ರಾಯಚೂರು: ಮಾನವಿ ತಾಲೂಕುನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲಿ ಇಬ್ಬರು ಶಾಲಾ ಮಕ್ಕಳು ಮೃತಪಟ್ಟು,ಅನೇಕ ಮಕ್ಕಳು ಗಾಯಗೊಂಡ ಹಿನ್ನಲೆಯಲ್ಲಿ ಇಂದು ನಗರದ ರಂಗಮ0ದಿರದಲ್ಲಿ ನಡೆಯಬೇಕಾಗಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ರದ್ದುಗೊಳಿಸಿ ಮೃತ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲ್ಲಿ ಸಲ್ಲಿಸಲಾಯಿತು.
ಜಿ.ಪಂ.ನಗರಸಭೆ,ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಶ್ರದಲ್ಲಿ ಸರ್ವ ಪಲ್ಲಿ ರಾಧಕೃಷ್ಣ್ ಅವರ 137ನೇ ಜನ್ಮದಿನದ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸರ್ವಪ್ಲಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿ ಬಾಪುಲೆ ಅವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡಲಾಯಿತು. ಮೃತ ವಿದ್ಯಾರ್ಥಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿಸಿ ಕಾರ್ಯಕ್ರಮ ರದ್ದುಪಡಿಸಲಾಯಿತು.
ವಿಧಾನ ಪರಿಷತ ಸದಸ್ಯ ಶಶಿಲ್ ನಮೋಶಿ ಮೃತ ವಿದ್ಯಾಥಿಗಳು ಹಾಗೂ ಎರಡು ದಿನ ಹಿಂದೆ ಮೃತ ಪಟ್ಟ ಶಿಕ್ಷಕ ಭಾವಚಿತ್ರಕ್ಕೆ ಮಲಾರ್ಪಣೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಕೆ.ಡಿ.ಬಡಗೇರ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.
ಮಾನವಿ: ಶಾಲಾ ವಾಹನ ಅಪಘಾತ; ಶ್ರದ್ಧಾಂಜಲಿ ಸಭೆ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ರದ್ದು
WhatsApp Group
Join Now