ರಾಯಚೂರು ನಗರ ಜನರ ವಾಸಕ್ಕೆ ಯೋಗ್ಯ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ – ಡಿ.ಸಿ.ನಿತೀಶ

Eshanya Times

ರಾಯಚೂರು,ಆ.16:- ರಾಜ್ಯದ ವಿವಿಧ ನಗರ ಮತ್ತು ಪಟ್ಟಣದಲ್ಲಿ ನಾನು ಕೆಲಸ ಮಾಡಿದ್ದು, ನಾನು ನೋಡಿದಂತೆ ರಾಯಚುರು ನಗರ ಅಚ್ಚತೆಯ ಅಗರವಾಗಿದ್ದು, ರಾಜ್ಯದಲ್ಲಿಯೇ ಇಷ್ಟು ಗಲಿಜು ನಗರ ನೋಡಿಲ್ಲವೆಂದು ನಗರಸಭೆಯ ಆಡಳಿತಾಧಿಕಾರಿಗಳು ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಕಳವಳ ವ್ಯಕ್ತಪಡಿಸಿದರು.ಅವರು ಆ.೧೬ರ ಶುಕ್ರವಾರ ದಂದು ನಗರದ ನಗರಸಭೆಯ ಸಭಾಂಗಣದಲ್ಲಿ ನಗರಸಭೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ರಾಯಚೂರನ್ನು ವಾಸಕ್ಕೆ ಯೋಗ್ಯ ನಗರ ಮಾಡುವ ಜವಾಬ್ದಾರಿ ಜನಪ್ರತಿನಿಧಿಗಳು,ಅಧಿಕಾರಿಗಳು ಮತ್ತು ನಗರಸಭೆ ಸಿಬ್ಬಂದಿ ಮೇಲಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗ್ಯವಾಗಿದೆ ಎಂದರು.

ನಗರದ ಕುಡಿಯುವ ನೀರಿನ ಸಮಸ್ಯೆಗೆ ಸಂಭAದಿಸಿದAತೆ ಚರ್ಚೆ ನಡೆದು, ರಾಂಪೂರ ಕೆರೆಯಲ್ಲಿ ಒಂದು ತಿಂಗಳ ನೀರು ಪೂರೈಕೆ ಮಾಡುವಷ್ಟು ನೀರು ಇದೆ ಎಂದು ಮಾಹಿತಿ ನೀಡಿದರು.
ಹಿರಿಯ ಸದಸ್ಯ ಜಯಣ್ಣ ಮಾತನಾಡಿ, ರಾಂಪೂರ ಜಲಾಶಯದಲ್ಲಿ ನೀರಿನ ಕೊರತೆ ಇದೆ. ಮೂರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ನಿರ್ವಹಣೆ ಕೊರತೆಯಿಂದ ನೀರಿನ ಸಮಸ್ಯೆ ನಗರದಲ್ಲಿ ತೆಲೆದೂರಿದೆ ಎಂದು ಹೇಳಿದರು. ನಗರಸಭೆಯಲ್ಲಿ ೩೫ ಜನ ಸದಸ್ಯರಿಂದ ಸಮರ್ಪಕವಾಗಿ ನೀರು ಜನತೆಗೆ ನೀಡುತ್ತಿಲ್ಲವೆಂದು ಜನರ ಟೀಕೆಗೆ ಗುರಿಯಾಗುತ್ತಿದ್ದೇವೆ ಎಂದು ಹೇಳಿದರು. ಒಂದು ದಿನ ಬಿಟ್ಟು ಒಂದು ದಿನ ನೀರು ಪೂರೈಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನೀರು ಸೋರಿಕೆಯಾಗುತ್ತಿದ್ದು, ಇದರ ಬಗ್ಗೆ ತಾಂತ್ರಿಕ ಇಲಾಖೆ ನಿಗಾವಹಿಸುತಿಲ್ಲವೆಂದರು. ಇನ್ನೂ ಏಳ ರಿಂದ ಎಂಟು ಟ್ಯಾಂಕ್‌ಗಳಿ ನೀರು ತುಂಬುತ್ತಿಲ್ಲವೆAದು ಸಭೆಯ ಗಮನಕ್ಕೆ ತಂದರು. ಸಮರ್ಪಕ ನೀರು ಇದ್ದರೂ ಬಳಕೆಯಲ್ಲಿ ಎಡುವುತ್ತಿದ್ದೇವೆಂದರು. ಜಲ ಮಂಡಳಿ ಮತ್ತು ನಗರಸಭೆ ಅಧಿಕಾರಿಗಳ ಜಂಟಿ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆAದರು.

ವಿಧಾನ ಪರಿಷತ ಸದಸ್ಯ ಎ.ವಸಂತ ಕುಮಾರ ಮಾತನಾಡಿ, ಸಮರ್ಪಕ ನೀರು ಇದೆ, ಪೂರೈಕೆಗೆ ವಿದ್ಯುತ್ ಸಮಸ್ಯೆಇಲ್ಲ, ಮೋಟರ್‌ಗಳ ಕೊರತೆ ಇಲ್ಲಾ ಆದರೆ ಜನರಿಗೆ ನೀರು ಸಿಗುತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸದರು. ನಗರಸಭೆಯಿಂದ ಯಾವ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ ಎಂಬುದವರ ಬಗ್ಗೆ ಸಭೆಗೆ ಅಧಿಕಾರಿಗಳು ಮಾಹಿತಿ ನೀಡಬೇಕೆಂದರು.
ಸದಸ್ಯ ನರಸಿಂಹ ರೆಡ್ಡಿ ಮಾತನಾಡಿ, ಖಾಸಗೀ ಇಂಡಸ್ಟಿçÃಗಳಾದ ಶಿಲ್ಪ ಸೇರಿದಂತೆ ಅನೇಕ ಇಂಡಸ್ಟಿçÃಗಳಿಗೆ ಶುದ್ದೀಕರಿಸಿದ ನೀರು ಪೂರೈಕೆ ಮಾಡಲಾಗುತ್ತಿದೆ. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾವಿಲ್ಲವೆಂದರು.

ಸದಸ್ಯ ನಾಗರಾಜ ಮಾತನಾಡಿ, ನೀರಿನ ಸಮಸ್ಯೆಗೆ ಮೂಲ ಕಾರಣ ನೀರು ನಿರ್ವಹಣೆ ಮಾಡುವ ಅಪರೇಟರ್‌ಗಳಾಗಿದ್ದು, ಅವರು ಸರಿಯಾಗಿ ಕೆಲಸ ಮಾಡಿದರೇ ಮಾತ್ರ ನಗರಕ್ಕೆ ಸರಿಯಾಗಿ ನೀರು ಪೂರೈಸಬಹುದೆಂದರು.
ಜಿಲ್ಲಾಧಿಕಾರಿ ನಿತೀಶ ಅವರು ಮಾತನಾಡಿ, ವರ್ಷದ ೩೬೫ದಿನಗಳ ಕಾಲ ಸೇವೆಮಾಡಿ, ಉತ್ತಮ ಕಾರ್ಯನಿರ್ವಹಣೆ ಮಾಡಬೇಕು. ಅದಕ್ಕಾಗಿ ಜನರು ನಮಗೆ ಅವಕಾಶ ನೀಡಿದ್ದು, ಆ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಯಚೂರು ಜಿಲ್ಲೆಯು ಸ್ವಚ್ಛ ಹಾಗೂ ಅಭಿವೃದ್ಧಿ ನಗರಕ್ಕಾಗಿ ಶ್ರಮಿಸಬೇಕು. ಇದಕ್ಕಾಗಿ ನಗರದ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು. ಈ ಕಾರ್ಯದಲ್ಲಿ ನಗರಸಭೆಯ ಸದಸ್ಯರ ಜವಾಬ್ದಾರಿ ಪ್ರಮುಖವಾಗಿದೆ ಎಂದರು.

ಯಾವುದೇ ನಗರ ಅಭಿವೃದ್ಧಿ ಆಗಬೇಕಾದರೆ ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಅಧಿಕಾರಿಗಳಿಂದ ಹಿಡಿದು ಸಿಬ್ಬಂದಿಗಳುವರೆಗೂ ಶ್ರಮಿಸಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ರಾಯಚೂರು ನಗರಕ್ಕೆ ಕೃಷ್ಣಾ ನದಿ ಹಾಗೂ ರಾಂಪುರ್ ಜಲಾಶಯದಿಂದ ಕುಡಿಯುವ ನೀರು ಸರಾಬರಾಜ ಮಾಡಲಾಗುತ್ತಿದ್ದು, ನೀರು ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ. ನೀರು ಸರಬರಾಜು ಕುರಿತು ಕೆಲ ತಾಂತ್ರಿಕ ಸಮಸ್ಯೆಗಳಿವೆ. ಅವುಗಳನ್ನು ಅತಿ ಶೀಘ್ರದಲ್ಲೇ ಬಗೆಹರಿಸಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ನಗರದಲ್ಲಿ ಕುಡಿಯುವ ನೀರು ನಿರ್ವಹಣೆ ಕ್ರಮಬದ್ಧತೆ ಮತ್ತು ಕನಿಷ್ಠ ೨-೩ವಾರ್ಡ್ಗಳಿಗೆ ಮುಂದಿನ ೧೦ದಿನಗಳಲ್ಲಿ ದಿನದ ೨೪ಗಂಟೆಗಳ ಕಾಲ ನಿರಂತರ ಕುಡಿಯುವ ನೀರು ಪೂರೈಕೆ ಪ್ರಯೋಗಕ್ಕಾಗಿ ನಗರಸಭೆಯ ಹಿರಿಯ ಸದಸ್ಯರ ಹಾಗೂ ಇಂಜಿನಿಯರಿAಗ್ ವಿಭಾಗದ ತಂಡ ರಚಿಸಿ ಪ್ರಾಯೋಗಿಕ ಕಾರ್ಯನಿರ್ವಹಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ನಗರಸಭೆಯ ವ್ಯಾಪ್ತಿಯ ವಾರ್ಡ್ಗಳಲ್ಲಿ ಬೀದಿ ದೀಪಗಳ ಸಮಸ್ಯೆಗಳನ್ನು ಕಡಿಮೆ ಮಾಡಲು ಹಾಗೂ ನಗರದ ಸೌಂದರ್ಯಕ್ಕಾಗಿ ನಗರಸಭೆಯ ಎಲ್ಲಾ ವಾರ್ಡ್ಗಳಲ್ಲಿ ಲೈಟ್ ವ್ಯವಸ್ಥೆ ಮಾಡಲು ನಗರಸಭೆಯ ಸೇವಿಂಗ್ ಅಮೌಂಟ್‌ನಲ್ಲಿ ಟೆಂಡರ್ ಕರೆಯಲು ಈಗಾಗಲೇ ತೀರ್ಮಾನ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ ಎಂದು ನಗರಸಭೆಯ ಪೌರಾಯುಕ್ತರು ಸಭೆಗೆ ಮಾಹಿತಿ ನೀಡಿದರು.

ನಗರಸಭೆಯ ಎಲ್ಲ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗಾಗಿ ಗುಣಮಟ್ಟದ ಕಾಮಗಾರಿಯಾಗಿ ಪೂರ್ಣಗೊಳ್ಳಿಸಬೇಕು. ನಗರಸಭೆಯ ಮಳಿಗೆಗಳ ಹರಾಜು ನಿಯಮದಂತೆ ಮಾಡಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ನಗರಸಭೆಯ ಆಡಳಿತಾಧಿಕಾರಿಗಳು ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಮಳೆಗಾಲ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯ ಎಲ್ಲಾ ರಾಜ್ಯಕಾಲವೇಗಳ ಸ್ವಚ್ಛ ಕಾರ್ಯವನ್ನು ಕೈಗೊಳ್ಳಬೇಕು. ಅಲ್ಲದೆ ಜನಸಂಖ್ಯೆಗೆ ಅನುಗುಣವಾಗಿ ನಗರಸಭೆಯಲ್ಲಿ ಪೌರಕಾರ್ಮಿಕರು ಇಲ್ಲ ಪೌರಕಾರ್ಮಿಕರ ನೇಮಕಾತಿಗಾಗಿ ಸ್ವಂತ ಆದಾಯ ಹೆಚ್ಚಳ ಆಗಬೇಕು ಆ ನಿಟ್ಟಿನಲ್ಲಿ ಅಧಿಕಾರಿಗಳು ಸ್ವಂತ ಆದಾಯವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಸಾಜೀದ್ ಸಮೀರ್, ಶ್ರೀನಿವಾಸ ರೆಡ್ಡಿ, ದರರೂ ಬಸವರಾಜ್, ಬಿ.ರಮೇಶ ಎಂ.ಪವನ್ ಕುಮಾರ, ಮಹ್ಮದ್ ಹೈಫಿರೋಜ್ ಹಮರಾಜ್ ಹಾಗೂ ರಾಯಚೂರು ನಗರಸಭೆಯ ಪೌರಾಯುಕ್ತರಾದ ಗುರುಸಿದ್ದಯ್ಯ ಸ್ವಾಮಿ ಹಿರೇಮಠ, ತಾಂತ್ರಿಕ ವಿಭಾಗದ ಅಧಿಕಾರಿಗಳಾದ ನವೀನ್ ಕುಮಾರ್, ರಾಹುಲ್, ಮೂರ್ತಿ, ಮಲ್ಲಿಕಾರ್ಜುನ ಸೇರಿದಂತೆ ನಗರಸಭೆಯ ಅಧಿಕಾರಿಗಳು ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";