ರಾಯಚೂರು,ಮೇ.೦6(ಕ.ವಾ):
ರಾಯಚೂರು ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ.೭ರಂದು ಮತದಾನ ಪ್ರಕ್ರಿಯೆ ಜರುಗಲಿದ್ದು, ಇದಕ್ಕಾಗಿ ಇಂದು ಜಿಲ್ಲೆಯ ವಿವಿಧ ಮಸ್ಟರಿಂಗ್ ಕೇಂದ್ರಗಳಿAದ ವಿವಿಧ ಮತಗಟ್ಟೆಗಳಿಗೆ ಒಟ್ಟು ೮೪೬೪ ಮತಗಟ್ಟೆ ಸಿಬ್ಬಂದಿ ಮತದಾನದ ಸಾಮಾಗ್ರಿಗಳೊಂದಿಗೆ ತೆರಳಿದರು.
ಮೇ.೬ರ(ಸೋಮವಾರ) ನಗರದ ಎಸ್‌ಆರ್‌ಪಿಎಸ್ ಪಿಯು ಕಾಲೇಜು ಆವರಣದಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಾಗೂ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ತೆರಳುವ ಮತಗಟ್ಟೆ ಸಿಬ್ಬಂದಿಗೆ ಮತಯಂತ್ರಗಳನ್ನು ಹಾಗೂ ಮತದಾನ ಸಾಮಾಗ್ರಿಗಳನ್ನು ನೀಡಲಾಯಿತು.
ರಾಯಚೂರು ಗ್ರಾಮೀಣ ಕ್ಷೇತ್ರದ ೨೭೫ ಹಾಗೂ ರಾಯಚೂರು ನಗರ ಕ್ಷೇತ್ರದ ೨೫೦ ಮತಗಟ್ಟೆಗಳಿಗೆ ನಿಯೋಜಿಸಿದ್ದ ಮತಗಟ್ಟೆ ಸಿಬ್ಬಂದಿ ಬೆಳಿಗ್ಗೆಯಿಂದಲೇ ತಮಗೆ ನೀಡಲಾದ ಮತಗಟ್ಟೆಗಳ ವಿವರಗಳನ್ನು ಪಡೆದು ಮತದಾನ ಕಾರ್ಯಕ್ಕೆ ತೆರಳಿದರು.
ಉಳಿದಂತೆ ಮಾನವಿ ವಿಧಾನ ಸಭಾ ಕ್ಷೇತ್ರದ ೨೭೫, ದೇವದುರ್ಗ ವಿಧಾನಸಭಾ ಕ್ಷೇತ್ರದ ೨೬೭, ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ೨೮೫ ಮತಗಟ್ಟೆಗಳಿಗೆ ಶೋರಾಪುರ ಕ್ಷೇತ್ರದ ೩೧೭, ಶಹಪುರ ಕ್ಷೇತ್ರದ ೨೬೫ ಹಾಗೂ ಯಾದಗಿರಿ ಕ್ಷೇತ್ರದ ೨೬೮ ಮತಗಟ್ಟೆಗಳಿಗೆ ಆಯಾ ವಿಧಾನಸಭಾ ಕ್ಷೇತ್ರದ ತಾಲೂಕು ಕೇಂದ್ರಗಳಲ್ಲಿರುವ ಮಸ್ಟರಿಂಗ್ ಕೇಂದ್ರಗಳಿAದ ಮತಯಂತ್ರಗಳನ್ನು ಆಯಾ ಮತಗಟ್ಟೆ ಸಿಬ್ಬಂದಿಗೆ ವಿತರಿಸಲಾಯಿತು.
ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆ ಕೇಂದ್ರಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ, ಬಿಸಿಲಿನ ಪ್ರಕರತೆ ಹೆಚ್ಚಾಗಿದ್ದ ಕಾರಣ ಶಾಮಿಯಾನದ ವ್ಯವಸ್ಥೆಯನ್ನು ಮಸ್ಟರಿಂಗ್ ಕೆಂದ್ರದಲ್ಲಿ ಮಾಡಲಾಗಿತ್ತು.
ಮಸ್ಟರಿಂಗ್ ಕೇಂದ್ರಕ್ಕೆ ಸಾಮಾನ್ಯ ವೀಕ್ಷಕರ ಭೇಟಿ: ಲೋಕಸಭಾ ಚುಣಾವಣೆ-೨೦೨೪ಕ್ಕೆ ಸಂಬAಧಿಸಿದAತೆ ಮೇ.೭ರಂದು ಮತದಾನ ಪ್ರಕ್ರಿಯೆ ಜರುಗಲಿದ್ದು, ಅದರ ಹಿಂದಿನ ದಿನವಾದ ಮೇ.೬ರಂದು ನಗರದ ಎಸ್.ಆರ್.ಪಿ.ಎಸ್ ಪಿಯು ಕಾಲೇಜಿನಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ ಚುನಾವಣಾ ಸಾಮಾನ್ಯ ವೀಕ್ಷಕ ಅಜಯ್ ಪ್ರಕಾಶ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ, ತಹಶೀಲ್ದಾರ ಸುರೇಶ ವರ್ಮಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಎನ್ ಬಸರಿಗಿಡದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.