ಬಾಗಲಕೋಟೆ : ಮತದಾರರ ಪಟ್ಟಿ ಪರೀಕ್ಷರಣೆ ಹಿನ್ನಲೆಯಲ್ಲಿ ಹುನಗುಂದ ತಾಲೂಕಿನ ಐಹೊಳೆ ಮತ್ತು ರಾಮಥಾಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಭೇಟಿ ನೀಡಿ ಮನೆ ಮನೆ ಸಮೀಕ್ಷೆ ಕಾರ್ಯ ಹಾಗೂ ಆಧಾರ ಜೋಡನೆಯ ಪರಿಶೀಲಿಸಿದರು.
ಐಹೊಳೆ ಗ್ರಾಮದ ಸರಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಗ್ರಾಮದ ವಾರ್ಡಗಳಿಗೆ ಸಂಬ0ಧಿಸಿದ ಮತದಾರರ ಪಟ್ಟಿಯಲ್ಲಿ ೧೮ ವರ್ಷ ಮೇಲ್ಪಟ್ಟ ಯಾರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಈಗಾಗಲೇ ೧೮ ವರ್ಷ ತುಂಬಿದವರ ಪಟ್ಟಿ ನಮ್ಮಲ್ಲಿದ್ದು, ಪಟ್ಟಿಯಿಂದ ಹೊರಗುಳಿದರೆ ನಿಮ್ಮ ಮೇಲೆ ಸೂಕ್ತ ಕ್ರವಹಿಸಲಾಗುವುದು. ಮೃತಪಟ್ಟ ವ್ಯಕ್ತಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕುವ ಕೆಲಸವಾಗಬೇಕು. ಒಂದೇ ಕುಟುಂಬದ ಮತದಾರರು ಒಂದೇ ಮತಗಟ್ಟೆಯಲ್ಲಿ ಇರುವಂತೆ ಮಾಡಬೇಕು ಎಂದರು.
ಮತಗಟ್ಟೆಯಲ್ಲಿ ಬರುವ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಬೇಕು. ಆ ಕುಟುಂಬದಲ್ಲಿ ಇರುವ ಮತದಾರರ ಮಾಹಿತಿ ಪಡೆಯಬೇಕು. ಮೃತಪಟ್ಟಿದ್ದರೆ ಪಟ್ಟಿಯಿಂದ ತೆಗೆದು ಹಾಕಬೇಕು. 18 ತುಂಬಿದವರಿಗೆ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು. ಹಾರ್ಡ ಕಾಫಿ ಕಡ್ಡಾಯವಾಗಿ ಸಲ್ಲಿಸಲು ತಿಳಿಸಿದರು. ನಂತರ ಶಾಲೆಯ ಅಡುಗೆ ಕೋಣೆಗೆ ತೆರಳಿ ಪರಿಶೀಲನೆ ನಡೆಸಿದರು. ಬೆಳೆ ಕುದಿಸಲು ಕುಕ್ಕರ ಬಳಕೆ ಮಾಡುವಂತೆ ತಿಳಿಸಿದರು. ಇದರಿಂದ ಗ್ಯಾಸ್ ವ್ಯಯವಾಗುವದಿಲ್ಲ ಎಂದರು.
ನAತರ ರಾಮಥಾಳ ಗ್ರಾಮಕ್ಕೆ ಬೇಟಿ ನೀಡಿದ ಜಿಲ್ಲಾಧಿಕಾರಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ಸಂವಿಧಾನ ಪೀಠಿಕೆಯನ್ನು ಓದಿ ಹೇಳಿದರು. ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪರಿಶೀಲಿಸಿ, ಆಧಾರ ಜೋಡನೆ ಕುರಿತು ಮಾಹಿತಿ ಪಡೆದುಕೊಂಡರು. ಭೇಟಿ ಸಮಯದಲ್ಲಿ ಹುನಗುಂದ ತಹಶೀಲ್ದಾರ ನಿಂಗಪ್ಪ ಬಿರಾದಾರ, ಬಾಗಲಕೊಟೆ ತಹಶೀಲ್ದಾರ ಅಮರೇಶ ಪಮ್ಮಾರ, ಅಮೀನಗಡ ಕಂದಾಯ ನಿರೀಕ್ಷಕ ಡಿ.ಎಲ್.ಯತ್ನಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮತದಾರರ ಪಟ್ಟಿ ಪರಿಷ್ಕರಣೆ | ಐಹೊಳೆ, ರಾಮಥಾಳ ಗ್ರಾಮಕ್ಕೆ ಭೇಟಿ ಮನೆ ಮನೆ ಸಮೀಕ್ಷೆ ಕಾರ್ಯ ಪರಿಶೀಲಿಸಿದ ಡಿಸಿ ಜಾನಕಿ
