ರಾಯಚೂರು: ಮೇ-20:
ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದರೂ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಪಾವತಿಸಿದರೂ ವಿಮೆ ಪಾವತಿ ಮಾಡದೇ ಇರುವುದನ್ನು ಖಂಡಿಸಿ ಹಾಗೂ ರಾಜ್ಯ ಸರಕಾರ ದಿಂದ ಬರಪರಿಹಾರದಲ್ಲಿ ತಾರತಮ್ಯವನ್ನು ಪಡಿಸಿ ರೈತರಿಗೆ ನ್ಯಾಯ ಒದಗಸಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಿ, ೨೦೨೩-೨೪ ಸಾಲಿನಲ್ಲಿ ಜಿಲ್ಲೆಯಾದ್ಯಂತ ರೈತರು ಬೆಳೆಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಪಾವತಿಸಿದ್ದಾರೆ.
ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದರೂ, ಸಹ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಬೆಳೆ ವಿಮೆ ಪಾವತಿಸಿದರೂ ರಐತರಿಗೆ ನಿಯಮಾನುಸಾರ ಬೆಳೆ ವಿಮೆ ಪಾಔತಿಯಾಗಿಲ್ಲ, ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮಾನವಿ ಮತ್ತು ದೇವದುರ್ಗ ತಲೂಕಿನಲ್ಲಿ ಪ್ರಧನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ನೂರಾರು ಕೋಟಯಷ್ಟು ಬೆಳೆ ವಿಮಾ ಕಂಪನಿಯಿAದ ಭಾರೀ ಭ್ರಷ್ಠಾಚಾರ ನಡೆದಿದೆ. ರೈತರು ತಮ್ಮ ಬೆಳೆಗಳ ವಿಮೆ ಹಣ ಪಾವತಿಸಿದನ್ನು ರೈತರಿಗೆ ಸೇರಬೇಕಾದ ವಿಮೆ ಹಣವನ್ನು ವಿಮೆ ಕಂಪನಿಯರು ಮತ್ತು ಪ್ರಭಾವಿ ವ್ಯಕ್ತಿಗಳು ಸೇರಿಕೋಮಡು ನೂರಾರು ಕೋಟಿ ಹಣವನ್ನು ಲೂಟಿ ಮಾಡಿದ್ದಾರೆಂದು ಆರೋಪಿಸಿದರು.
೨೦೨೩-೨೪ನೇ ಸಾಲಿನಲ್ಲಿ ಜಿಲ್ಲೆ ಬರ ಪ್ರದೇಶವೆಂದು ಘೋಷಣೆಯಾಗಿದೆ. ಆದರೆ ಬರ ಪರಿಹಾರದಲ್ಲಿ ಕಂದಾಯ ಇಲಾಖೆ ತಾರಮ್ಯ ನೀತಿ ಅನುಸರಿಸಿದೆ. ಇನ್ನೂ ಕೆಲ ರೈತರಿಗೆ ಬರ ಪರಿಹಾರ ಮಂಜೂರು ಮಾಡಿಲ್ಲವೆಂದು ದೂರಿದರು. ಜಿಲ್ಲೆಯಲ್ಲಿ ಕಳಪೆ ಹತ್ತಿ ಬೀಜ ಮತ್ತು ರಸಗೊಬ್ಬರ, ಕ್ರಿಮಿನಾಶಗಳು ಮಾರಾಟ ಮಾಡಲಾಗುತ್ತಿದೆ. ಜಿಲ್ಲಾಡಳಿತ, ಕೃಷಿ ಇಲಾಖೆ ಇದರ ಬಗ್ಗೆ ನಿರ್ಲಕ್ಷö್ಯವಹಿಸಿವೆ ಎಂದು ದೂರಿದರು. ಜೋಳ ಖರೀದಿ ಕೇಂದ್ರಗಳಲಿ ಜೋಳ ಮಾರಾಟ ಮಾಡಿದ್ದು, ರೈತರ ಖಾತೆಗೆ ಹಣ ಪಾವತಿ ಮಾಡಿಲ್ಲವೆಂದು ದೂರಿದರು. ಕೂಡಲೇ ಎಚ್ಚೆತ್ತಕೊಂಡು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷö ಲಕ್ಷö್ಮಣಗೌಡ ಕಡಂಗAದೊಡ್ಡಿ, ನರಸಿಂಗರಾವ್ ಕುಲಕರ್ಣಿ, ನರಸಪ್ಪ ಯಾದವ್,ವೀರೇಶ ಗೌಡ, ಅಕ್ಕಮ್ಮ, ಅಬ್ದುಲ್ ಮಜೀದ್, ಹುಲಿಗೆಪ್ಪ, ರಮೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.