ರಾಯಚೂರು: ನಗರಸಭೆ ಜನಪ್ರತಿನಿಧಿಗಳು ಇಲ್ಲದೇ ಕೇಲವ ಅಧಿಕಾರಿಗಳಿಂದ ನಡೆಯುವುದು ಕಷ್ಟದ ಕೆಲಸವಾಗಿದ್ದು, ನಗರದ ಅಭಿವೃದ್ದಿಗೆ ಪಕ್ಷ ಬೇದ ಮೆರತು ಎಲ್ಲರೂ ಶ್ರಮಿಸುವುದು ಅಗತ್ಯವಿದೆ ಎಂದು ಸಚಿವ ಎನ್.ಎಸ್.ಬೋಸರಾಜ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಂತರ ಸುದ್ದಿಗಾರೊಂದಿಗೆ ಮಾತನಾಡಿ, ನಗರದ ಅಭಿವೃದ್ದಿಗೆ ನಾನು ಸಂಸದ ಕುಮಾರ ನಾಯಕ ಮತ್ತು ವಿಧಾನ ಪರಿಷತ ಸದಸ್ಯ ವಸಂತ ಕುಮಾರ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕೆಕೆಆರ್‌ಡಿ ಸೇರಿದಂತೆ ಸರಕಾರ ದಿಂದ ಅನುದಾನ ತರುವ ಮೂಲಕ ನಗರದ ಅಭಿವೃದ್ದಿಗೆ ಶ್ರಮಿಸಲಾಗುವುದೆಂದರು. ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತರೆಂಬ ಭರವಸೆ ಇದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರ ನಾಯ, , ನೂತನ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಉಪಾಧ್ಯಕ್ಷ ಸಾಜೀದ್ ಸಮೀರ್,ಸದಸ್ಯರಾದ ಜಯಣ್ಣ,ಬಿ.ರಮೇಶ,ಜಿಂದಪ್ಪ,ಎ0.ಪವನ್‌ಕುಮಾರ,ಶ್ರೀನಿವಾಸ ರೆಡ್ಡಿ,ಕಾಂಗ್ರೆಸ್ ಮುಖಂಡ ಮಹ್ಮದ್ ಶಾಲಂ, ಬಸೀರುದ್ದೀನ್ ಉಪಸ್ಥಿತರಿದ್ದರು.
ನಗರದ ಅಭಿವೃದ್ದಿಗೆ ಪಕ್ಷಬೇದ ಮರೆತು ಶ್ರಮಿಸಬೇಕು-ಸಚಿವ ಬೋಸರಾಜ
WhatsApp Group
Join Now