ರಾಯಚೂರು: ಆ-6: ಮಾನವಿ ತಾಲೂಕಿನ ಕುರ್ಡಿ ಹೋಬಳಿಯ ಕಂದಾಯ ನಿರೀಕ್ಷಕ ಮಹೇಶ ಪಾಟೀಲ್ ಸುಳ್ಳು ದಾಖಲೆ ಸೃಷ್ಠಿಸಿ ದಲಿತ ಕುಟುಂಬಕ್ಕೆ ಸೇರಿದ ಭೂಮಿಯನ್ನು ಬೇರೆಯವರ ಹೆಸರಿಗೆ ಮುಟೇಷನ್ ಮಾಡಿದ ಆರೋಪದಡಿಯಲ್ಲಿ ಮಹೇಶ ಪಾಟೀಲ್ ವಿರುದ್ದ ಕ್ರಿಮಿನಲ್ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ೨೦೨೪ ಜುಲೈ ೨೩ ರಿಂದ ಅನಧಿಕೃತ ಗೈರಾಗಿದ್ದು, ತಕ್ಷಣ ಅತನ್ನನು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಕರ್ನಾಟಕ ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷ ಪರಶುರಾಮ್ ಅರೋಲಿ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾನವಿ ತಾಲೂಕಿನ ಕುರ್ಡಿ ಹೋಬಳಿಯ ಕಂದಯ ನಿರೀಕ್ಷಕರ”ಆದ ಮಹೇಶ ಪಾಟೀಲ್ ಅವರು ಯಲ್ಲೇಶ ತಂದೆ ಭೀಮಣ್ಣ ಆರೋಲಿ ದಿ.೨೩-೭-೨೦೨೪ರಂದು ಮಾನವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಇವರ ತಾಯಿಯಾದ ಶ್ರೀಮತಿ ಯಲ್ಲಮ್ಮ ಗಂಡ ಭೀಮಯ್ಯ ಇವರ ಹೆಸರಿನಲ್ಲಿ ಪಟ್ಟಾ ಇರುವ ಸರ್ವೆ ನಂ.೧೦೪/*/೧೪ ಕುರ್ಡಿ ಸೀಮಾದ ಜಮೀನನ್ನು ಶ್ರೀಮತಿ ಬಜಾರಮ್ಮ ಗಂಡ ರಾಮಣ್ಣ ವಡ್ಡರ್ ಸಾ.ಮಟಮಾರಿ ಇವರ ಹೆಸರಿಗೆ ಮುಟೇಶ ಮಾಡಿ ದಿ.೧೮-೧೦-೨೦೨೨ ರಂದು ಆದೇಶ ಹೊರಡಿಸಿದ್ದಾರೆ.
ಯಲ್ಲೇಶ ಮತ್ತು ಅವರ ತಾಯಿ ಆರ್ಥಿಕವಾಗಿ ತುಂಬಾ ಬಡತನದ ಕುಟುಂಬದವರಾಗಿರುವುದರಿAದ ಇದನ್ನು ಪರಿಗಣಿಸಿ ೧೯೯೫ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ವತಿಯಿಂದ ಮಾನವಿ ತಾಲೂಕಿನ ಕುರ್ಡಿ ಗ್ರಾಮದ ಸೀಮಾಂತರಲ್ಲಿ ಸರ್ವೆ ನಂ.೧೦೪/*೧೪/ ಶಿವರಾಜ್ ತಂದೆ ಶಿವಪುತ್ರಪ್ಪ ಇವರ ಜಮೀನನಲ್ಲಿ ೧ ಎಕರೆ ೦೨ ಗುಂಟೆ ಜಮೀನುನ್ನು ಯಲ್ಲಮ್ಮ ಗಂಡ ಭೀಮಯ್ಯ (ರ್ರಯ್ಯ) ಹೆಸರಿನಲ್ಲಿ ಮಂಜೂರು ಮಾಡಿ ಹಕ್ಕು ಪತ್ರ ನೀಡಿ, ಪಹಣಿಯನ್ನು ನೀಡದ್ದು, ಜಮೀನು ಇವರ ಕಬ್ಜಾದ್ಲಲಿ ಇದ್ದು, ಭೂಮಿ ಸ್ವಾದೀನಕ್ಕೆ ನೀಡಲಾಗಿದೆ. ಇವರು ೨೯ ವರ್ಷಗಳಿಂದ ಜಮೀನು ಸಾಗುವಳಿಯನ್ನು ಮಾಡುತ್ತಿದ್ದಾರೆ.
ದಿ.೧೩-೦೨-೨೦೨೨ ರಂದು ಸರ್ವೇ ನಂ.೧೦೪/*/೧೪, ೧ ಎಕರೆ ೦೨ ಗುಂಟೆ ಜಮೀನನ್ನು ಯಲ್ಲಮ್ಮ ಗಂಡ ಭೀಮಯ್ಯ ಆರೋಲಿ ಮರಣ ಹೊಂದಿದ್ದಾರೆAದು ಸುಳ್ಳು ದಾಖಲೆ ಸೃಷ್ಠಿಸಿ ಬಜಾರಮ್ಮ ತಂಡ ರಾಮಣ್ಣ ಪ.ಜಾತಿ (ವಡ್ಡರ್) ಮಟಮಾರಿ ಇವರ ಹೆಸರಿಗೆ ಮಗಳ ಸಂಭAದ ತೋರಿಸಿ ಹಕ್ಕು ಬದಲಾವಣೆ ಮಾಡಿದ್ದಾರೆಂದು ಆರೋಪಿಸಿದರು. ಬಜಾರಮ್ಮ ಗಂಡ ರಾಮಣ್ಣ ಇವರು ಯಲ್ಲಮ್ಮನವರ ಮಗಳು ಅಲ್ಲ, ಅವರು ಇವರ ಜಾತಿಗೂ ಸೇರಿಲ್ಲ, ಅದರೂ ೩೦ ರಿಂದ ೪೦ ಸಾ.ರೂ. ಲಂಚ ಪಡೆದ ಮಹೇಶ ಪಾಟೀಲ್ ಕಾನೂನು ಬಾಹಿರವಾಗಿ ಮೊಟೇಷನ್ ಮಾಡಿದ್ದಾರೆಂದು ದೂರಿದರು.
ಇದೇ ರೀತಿ ಕಂಬಳಿ ಗ್ರಾಮ,ಗರ್ಕಲ್ ಗ್ರಾಮ,ಬೈಲ್ ಮರ್ಚೇಡ್ ಮತ್ತು ರಾಜಲಬಂಡಾ ಗ್ರಾಮಗಳಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಒಬ್ಬರ ಜಮೀನು ಇನ್ನೊಬ್ಬರ ಹೆಸರಿನಗೆ ಮುಟೇಷನ್ ಮಾಡಿದ್ದಾರೆ. ಇವರದು ಇದು ಒಂದು ದಂಧೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮಹೇಶ ಪಾಟೀಲ್ ವಿರುದ್ದ ಮಾನವಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ೮ ದಿನ ಕಳೆದರೂ ಇವರನ್ನು ಸೇವೆಯಿಂದ ಅಮಾನತ್ತು ಮಾಡಿಲ್ಲ, ಬಂದಿಸಿಲ್ಲವೆAದು ದೂರಿದ ಅವರು ತಕ್ಷಣ ಸೇವೆಯಿಂದ ಅಮಾನತ್ತು ಮಾಡಿ ಬಂದಿಸಬೇಕೆAದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚನ್ನಬಸವ ಮಾಡಗಿರಿ, ಹನುಮೇಶ ಆರೋಲಿ, ಶರಣಪ್ಪ ಮಾಚನೂರ, ಮಂಜುನಾಥ ಗೋಡೆಹಾಳ, ಸೂಗುರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುಳ್ಳು ದಾಖಲೆ ಸೃಷ್ಠಿಸಿ ದಲಿತ ಭೂಮಿ ಬೇರೆಯವರ ಹೆಸರಿಗೆ ಮುಟೇಷನ್ ಆರೋಪ ಕಂದಾಯ ನಿರೀಕ್ಷಕ ಮಹೇಶ್ ಪಾಟೀಲ್ ವಿರುದ್ದ ಕ್ರಿಮಿನಲ್,ಜಾತಿ ನಿಂದನೆ ಪ್ರಕರಣ ದಾಖಲು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಬೇಕು- ಪರಶುರಾಮ್ ಅರೋಲಿ
WhatsApp Group
Join Now