಅಧಿಕಾರಿಗಳು ತೊಡಗುಸುವಿಕೆ ಮಹತ್ವದ್ದಾಗಿದೆ. ಅನ್‌ಲೈನ್ ಮೂಲಕ ಜಾರಿಗೊಳಿಸಬೇಕಾದ ಯೋಜನೆಗಳಲ್ಲಿ ಗ್ರಾಮಲೆಕ್ಕಾಧಿಕಾರಿ, ಗ್ರಾಮಸೇವಕರಿಂದ ಹಿಡಿದು ವಿಭಾಗದ ಮಟ್ಟದ ಎಲ್ಲಾ ಅಧಿಕಾರಿಗಳು ಒಗ್ಗೂಡಿ ಕಾರ್ಯನಿರ್ವಹಿಸದಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಮುಂಚೂಣಿಯಲ್ಲಿ ಬರುವಲ್ಲಿ ಸಂಶಯವಿಲ್ಲ, ಆಧಾರ ಜೋಡಣೆಯಲ್ಲಿ ಈಗಾಗಲೇ ಪ್ರತಿಶತ ೬೧ರಷ್ಟು ಸಾಧನೆಯಾಗಿದ್ದು, ಅನೇಕರು ನೂರಕ್ಕೆ ನೂರರಷ್ಟು ಸಾಧನೆಯನ್ನು ಸಾಧಿಸಿದ್ದಾರೆ.
ಬೆಳೆಹಾನಿ, ಪರಿಹಾರ ವಿತರಣೆ, ಕಂದಾಯ ದಾಖಲೆಗಳ ನಿರ್ವಹಣೆ ಒಳಗೊಂಡAತೆ ಎಲ್ಲಾವೂ ಆನ್‌ಲೈನ್ ಮೂಲಕ ನಿರ್ವಹಿಸುತ್ತಿರುವದರಿಂದ ಮತ್ತಷ್ಟು ಕ್ರಿಯಾಶೀಲರಾಗಿ ಕಾಹರ್ಯನಿರ್ವಹಿಸುವ ಅವಶ್ಯಕತೆಯಿದೆ. ಒತ್ತಡ ದಿಂದ ಕೆಲಸ ಮಾಡುವ ಬದಲು ನಿರಾಳವಾಗಿ ಎಲ್ಲಾ ಯೋಜನೆಗಳ ಪ್ರಗತಿಯನ್ನು ದಾಖಲಿಸಲು ಶ್ರಮಿಸಬೇಕು, ಏನೇ ಸಂಶಯಗಳಿದ್ದರೂ ನಿವಾರಿಸಿಕೊಂಡು ನಿಗಧಿತ ಗುರಿ ಸಾಧಿಸಬೇಕೆಂದರು.
ತಹಶೀಲ್ದಾರ್ ಸುರೇಶ ವರ್ಮ ಮಾತನಾಡಿ, ಕಂದಾಯ ಇಲಾಖೆ ಎಲ್ಲಾ ಇಲಾಖೆಗಳಿಗೆ ಮಾತೃ ಇಲಾಖೆಯಾಗಿದ್ದು ಗ್ರಾಮ ಲೆಕ್ಕಗರಿಂದ ಹಿಡಿದ ಎಲ್ಲಾ ಹಂತದ ಅಧಿಕಾರಿಗಲು ತೊಡಗಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಮತ್ತಷ್ಟು ಚುರುಕ್ಕಾಗಿ ಕಾರ್ಯನಿರ್ವಹಿಸದಲ್ಲಿ ಜಿಲ್ಲೆ ರ‍್ಯಾಂಕಿAಗ್ ಬದಲಾಗಲು ಸಾಧ್ಯವಿದೆ. ಭೂಮಿ ತಂತ್ರಾAಶ ಸೇರಿದಂತೆ ವಿಪತ್ತು ನಿರ್ವಹಣೆ, ಬೆಳೆ ಪರಿಹಾರ ೧-೫ ದಾಖಲೆಗಳ ನಿರ್ವಹಣೆ ಎಲ್ಲರ ಸಹಕಾರ ಅಗತ್ಯವಾಗಿದೆ. ಕಾರ್ಯಾಗಾರದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇAದರು.
ವೇದಿಕೆ ಮೇಲೆ ಸಹಾಯಕ ಆಯುಕ್ತೆ ಮಹಿಬೂಬಿ, ತಹಶೀಲ್ದಾರರಾದ ಚನ್ನಪ್ಪ ಘಂಟಿ ಸೇರಿದಂತೆ ವಿವಿಧ ತಾಲೂಕಗಳ ತಹಶೀಲ್ದಾರ್‌ರು, ಗ್ರಾಮಲೆಕ್ಕಾಧಿಕಾರಿಗಳು,ಶಿರೆಸ್ತೇದಾರರು, ಕಂದಾಯ ನಿರೀಕ್ಷಕರು ಉಪಸ್ಥಿತರಿದ್ದರು.