ಸಂವಿಧಾನ ಬದಲಾವಣೆ ಮಾಡುವ ಬಿಜೆಪಿ ಪಕ್ಷ ಸೋಲಿಸಿ – ರಾಹುಲ್ ಗಾಂಧಿ

Eshanya Times

ರಾಯಚೂರು: ಮೇ-೨: ಸಂವಿಧಾನ ರಕ್ಷಣೆ ಮಾಡುವ ಕಾಂಗ್ರೆಸ್ ಪಕ್ಷ ಹಾಗೂ ಸಂವಿಧಾನ ಬದಲಾವಣೆಗೆ ಯತ್ನ ಮಾಡುತ್ತಿರುವ ಬಿಜೆಪಿ ಪಕ್ಷಗಳ ಮಧ್ಯ ಮಹಾ ಸಮರವೇ ಈ ಲೋಕಸಭಾ ಚುನಾವಣೆಯಾಗಿದೆ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಹೇಳಿದರು.
ನಗರದ ವಾಲಕೇಟ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ ಪ್ರಜಾಧ್ವನಿ-೨ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತ, ದೇಶದ ಸಂವಿಧಾನ ಎಲ್ಲಾ ಧರ್ಮ,ಜಾತಿ, ಸಮುದಾಯಗಳಿಗೆ ಸಮಾನ ಹಕ್ಕು ನೀಡಿದೆ. ಸಂವಿಧಾನ ರಚನೆಕ್ಕಿಂತ ಮುಂಚೆ ದಲಿತರು,ಅಧಿವಾಸಿಗಳು,ಹಿಂದುಳಿದ ಜಾತಿಗಳಿಗೆ ಯಾವುದೇ ಹಕ್ಕುಗಳು ಇರಲಿಲ್ಲಾ, ಅಲ್ಲದೇ ಬಡವರಿಗೂ ಯಾವುದೇ ಹಕ್ಕುಗಳು ಇರಲಿಲ್ಲಾ, ಆದರೆ ಸಂವಿಧಾನ ಬಂದನAತರ ಎಲ್ಲರಿಗೂ ಸಮಾನತೆ, ಮತದಾನ ಹಕ್ಕು ಸೇರಿದಂತೆ ಅನೇಕ ಹಕ್ಕುಗಳು ದೊರತ್ತವು. ಅಲ್ಲದೇ ಎಲ್ಲಾ ಜಾತಿ,ಧರ್ಮದವರು ಸಮಾನರೆಂದರು ಸಾರಿದೆ. ಇದನ್ನು ಸಹಿಸಿಕೊಳ್ಳಲು ಆಗದೇ ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆಂದು ಹೇಳುತ್ತಿದ್ದಾರೆಂದು ಹೇಳಿದರು.
ಬಿಜೆಪಿಯ ರಾಷ್ಠಿçÃಯ ಅಧ್ಯಕ್ಷರಾದ ನಡ್ಡಾ ಹೇಳುತ್ತಾರೆ, ಸಮಾನತೆಗಾಗಿ ಹೋರಾಟ ಮಾಡಿದರೇ ಅವರು ಮಾವುವಾದಿಗಳು, ಭಯೋತ್ಪದಕರು ಎಂದು ಹೇಳುತ್ತಾರೆ. ಅಂದರೆ ದಲಿತರು,ಅಧಿವಾಸಿಗಳು, ಹಿಂದುಳಿದ ವರ್ಗಗಳು,ಅಲ್ಪಸಂಖ್ಯಾತರಿಗೆ ಸಮಾನತೆ,ಅಧಿಕಾರ ಇರಬಾರದಂದು ಅವರ ಅಭಿಪ್ರಾಯವಾಗಿದೆ.
ನಡ್ಡಾ ಅವರ ಹೇಳಿಕೆ ಬಗ್ಗೆ ಪ್ರಧಾನಿ ಮೋದಿ ತುಟ್ಟಿ ಬಿಚ್ಚುತ್ತಿಲ್ಲ, ಮೌನವಹಿಸಿದ್ದಾರೆ. ಇವರ ಹೇಳಿಕೆಗೆ ಅವರದು ಬೆಂಬಲವಿದೆಯೇ? ಎಂದು ಪ್ರಶ್ನಿಸಿದರು.
ದೇಶದಲ್ಲಿ ಪ್ರದಾನಿ ಮೋದಿ ಅವರು ಕೇವಲ ೨೨ ಜನ ಉದ್ಯಮಿಗಳ ಪರವಾಗಿ ಕೆಲಸÀ ಮಾಡುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡದ ಪ್ರಧಾನಿ ಮೋದಿ ಅವರು ಅಂಬಾನಿ, ಅದಾನಿಯಂತೆ ಕಂಪನಿಗಳ ಮಾಲೀಕರ ೧೬೦೦ ಲಕ್ಷ ಕೋ.ಸಾಲ ಮನ್ನಾ ಮಾಡಿದ್ದಾರೆಂದು ಟಿಕೀಸಿದರು.ದೇಶದ ೭೦ ಕೋ.ಜನರಲ್ಲಿ ಇರಬೇಕಾದ ಆಸ್ತಿ ಕೇವಲ ೨೨ ಜನರಲ್ಲಿ ಇದೆ ಎಂದರು.
ದೇಶದಲ್ಲಿ ಶೇ.೧೫ ರಷ್ಟು ದಲಿತರು, ಶೇ. ೫೦ರಷ್ಟು ಓಬಿಸಿ ಮತ್ತು ಶೇ.೮ರಷ್ಟು ಅಧಿವಾಸಿಗಳು, ಶೇ.೧೫ ರಷ್ಟು ಅಲ್ಪಸಂಖ್ಯಾತರು ಹಾಗೂ ಶೇ.೫ ರಿಂದ ೬ ರಷ್ಟು ಬಡವರು ಇದ್ದಾರೆ. ಶೇ.೯೦ರಷ್ಟು ಇರುವ ಜನರಿಗೆ ಸರಕಾರ ಯಾವುದೇ ಯೋಜನೆ ಸೌಲತ್ತುಗಳು ನೀಡಿಲ್ಲವೆಂದರು.
ಮಾಧ್ಯಮದವರು ಕೇವಲ ಕ್ರಿಕೆಟ್, ಅಂಬಾನಿ ಮಕ್ಕಳ ಮದುವೆ ತೋರಿಸುತ್ತಾರೆ. ಆದರೆ ದಲಿತ,ಹಿಂದುಳಿದವರ, ಅಲ್ಪಸಂಖ್ಯಾತರ ಮತ್ತು ಬಡವರ ಸಮಸ್ಯೆಗಳನ್ನು ತೋರಿಸುತ್ತಿಲ್ಲವೆಂದರು. ಇದಕ್ಕೆ ಕಾರಣ ಎಲ್ಲಾ ಟಿ.ವಿ.ಮಾಧ್ಯಮ ಚಾನಲ್‌ಗಳು ಕೆಲವು ಶ್ರೀಮಂತರ ಕೈಯಲ್ಲಿ ಇವೆ ಎಂದರು. ಈ ಸಂಸ್ಥೆಗಳ ಮಾಲೀಕರು ದಲಿತರು,ಹಿಂದುಳಿದವರ್ಗ, ಅಧಿವಾಸಿಗಳು, ಅಲ್ಪಸಂಖ್ಯಾತರು ಇಲ್ಲ, ಒಬ್ಬರು ಇದ್ದರೆ ತೋರಿಸಿ ಎಂದರು. ಇದೇ ರೀತಿ ದೊಡ್ಡ ದೊಡ್ಡ ಉದ್ಯಮಗಳು, ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳಲ್ಲಿಯೂ ಇದೆ ಪರಿಸ್ಥಿತಿ ಇದೆ ಎಂದರು.
ಅದರಿಂದಲೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಜಾತಿ ಜನಗಣಿತಿ ಮಾಡಲಾಗುವುದೆಂದು ಘೋಷಣೆ ಮಾಡಲಾಗಿದೆ. ಅಧಿಕಾರಿಕ್ಕೆ ಬಂದರೇ ಮಾಡೇ ಮಾಡುತ್ತೇವೆ ಎಂದರು. ದೇಶದಲ್ಲಿ ದಲಿತ, ಅಧಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಬಡವರ ಜನ ಸಂಖ್ಯೆ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆಂದರು. ಯಾವ ಜನರ ಎಷ್ಟು ಪಾಲುದಾರಿಕೆ ಇದೆ ಎಂಬುದನ್ನು ನೋಡುತ್ತೇವೆಂದರು.
ನಿಜವಾದ ರಾಜಕರಣಿ ಜಾತಿಗಣತಿ ನಂತರ ಆರಂಭವಾಗುತ್ತದೆ. ರಾಜಕರಣದಲ್ಲಿ ಯಾವ ಜಾತಿಯ ಎಷ್ಟು ಶಕ್ತಿ ಇದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.
ಶೇ.೯೦ರಷ್ಟು ಜನರ ಪಾಲುದಾರಿಕೆ ದೇಶದಲ್ಲಿ ಇಲ್ಲ, ದೇಶವನ್ನು ಕೇವಲ ೯೦ ಐಎಎಸ್ ಅಧಿಕಾರಿಗಳು ನಡೆಸುತ್ತಿದ್ದಾರೆ. ಇವರೇ ಬಜೆಟ್‌ನ ಅನುದಾನ ಹಂಚಿಕೆ ಮಾಡುತ್ತಾರೆ. ರಾಜ್ಯ,ಶಿಕ್ಷಣ, ಅಭಿವೃದ್ದಿಗೆ ಎಷ್ಟು ಅನುದಾನ ನೀಡಬೇಕೆಂಬುದನ್ನು ನಿರ್ಧಾರ ಮಾಡುತ್ತೇರೆಂದರು. ಶೇ.೫೦ ರಷ್ಟು ಹಿಂದುಳಿದ ವರ್ಗ ಜನವಿದ್ದರೆ ಕೇವಲ ೩ ಜನ ಐಎಎಸ್ ಆಧಿಕಾರಿಗಳು ಇದ್ದಾರೆ. ಶೇ. ೧೫ರಷ್ಟು ಜನಸಂಖ್ಯೆ ದಲಿತರು ಇದ್ದರೆ ಕೇವಲ ೩ ಐಎಎಸ್ ಅಧಿಕಾರಿಗಳು ಇದ್ದಾರೆ. ಶೇ. ೮ರಷ್ಟು ಅಧಿವಾಸಿಗಳು ಇದ್ದರೆ ಕೇವಲ ಒಬ್ಬರು ಐಎಎಸ್ ಅಧಿಕಾರಿ ಇದ್ದರೆಂದರು.
ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡುವ ಮೂಲಕ ಮೀಸಲಾತಿಯನ್ನು ಮುಗಿಸಲಾಗಿದೆ. ಸೇನೆಯಲ್ಲಿಯೂ ಅಗ್ನಿವೀರ ಯೋಜನೆ ಜಾರಿಗೆ ತಂದು ಅಲ್ಲಿಯೂ ಯುವಕರಿಗೆ ಕೆಲಸ ಸಿಗದಂತೆ ಮಾಡಲಾಗಿದೆ. ಇದರಿಂದ ದಲಿತರು,ಹಿಂದುಳಿದ ಹಾಗೂ ಅಧಿವಾಸಿಗಳು ಕೆಲಸ ದಿಂದ ವಂಚಿತರಾಗುತ್ತಿದ್ದರೆAದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದು ನುಡಿದ್ದಂತೆ ನಡೆದಿದೆ. ಮಹಿಳೆಯರಿಗೆ ಗೃಹ ಲಕ್ಷಿö್ಮ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳ ೨ ಸಾ.ರೂ. ಖಾತೆಗೆ ಹಾಕಲಾತ್ತಿದೆ. ಅದೇ ರೀತಿ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರತಿ ವರ್ಷಕ್ಕೆ ಮಹಿಳೆಯರ ಖಾತೆಗೆ ೧ ಲಕ್ಷ ರೂ. ಅಂದರೆ ತಿಂಗಳಿಗೆ ೮,೫೦೦ ರೂ. ಖಾತೆ ಬಿಳಲಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರ ಸಹಾಯಧನವನ್ನು ದ್ವಿಗುಣ ಮಾಡಲಾಗುವುದು.ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರಿಗೆ ಪ್ರತಿ ದಿನ ೪೦೦ ರೂ. ಕೂಲಿ ಸೇರಿದಂತೆ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ಘೋಷಣೆಮಾಡಲಾಗಿದೆ ಎಂದರು.


ಪ್ರಜ್ಜಲ್ ರೇವಣ ನೂರಾರು ಮಹಿಳೆಯರ ಮೇಲೆ ಲೈಗಿಂಕ ದೌರ್ಜನ್ಯ ಮಾಡಿ ವಿಡಿಯೋ ಮಾಡಿದರೆಂದು ಆರೋಪಿಸಿ ಬಿಜೆಪಿ ನಾಯಕರೊಬ್ಬರು ಗೃಹ ಸಚಿವ ಅಮೀತ್ ಷಾ ಅವರಿಗೆ ಪತ್ರ ಬರೆದಿದ್ದಾರೆಂದು ಸಭೆಯಲ್ಲಿ ಪತ್ರದ ಪ್ರತಿಯನ್ನು ತೋರಿಸಿ ಮಾತನಾಡಿದ ಅವರು ಈ ವಿಷಯ ಪ್ರಧಾನಿ ಮೋದಿ ಅವರ ಗಮನಕ್ಕೆ ಬಂದರೂ ಸಹ ಲೋಕಸಭಾ ಚುನಾವಣೆಯಲ್ಲಿ ಪ್ರಜ್ಜಲ್ ರೇವಣ್ಣ ಪರ ಅತನ ಪಕ್ಕದಲ್ಲಿ ನಿಂತು ಪ್ರಚಾರ ಮಾಡಿದ್ದಾರೆಂದು ಆರೋಪಿಸಿದರು. ಪ್ರಧಾನಿ ಮೋದಿ ಅವರು ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ ಆರೋಪಿ ಪ್ರಜ್ಜಲ್ ರೇವಣ್ಣ ಅವರನ್ನು ಬೆಂಬಲಿಸಿದ್ದಾರೆAದು ದೂರಿದರು. ದೇಶ, ರಾಜ್ಯದ ಮಹಿಳೆಯರಿಗೆ ಉತ್ತರ ನೀಡಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಎಲ್ಲಾ ಪ್ರಚಾರ ಸಭೆಗಳನ್ನು ರದ್ದು ಪಡಿಸಿ ಓಡಿ ಹೋಗಿದ್ದಾರೆಂದು ಕುಟಿಕಿದರು.
ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ನುಡಿದ್ದಂತೆ ನಡೆದು ಇಂದು ಲೋಕಸಭಾ ಚುನಾವಣೆಯಲ್ಲಿ ಮತ ಕೇಳಲು ಕಾಂಗ್ರೆಸ್ ಪಕ್ಷದವರು ಬಂದಿದ್ದೇವೆ. ಆದರೆ ಬಿಜೆಪಿಯವರು ಕೇವಲ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಮೋದಿ ಮುಖ ನೋಡಿ ಓಟಿ ಕೂಡಿ ಎಂದು ಕೇಳುತ್ತಿದ್ದಾರೆ.
ರೈತರಿಗೆ ನೀಡಬೇಕಾದ ಬರ ಪರಿಹಾರ ೧೮ ಸಾ. ಕೋ.ರೂ. ನೀಡದೆ ಕೇಂದ್ರ ಬಿಜೆಪಿ ಸರಕಾರ ರಾಜ್ಯದ ರೈತರಿಗೆ ಅನ್ಯಾಯ ಮಾಡಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರಕಾರ ನ್ಯಾಯಾಲಯಕ್ಕೆ ಹೋದ ನಂತರ ಕೇವಲ ೩ ಸಾ.ಕೋ. ರೂ. ಬಿಡುಗಡೆ ಮಾಡಲಾಗಿದೆ. ಈ ಎಲ್ಲಾ ಕಾರಣಗಳಿಂದ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.
ಸಚಿವ ಎನ್.ಎಸ್. ಬೋಸರಾಜ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಾಯಕ ಕುಮಾರ ಸೂರಂಕಿ, ಮಾಜಿ ವಿಧಾನ ಪರಿಷತ ಸದಸ್ಯ ತೇಜ್ವಸಿನಿ ಗೌಡ, ಮಾತನಾಡಿರು.
ವೇದಿಕೆ ಮೇಲೆ ಸಚಿವ ಕೆ.ಹೆಚ್.ಮುನಿಯಪ್ಪ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ್ ಪಾಟೀಲ್ ಇಟಗಿ, ಶಾಸಕರಾದ ಹಂಪನಗೌಡ ಬಾದರ್ಲಿ, ದದ್ದಲ್ ಬಸನಗೌಡ, ಹಂಪಯ್ಯ ಸಾಹುಕಾರ, ಬನಸಗೌಡ ತುರುವಿಹಾಳ,ವಿಧಾನ ಪರಿಷತ ಸದಸ್ಯ ಶರಣಗೌಡ ಬಯ್ಯಾಪುರ,ಕೆಪಿಸಿಸಿ ಕಾರ್ಯಧ್ಯಕ್ಷ ಎ.ವಸಂತ ಕುಮಾರ, ಮಾಜಿ ಶಾಸಕ ಸೈಯದ್ ಯಾಸೀನ್, ಪರಾಜಿತ ಅಭ್ಯರ್ಥಿ ಮಹ್ಮದ್ ಶಾಲಂ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಮಹ್ಮದ್ ಫರೀದ್ ಖಾನ್, ಮಾಜಿ ಶಾಸಕ ಡಿ.ಎಸ್.ಹುಲಗೇರಿ, ಶ್ರೀದೇವಿ ನಾಯಕ, ಪಾಮಯ್ಯ ಮುರಾರಿ, ರವಿ ಬೋಸರಾಜ್, ಜಿ.ಬಸವರಾಜ ರೆಡ್ಡಿ,ಜಯಣ್ಣ, ರುದ್ರಪ್ಪ ಅಂಗಡಿ ಸೇರಿದಂತೆ ಅನೇಕರು ಉಪಸ್ಥಿರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";