ಕಾರಟಗಿ ಸೆ.೦೪ :
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಬಿಜೆಪಿ ಸದಸ್ಯತ್ವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಬಸವರಾಜ ದಢೇಸೂಗೂರು ಹೇಳಿದರು.
ಪಟ್ಟಣದ ಕನಕದಾಸ ವೃತ್ತದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಜನರಿಗೆ ಸ್ಪಂದಿಸುವ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದೆ. ಕೋವಿಡ್ ದಿನಗಳಲ್ಲೂ ಎಲ್ಲರೂ ಸಂಕಷ್ಟದಲ್ಲಿದ್ದಾಗ ಬಿಜೆಪಿ ಕರ್ಯರ್ತರು ಮನೆಯಲ್ಲಿ ಕೂರದೆ ಜನರ ಸಂಕಷ್ಟಗಳಿಗೆ ಸ್ಪಂದಿಸಿದರು. ಆ ಸಂರ್ಭದಲ್ಲಿ ಉಚಿತ ಆಹಾರ ಧಾನ್ಯದ ಕಿಟ್ನ್ನು ಕೊಟ್ಟಿದ್ದೆವು ಎಂದು ಮಾಜಿ ಶಾಸಕ ಬಸವರಾಜ ದಢೇಸೂಗೂರು ನೆನಪು ಮಾಡಿಕೊಂಡ ಅವರು ಮೋದಿ ಅವರ ಕನಸಾದ ವಿಕಸಿತ ಭಾರತವನ್ನು ನನಸು ಮಾಡುವ ಕರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹೋರಾಟದ ಫಲದಿಂದ ಪಕ್ಷ ಬೆಳೆದಿದ್ದನ್ನು ನಾನು ನೋಡಿದ್ದೇನೆ. ವಿಜಯೇಂದ್ರ ಅವರು ಅಧ್ಯಕ್ಷರಾದ ಮೇಲೆ ಪಕ್ಷಕ್ಕೆ ನವಚೈತನ್ಯ ಸಿಕ್ಕಿದೆ. ಹಬ್ಬದೋಪಾದಿಯಲ್ಲಿ ಮನೆ ಮನೆಗೂ ಸದಸ್ಯರ ಅಭಿಯಾನ ಮಾಡೋಣ ಎಂದರು.
ಇದೇ ಸಂರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಕರ್ಯಕಾರಿಣಿ ಸದಸ್ಯ ಬಸವರಾಜ್ ಕ್ಯಾವಟರ್ ಮಾತನಾಡಿದರು.
ನಂತರ ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ, ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ ಮುಸಾಲಿ, ಶಿವಶರಣೇಗೌಡ ಯರಡೋಣಾ, ಪುರಸಭೆ ಮಾಜಿ ಸದಸ್ಯ ಸಿದ್ರಾಮಯ್ಯಸ್ವಾಮಿ ಹಿರೇಮಠ ಮಾತನಾಡಿದರು.
ನಂತರ ಮಾಜಿ ಶಾಸಕ ಬಸವರಾಜ ದಢೇಸೂಗೂರು ನೇತೃತ್ವದಲ್ಲಿ ಪಕ್ಷಕ್ಕೆ ಹೊಸದಾಗಿ ಸಂದೀಪ್ ಎನ್ನುವ ಯುವಕನಿಗೆ ಸದಸ್ಯತ್ವ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಂತರ ವೃತ್ತದಲ್ಲಿನ ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ವಿವಿಧ ವ್ಯಾಪಾರಿ ಮಳಿಗೆಗಳಿಗೆ ತೆರಳಿ ಅಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಸಿದರು.
ಈ ಸಂರ್ಭದಲ್ಲಿ ರಾಜ್ಯ ಎಸ್ಟಿ ರಾಜ್ಯ ಕರ್ಯರ್ಶಿ ಅಶ್ವಿನಿ ದೇಸಾಯಿ, ಬಿಜೆಪಿ ಮುಖಂಡರಾದ ಗುರುಸಿದ್ದಪ್ಪ ಯರಕಲ್, ಉಮೇಶ ಸಜ್ಜನ್, ಸಾಮಾಜಿಕ ಜಾಲತಾಣ ಸಂಚಾಲಕ ವೀರೇಂದ್ರ ದಿವಟರ್, ಬಿ. ಕಾಶಿವಿಶ್ವನಾಥ್, ಪ್ರಭುರಾಜ್ ಬೂದಿ, ರವಿಸಿಂಗ್ ವಕೀಲರು, ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ್, ಸೋಮಶೇಖರ ಬೇರಿಗೆ, ಆನಂದ ಮ್ಯಾಗಳಮನಿ, ಫಕೀರಪ್ಪ ನಾಯಕ್, ಸೇರಿದಂತೆ ಮಾಜಿ ಸದಸ್ಯ ಜಿ. ತಿಮ್ಮನಗೌಡ, ಬಸವರಾಜ್ ಎತ್ತಿನಮನಿ, ಧನಂಜಯ್, ಭದ್ರಿ ಮಡಿವಾಳ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜಪ್ಪ ಚಳ್ಳೂರು, ಶರಣಪ್ಪ ಬಾವಿ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿಯಿಂದ ಸದಸ್ಯತ್ವ ಅಭಿಯಾನಕ್ಕೆ ಮಾಜಿ ಶಾಸಕ ಬಸವರಾಜ ದಡೆಸೂಗುರು ಚಾಲನೆ
WhatsApp Group
Join Now