ರಾಯಚೂರು: ಆ-೨೨: ಪ್ರಯಾಣಿಕರಿಂದ ಹೆಚ್ಚಿನ ಬೇಡಿಕೆಯಿರುವ ರೇಲ್ವೆಗಳ ಸಂಚಾರವನ್ನು ಪುನರಾರಂಭಿಸಬೇಕು ಹಾಗೂ ಕೆಲವು ರೇಲ್ವೆಗಳ ಸಂಚಾರವನ್ನು ವಿಸ್ತರಿಸಬೇಕೆಂದು ಕೇಂದ್ರ ಸರಕಾರದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣನವರಿಗೆ ಬರೆದ ಮನವಿಯನ್ನು ರಾಯಚೂರು-ಯಾದಗಿರಿ ಸಂಸದ ಜಿ. ಕುಮಾರನಾಯಕ ಅವರಿಗೆ ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಡಾ. ಬಾಬುರಾವ್ ಸಲ್ಲಿಸಿದರು.
ಕಲ್ಯಾಣ ಕರ್ನಾಟಕದ ಜನರ ಅನುಕೂಲಕ್ಕಾಗಿ ಮಾಡಿರುವ ಮನವಿಗೆ ನಿಮ್ಮ ಸಕಾರಾತ್ಮಕ ಸ್ಪಂದನೆಯನ್ನು ನಿರೀಕ್ಷಿಸುತ್ತಿದ್ದೇವೆ. ಮಚಲಿಪಟ್ಟಣಂ – ಮಂತ್ರಾಲಯ ವಿಶೇಷ ರೈಲು (ಸಂಖ್ಯೆ ೦೭೦೬೭-೬೮ ) ಕರ್ನೂಲ್ ಪಟ್ಟಣದವರೆಗೂ ವಿಸ್ತರಿಸಿದಾಗ ಆಂಧ್ರ ಹಾಗೂ ರಾಯಚೂರಿನ ಪ್ರಯಾಣಿಕರು ಅತ್ಯಂತ ಖುಷಿಯಲ್ಲಿದ್ದರೂ. ಮನವಿಯನ್ನು ಪುರಸ್ಕರಿಸಿದ್ದಕ್ಕೆ ಕೃತಜ್ಞರಾಗಿದ್ದರು. ಆದರೆ ರೈಲು ೮ ವಾರಗಳಿಗೆ ಚಲಿಸಿ ಉಳಿದ ಅಧಿಸೂಚಿತ ಅವಧಿಗೆ ರದ್ದುಗೊಳಿಸಿರುವುದರಿಂದ ಪುನಃ ಪ್ರಯಾಣಿಕರು ನಿರಾಸೆಗೊಳಗಾದರು. ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ಹೊಂದಿ ಹೊಸ ಸಂಪರ್ಕವನ್ನು ನೀಡುವ ಈ ರೈಲನ್ನು ಪುನರಾರಂಭಿಸಿ ಸಾಮಾನ್ಯ ರೈಲಿನಂತೆ ಸಂಚರಿಸಲು ಅನುವು ಮಾಡಿಕೊಡಬೇಕು. ರೈಲು ಸಂಖ್ಯೆ(೧೨೮೬೧-೬೨ ವಿಶಾಖಪಟ್ಟಣ- ಮೆಹಬೂಬ್ ನಗರ ದಿನವೂ ಎಸ್.ಎಫ್ ಎಕ್ಸ್ ಪ್ರೆಸ್ ಅನ್ನು ರಾಯಚೂರು / ಮಂತ್ರಾಲಯದವರೆಗೂ ವಿಸ್ತರಿಸಬೇಕು. ರೈಲು ಸಂಖ್ಯೆ ೦೭೨೪೫-೪೬ ಕಾಕಿನಾಡ ರಾಯಚೂರು ವಿಶೇಷ ತ್ರೆöÊಸಾಪ್ತಾಯಿಕ ಎಕ್ಸ್ ಪ್ರೆಸ್ನ್ನು ಕೋವಿಡ್ ಸಮಯದಲ್ಲಿ ಸ್ಥಗಿತಗೊಳಿಸಲಾಗಿದೆ. ಈ ರೈಲು ಕರಾವಳಿ, ಆಂಧ್ರಪ್ರದೇಶದ ಯಾವುದೇ ರೈತರು, ವಿದ್ಯಾರ್ಥಿಗಳು ಮತ್ತು ವಿವಿಧ ಕಂಪೆನಿಗಳ ಉದ್ಯೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿತ್ತು. ಆದ್ದರಿಂದ ಈ ರೈಲು ಸಂಚಾರವನ್ನು ಪುನರಾರಂಭಿಸಬೇಕು. ರೈಲು ಸಂಖ್ಯೆ ೦೭೪೭೭-೭೮ ಮತ್ತು ೧೭೬೯೩-೯೪ ಒಂದೇ ದಿಕ್ಕಿನಲ್ಲಿ ಚಲಿಸುತ್ತವೆ. ಆದರೆ ಈ ರೇಲ್ವೆಗಳು ರಾಯಚೂರಿನಿಂದ ಬೆಳಿಗ್ಗೆ ಹೊರಡುವಂತೆ ಸಮಯ ನಿಗದಿ ಮಾಡಬೇಕು. ಮತ್ತು ರಾತ್ರಿವೇಳೆಗೆ ತಲುಪವಂತೆ ವ್ಯವಸ್ಥೆ ಕಲ್ಪಿಸಬೇಕು.
ರೈಲು ಸಂಖ್ಯೆ ೭೭೦೩೧-೩೨ ಸೋಲಾಪುರ-ರಾಯಚೂರು ಪ್ಯಾಸೆಂಜರ್ ಅನ್ನು ವಿಸ್ತರಣೆಯೊಂದಿಗೆ ಪುನರಾರಂಭಿಸಬೇಕು. ರೈಲು ಸಂಖ್ಯೆ.೦೭೩೩೫ -೩೬ ಮಂಗಳೂರಿನಿದ ಬೆಳಗಾವಿಗೆ ರಾಯಚೂರು ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ಕೇಳಿಕೊಂಡಿರುವುದನ್ನು ಸಂಸದರ ಗಮನಕ್ಕೆ ತಂದರು.
ಮನವಿ ಸ್ವೀಕರಿಸಿದ ಸಂಸದ ಜಿ.ಕುಮಾರ ನಾಯಕ ಅವರು ಡಾ.ಬಾಬುರಾವ್ ಅವರಿಗೆ ಶನಿವಾರ ಇಲ್ಲವೇ ರವಿವಾರ ರೇಲ್ವೆ ಇಲಾಖೆ ರಾಜ್ಯ ಖಾತೆ ಸಚಿವರನ್ನು ಇಬ್ಬರೂ ಸೇರಿಯೇ ಭೇಟಿಯಾಗಿ ಪ್ರಯಾಣಿಕರ ಬಹುದಿನಗಳಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಅವರ ಮುಂದಿಡೋಣ ಎಂದು ಹೇಳಿರುವುದಾಗಿ ಡಾ. ಬಾಬುರಾವ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೇಲ್ವೆಗಳ ಪುನರಾರಂಭಿಸುವAತೆ ಸಚಿವರ ಸಂಸದರಿಗೆ ಡಾ.ಬಾಬುರಾವ್ ಮನವಿ
WhatsApp Group
Join Now