ರಾಯಚೂರು: ಆ-೫: ಮುಖ್ಯ ಮಂತ್ರಿ ಸಿದ್ದರಾಮಯಹ್ಯ ವಿರುದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜಕೀಯ ಷಡ್ಯಂತ್ರ ಮಾಡಿ ಅವರ ತೇಜೋವದೆ ಮಾಡುವ ಕೃತ್ಯಕ್ಕೆ ಕೈ ಹಾಕಿದ್ದು, ಈ ಕೃತ್ಯವನ್ನು ವಿರೋಧಿಸಿ ಅಹಿಂದ್ ವರ್ಗಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತದಲ್ಲಿ ಪ್ರತಿಭಟನಾ ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಮುಖ್ಯ ಮಂತ್ರಿಗಳ ಜನಪ್ರಿಯತೆ ಸಹಿಸದೆ ಷಡ್ಯಂತ್ರ ಮಾಡುತ್ತಿರುವ ಬಿಜೆಪಿ,ಜೆಡಿಎಸ್ ಪಕ್ಷಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ರಾಜ್ಯ ಸರಕಾರವನ್ನು ಆಸ್ತಿತರಗೊಳಿಸಲು ಹೊರಟಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿದರು. ಕೋಮುವಾದಿಗಳು ಮತ್ತು ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳು ಆಧಿಕಾರದ ಆಸೆಗಾಗಿ ಜನಪರ ರಾಜ್ಯ ಸರಕಾರವನ್ನು ಆಸ್ಥಿರಗೊಳಿಸಲು ಯತ್ನಿಸುತ್ತಿವೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೊಡ್ಡ ಷಡ್ಯಂತ್ರ ರೂಪಿಸಿದ್ದಾರೆಂದು ಆರೋಪಿಸಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕ, ೧೫ ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವ ಸೇರಿದಂತೆ ೪೦ ವರ್ಷಗಳ ಸುಧೀರ್ಘ ರಜಕೀಯದಲ್ಲಿ ಹಲವು ಮಹತ್ವದ ಆಧಿಕಾರದ ಹುದ್ದೆಯಲ್ಲಿ ಇದ್ದರೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ನಾಯಕರಾಗಿದ್ದಾರೆ. ಸಿದ್ದರಾಮಯ್ಯನವರ ವರ್ಚಸ್ಸಿಗೆ ಮಸಿ ಬಳಿದು ಅವನರನು ರಾಜಕೀಯವಾಗಿ ಮುಗಿಸಲು ಹುನ್ನಾರ ನೆಡೆಸಿದ್ದಾರೆಂದು ದೂರಿದರು. ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ನಾಯಕರ ಕುತಂತ್ರಕ್ಕೆ ಬಿಜೆಪಿ ರಾಷ್ಟಿçÃಯ ನಾಯಕರು ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿದರು. ರಾಜ್ಯಪಾಲರ ಮುಖಾಂತರ ರಾಜ್ಯ ಸರಕಾರವನ್ನು ಅಸ್ಥಿತರಗೊಳಿಸಲು ಕೇಂದ್ರ ಸರಕಾರ ಪಿತೂರಿ ನಡೆಸಿದೆ ಎಂದು ಆರೋಪಿಸಿದರು. ರಾಜ್ಯ ಸರಕಾರವನ್ನು ಆಸ್ತಿರಗೊಳಿಸುವುದನ್ನು ಸಿದ್ದರಾಮಯ್ಯರನ್ನು ದುರ್ಬಲಗೊಳಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರಕಾರ ಮಂತ್ರಿ ಪರಿಷತ್ ಮತ್ತು ರಾಜ್ಯ ಸರಕಾರ ಪ್ರಧಾನ ಕಾರ್ಯದರ್ಸಿಗಳು ಸಮಗ್ರ ವರದಿಯನ್ನು ಪರಗಿಣಿಸಿ ಇಲ್ಲಿಗೆ ಮುಡಾ ವಿಚಾರವನ್ನು ಮುಕ್ತಾಯಗೊಳಿಸಬೇಕು, ವಿನಾಕರಣ ಟಾರ್ಗೆಟ್ ಮಾಡಿ ಸಿಲುಕಿಸುವ ಷಡ್ಯಂತ್ರ, ಕುತಂತ್ರ ಮಾಡುವುದ ಮುಂದುವರೆದಲ್ಲಿ ಶೀಘ್ರದಲ್ಲಿ ರಾಜಭವನ ಚಲೋ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ, ಮುಖಂಡರಾದ ಮಹ್ಮದ್ ಶಾಲಂ, ಸಾಜೀದ್ ಸಮೀರ್, ಮೌಲಾನಾ ಫರೀದ್ ಖಾನ್, ಖಾಜನಗೌಡ, ಡಾ.ರಝಕ್ ಉಸ್ತಾದ್, ನರಸಿಂಹಲು ಮಾಡಗಿರಿ, ಜಿ.ಶಿವಮೂರ್ತಿ, ಕೆ.ಬಸವಂತಪ್ಪ, ಬಸವರಾಜ,ಸಿದ್ದಪ್ಪ ಭಂಡಾರಿ, ಜಯಣ್ಣ, ಎಂ.ಹುಸೇನ್ಪ÷್ಪ, ನಾಗರಾಜ,ಎಂ.ಬಸನಗೌಡ, ರುದ್ರಪ್ಪ ಅಂಗಡಿ, ನಾಗೇಂದ್ರಪ್ಪ ಮಟಮಾರಿ, ಬೇವಿನ ಬೂದೆಪ್ಪ, ಪಾಗುಂಟಪ್ಪ, ಜಿ.ವೆಂಕಟೇಶ, ಮಡಿವಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಿ.ಎಂ. ಸಿದ್ದರಾಮಯ್ಯ ವಿರುದ್ದ ಬಿಜೆಪಿ,ಜೆಡಿಎಸ್ ರಾಜಕೀಯ ಷಡ್ಯಂತ್ರ ವಿರೋಧಿಸಿ ಅಹಿಂದ ವರ್ಗಗಳ ಒಕ್ಕೂಟ ಪ್ರತಿಭಟನೆ
WhatsApp Group
Join Now