ರಾಯಚೂರು:
ಗಣೇಕಲ್ ಜಲಾಶಯ ದಿಂದ ನಗರಕ್ಕೆ ನೀರು ಪೂರೈಕೆ ಮಾಡುವ ರಾಂಪೂರ ಕೆರೆಗೆ ನೀರು ಹರಿಸಿದ್ದು, ರಾಂಪೂರ ಕೆರೆಗೆ ಶಾಸಕ ಡಾ.ಶಿವರಾಜ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾರ್ವಜನಿಕರು ನೀರುನ್ನು ಕಾಯಿಸಿ ಸೋಸಿ ಕುಡಿಯಬೇಕೆಂದು ಮನವಿ ಮಾಡಿದರು. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೀರಿನ ಸಮಸ್ಯೆ ಪರಿಹಾರಿಸಲು ಗಣೇಕಲ್ ಜಲಾಶಯ ದಿಂದ ರಾಂಪೂರ ಕೆರೆಗೆ ನೀರು ಹರಿಸಲಾಗಿದೆ. ಕೆರೆ ತುಂಬಿಸುವ ಕಾರ್ಯ ನಡೆದಿದೆ. ರಾಂಪೂರ ಕೆರೆ ನೀರು ಅವಲಂಬಿತ ವಾರ್ಡಗಳ ನಿವಾಸಿಗಳು ನೀರನ್ನು ಕುದಿಸಿ ಆರಿಸಿ ನಂತರ ಸೊಸಿ ಕುಡಿಯಬೇಕು. ಅಧಿಕಾರಿಗಳು ನಗರಕ್ಕೆ ಶುದ್ದ ಕುಡಿಯುವ ನೀರು ಪೂರೈಕೆ ಕೆಲಸ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರವೀಂದ್ರ ಜಾಲ್ದಾರ್, ಕಡಗೋಲ್ ಆಂಜನೇಯ, ಈ.ಶಶಿರಾಜ, ನರಸರೆಡ್ಡಿ ಉಪಸ್ಥಿತರಿದ್ದರು.