163 ಟಿ.ಸಿ.ಗಳ ಲೆಕ್ಕ ಕೊಡದ ಅಧಿಕಾರಿಗಳು ಅಧಿಕಾರಿಗಳಿಗೆ ನೋಟಿಸ್ ಜಾರಿ: ಜೆಸ್ಕಾಂಗೆ 2 ಕೋ.28 ಲಕ್ಷ ರೂ. ನಷ್ಟ
ರಾಯಚೂರು: ಮೇ-೯: ರಾಯಚೂರು ಗ್ರಾಮೀಣ ಜೆಸ್ಕಾಂ ವಿಭಾಗದಲ್ಲಿ ನಡೆದ ಟಿ.ಸಿ.ಬದಲಾವಣೆ ಗೋಲ್ಮಾಲ್ಗೆ ಸಂಭAದಿಸಿದAತೆ ಜೆಸ್ಕಾಂ ಪ್ರಭಾರಿ ಅಧೀಕ್ಷ ಅಭಿಯಂತರ ಸೇರಿ ೪೪ ಜನ ಅಧಿಕಾರಿಗಳು ನೋಟಿಸ್ ಜಾರಿ ಮಾಡಲಾಗಿದೆ.
೨೦೨೦-೨೧,೨೦೨೧-೨೨,೨೦೨೨-೨೩ ಸಾಲಿನಲ್ಲಿ ಮೂರು ವರ್ಷದಲ್ಲಿ ಸುಟ್ಟು ಹೋದ ಕಳಸಿದ ಟಿಸಿಗಳು ಹಿಂದುರುಗಿಸದೇ, ನಿಯಮಗಳ ಪಾಲನೆ ಮಾಡುವಲ್ಲಿ ನಿರ್ಲಕ್ಷö್ಯ ವಹಿಸಿ ಜೆಸ್ಕಾಂಗೆ ೨ ಕೋ. ೨೮ ಲಕ್ಷ ೬ ಸಾ,೭೬೦ ರೂ. ಆರ್ಥಿಕ ನಷ್ಟವಾಗಿರುವದು ತನಿಖೆಯಿಂದ ಬಹಿರಂಗಗೊAಡಿದೆ.
ಹೊಸಪೇಟೆ ಜೆಸ್ಕಾಂ ಲೆಕ್ಕಾಧಿಕಾರಿ ಪ್ರಕರಣದ ತನಿಖೆ ನಡೆಸಿ ೨೦೧೩ ಜು.೧ ರಂದು ಜೆಸ್ಕಾಂ ವ್ಯವಸ್ಥಾಪಕರಿಗೆ ವರದಿಯನ್ನು ಸಲ್ಲಿಸಿದ್ದಾರೆ. ಸುಟ್ಟು ಹೋದ ಟಿಸಿಗಳನ್ನು ಮರಳಿ ಜೆಸ್ಕಾಂ ಉಗ್ರಾಣಕ್ಕೆ ಸಲ್ಲಿಸದೇ ಇರುವದು ಪತ್ತೆಯಾಗಿತ್ತು. ಎಲ್ಲಾ ಹಂತದ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದು, ಕಂಪನಿಗೆ ಆರ್ಥಿಕ ನಷ್ಟ ಉಂಟು ಮಾಡಿರುವ ಕುರಿತು ಅಧಿಕಾರಿಗಳ ಹುದ್ದೆವಾರು ಲೋಪ ಪಟ್ಟಯನ್ನು ತನಿಖೆಯಲ್ಲಿ ಸಲ್ಲಿಸಲಾಗಿತ್ತು.
ನೋಟಿಸ್ ಜಾರಿ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕೊಪ್ಪಳ ಕಾರ್ಯನಿರ್ವಾಹಕ ಇಂಜಿನಿಯತ್ ಎಂ.ರಾಜೇಶ, ರಾಯಚೂರು ಗ್ರಾಮೀಣ ವಿಭಾಗದ ಕಾರ್ಯನಿರ್ವಾಹ ಇಂಜಿಯರ್ ಚಂದ್ರಶೇಖರ್ ದೇಸಾಯಿ, ರಾಯಚೂರು ಕಾರ್ಯ ಮತ್ತು ಪಾಲನೆ ವೃತ್ತ ಕಛೇರಿ ಇಂಜಿನಿಯತರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆ. ರಾಘವೇಂದ್ರ, ರಾಯಚೂರು ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಎಸ್.ಶಿವನಗುತ್ತಿ,ಗಂಗಾವತಿ ಜೆಸ್ಕಾಂ ಪಾಲನಾ ವಿಭಾಗದ ಲೆಕ್ಕಾಧಿಕಾರಿ ಎನ್. ಗಣೇಶ,ರಾಯಚೂರು ಪಾಲನಾ ಗ್ರಾಮೀಣಾ ವಿಭಾಗದ ಹಿರಿಯ ಸಹಾಯಕ ಡಿ.ಶ್ರೀನಿವಾಸ ರಾಯಚೂರು ಎಂ.ಟಿ.ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜುಇನಿಯರ್ ಹನುಮೇಶ, ಸಿಂಧಣೂರು ಜೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೊಲ್ಲರ ಶ್ರಿನಿವಾಸ, ಬಳ್ಳಾರಿ ಆರ್.ಟಿ.ವಿಭಾಗದ ಸಹಾಯಕ ಕಾರ್ಯನಿವಹಕ ಇಂಜಿನಿಯರ್ ಜಿ.ಪಂಪಣ್ಣಗೌಡ, ಹರಪನಹಳ್ಳಿ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ ಟಿ.ವಿರೂಪಾಕ್ಷಪ್ಪ, ಮಾನವಿ ಕಾರ್ಯ ಮತ್ತು ಪಾಲನಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವೈದ್ಯನಾಥ ಎಂ.ವೈ. ಸಿರವಾರ ಕಾರ್ಯ ಮತ್ತು ಪಆಲನಾ ವಿಭಾಗದ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಬೆನ್ನಪ್ಪ ಎಸ್. ಕರಿಬಂಟನಾಳ ಸೇರಿದಂತೆ ಒಟ್ಟು ೪೪ ಜನ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ೧೦ ದಿನದೊಳಗೆ ಉತ್ತರಿಸಲು ಅವಕಾಶ ನೀಡಲಾಗಿದೆ. ಉತ್ತರ ನೀಡದೇ ಹೋದಲ್ಲಿ ಶಿಸ್ತು ಕ್ರಮದ ಎಚ್ಚರಿಕೆಯನ್ನು ಜೆಸ್ಕಾಂ ಶಿಸ್ತು ಪ್ರಾಧಿಕಾರದ ನಿರ್ಧೇಶಕರು ನೀಡಿದ್ದಾರೆ.