ರಾಯಚೂರು: ಮೇ-19:
ಕೈಗಾರಿಕೆಗಳ ಸ್ಥಳೀಯವಾಗಿ ತೆರಿಗೆ ಹೆಚ್ಚಳ ಹಾಗೂ ಕೈಗಾರಿಕೆಗಳು ಅನುಭವಿಸುತ್ತಿರುವ ಇನ್ನೀತರ ಸಮಸ್ಯೆಗಳ ಬಗ್ಗೆ ಚುನಾವಣೆ ನೀತಿ ಸಂಹಿತೆ ನಂತರ ನಿಯೋಗ ತೆರಳಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದು ರಾಯಚೂರು ಜಿಲ್ಲಾ ವಾಣಿಜ್ಯೋಧ್ಯಮ ಸಂಘದ ಅಧ್ಯಕ್ಷ ಎಸ್.ಕಮಲ್ ಕುಮಾರ ಹೇಳಿದರು.
ನಗರದ ಖಾಸಗೀ ಹೋಟೆಲ್‌ನಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶದ ಅಂತರ ಜಿಲ್ಲಾ ವಾಣಿಜ್ಯೋಧ್ಯಮಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆ ಸೇರಿದಂತೆ ರಾಜ್ಯದ್ಯಾಂತ ಇರುವ ಇಂಡಸ್ಟಿçÃಗಳು ಸಾಕಷ್ಟು ಸಮಸ್ಯೆಗಳು ಎದುರಿಸುತ್ತಿವೆ. ಸ್ಥಳೀಯ ನಗರಸಭೆ ಮತ್ತು ಮಹಾನಗರ ಪಾಲಿಕೆ ಕಾಯ್ದೆ ಅನ್ವಯ ಇಂಡಸ್ಟಿçÃಗಳಿಗೆ ತೆರಿಗೆ ವಿಧಿಸಿದ್ದು, ಇದು ಸರಕಾರ ದಿಂದ ವಿಧಿಸಲಾಗಿದೆ. ಜಿಲ್ಲಾ ಕೈಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಸಡೆಸಿ ಸರಕಾರಕ್ಕೆ ಸ್ಥಳೀಯವಾಗಿ ಬೇಡಿಕೆ ಆಧಾರದ ಮೇಲೆ ತೆರಿಗೆ ವಿಧಸುವ ಕುರಿತು ಸರಕಾರದೊಂದಿಗೆ ಚರ್ಚಿಸಬೇಕಾಗಿದೆ. ಸಂಬAಧಿಸಿದ ಇಲಾಖೆ ಸಚಿವರು ಈ ಬಗ್ಗೆ ಸ್ಪಂದಿಸಿದ್ದು, ಚುನಾವಣಾ ನೀತಿ ಸಂಹಿತಿ ಬಳಿಕ ನಿಯೋಗ ಬರಲು ಭರವಸೆ ನೀಡಿದ್ದಾರೆಂದರು.
ವಾಣಿಜ್ಯೋಧ್ಯಮಿ ರಾಮಚಂದ್ರ ಪ್ರಭು ಮಾತನಾಡಿ, ವಾಣಿಜ್ಯ ತೆರಿಗೆ ಮತ್ತು ಇಂಡಸ್ಟಿçà ತೆರಿಗೆ ಸ್ಥಳೀಯ ನಗರಸಭೆಯಿಂದಲೇ ತೆರಿಗೆ ವಿಧಿಸುತ್ತದೆ. ಈ ಬಗ್ಗೆ ಸರಕಾರದ ಮೇಲೆ ಒತ್ತಾಡ ಹಾಕಿ ವಿನಾಯಿತಿ ಮಾಡಬೇಕಿದೆ. ಪ್ರತಿ ವರ್ಷ ತೆರಿಗೆ ಹೆಚ್ಚಳ ದಿಂದಾಗಿ ಇಂಡಸ್ಟಿçÃಗಳಿಗೆ ತೊಂದರೆಯಾಗಲಿದೆ. ಜೊತೆಗೆ ರೆಸಿಡೆನ್ಸಿಯಲ್ , ಇಂಡಸ್ಟಿçÃಸ್ ವ್ಯತ್ಯಾಸವಿದೆ. ಈ ಬಗ್ಗೆಯೂ ಸರಕಾರದ ಗಮನಕ್ಕೆ ತರಬೇಕಿದೆ ಎಂದರು. ವೆಂಕಟರೆಡ್ಡಿ, ಅಕ್ಕಿ ಗಿರಿಣಿ ಮಾಲೀಕರ ಸಂಘದ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ, ತ್ರಿವಿಕ್ರಮ ಜೋಶಿ, ಯಶವಂತರಾಜ್, ಮಸ್ಕಿ ನಾಗರಾಜ ಮಾತನಾಡಿದರು. ಸಭೆಯಲ್ಲಿ ಬೀದರ, ಕಲಬುರಗಿ, ರಾಯಚೂರು, ಯಾದಗಿರಿ,ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ವಾಣಿಜ್ಯೋಧ್ಯಮ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ತಜ್ಞರು ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.