ರಾಯಚೂರು: ಆ-21:
ನಗರಸಭೆಯ ಆಸ್ತಿಕರ,ನಳಕರ,ಲೈಸನ್ಸ್ ನವೀಕರಣ ಸೇರಿದಂತೆ ಇನ್ನೀತರ ಕರಗಳನ್ನು ಪಾವತಿಸದೇ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಕರ ಪಾವತಸದ ಅಂಗಡಗಳ ಬಾಗಿಲು(ಶೆಟರ್)ಗಳೀಗೆ ನಗರಸಭೆಯ ಬೀಗ ಜಡಿದರು.
ನಗರಸಭೆ ಪೌರಾಯುಕ್ತರು ಮತ್ತು ಸಿಬ್ಬಂದಿ ಬುಧವಾರದಂದು ಡಾ.ಬಿ.ಆರ್. ಅಂಬೇಡ್ಕರ ವೃತ್ತ ಬಳಿಯ ನೃಪತುಂಗ ಹೋಟೆಲ್ ನಿಂದ ಕಾರ್ಯಚರಣೆ ಪ್ರಾರಂಭಿಸಿದ್ದಾರೆ. ಅನೇಕ ವರ್ಷಗಳಿಂದ ನಗರಸಭೆಗೆ ಕರ ಪಾವತಿಸದೇ ಇರುವವರ ವಿರುದ್ದ ನೋಟಿಸ್ ಜಾರಿ ಮಾಡಿದ್ದರೂ ಸ್ಪಂದಿಸದೇ ಇರುವವರ ಮನೆ ಬಾಗಿಲಿಗೆ ಹೋಗಿ ಕರ ವಸೂಲಿ ಕಾರ್ಯಮಾಡುವ ಕಾರ್ಯಕ್ಕೆ ಸಿಬ್ಬಂದಿಗಳು ಮುಂದಾಗಿದ್ದಾರೆ. ಅಂಗಡಿಗಳು ಕರಪಾವಸುವದು, ಲೈಸನ್ಸ್ ನವೀಕರಣಗೊಳಿಸವಂತೆ ಸೂಚಿಸಿದ್ದರೂ ಕರ ಪಾವಸದೇ ಇರುವರ ಪಟ್ಟಿ ಸಿದ್ದಪಡಿಸಿಕೊಂಡಿರುವ ನಗರಸಭೆ ಸಿಬ್ಬಂದಿಗಳು ಅಂಗಡಿಗಳಿಗೆ ತೆರಳಿ ಸ್ಥಳದಲ್ಲಿಯೇ ಪರಿಶೀಲನೆ ಮಾಡಿ ನಳಗಳ ಸಂಪರ್ಕ ಕಡಿತ, ವ್ಯಾಪಾರ ವಹಿವಾಟು ಮಳಿಗೆಗಳಿಗೆ ಬೀಗ ಹಾಕಿದ್ದಾರೆ. ನಗರಸಭೆ ಸಿಬ್ಬಂದಿ ಕಾರ್ಯಚರಣೆಯಿಂದ ವ್ಯಾಪಾರಸ್ಥರು ಬಾಕಿ ಇರುವ ಕರ ಪಾವತಿಸಲು ಮುಂದಾಗಿದ್ದಾರೆ. ಅನೇಕರು ಹತ್ತಾರು ವರ್ಷಗಳಿಮದ ಕರ ಪಾವತಿಸದೇ ಇರುವದು ಪತ್ತೆಯಾಗಿದ್ದು ಎಚ್ಚರಿಕೆಯನ್ನು ನಗರಸಭೆ ಸಿಬ್ಬಂದಿ ನೀಡಿದ್ದಾರೆ.