ರಾಯಚೂರು:ಆ-6:
ರಾಯಚೂರು ನಗರಸಭೆ ಅಧ್ಯಕ್ಷ ಸ್ಥಾನ ಎಸ್.ಸಿ. ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಎ ಮೀಸಲು ಘೋಷಣೆಯಾದಿದ್ದೆ ತಡ ರಾಜಕೀಯ ಚಟುವಟಿಕೆಗಳು ಗರಗದೆರಿದ್ದು, ಆಕಾಂಕ್ಷಿಗಳು ಚುನಾವಣೆ ಸಿದ್ದತೆಗೆ ಸಿದ್ದವಾಗಿದ್ದಾರೆ.
ರಾಯಚೂರು ನಗರಸಭೆಯಲ್ಲಿ ೩೫ ಸದಸ್ಯರ ಬಲದಲ್ಲಿ ಕಾಂಗ್ರೆಸ್ ಪಕ್ಷ ದಿಂದ ೧೧ ಜನ ಮತ್ತು ೯ ಜನ ಕ್ಷೇತರರು ಇದ್ದಾರೆ. ಇವರು ಸಹ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಹೊಸದಾಗಿ ಸಂಸದ ಜಿ.ಕುಮಾರ ನಾಯಕ ಮತ್ತು ಮೂರು ಜನ ವಿಧಾನ ಪರಿಷತ ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಾಪುರ, ಎ.ವಸಂತಕುಮಾರ ಸೇರಿದಂತೆ ನಾಲ್ಕು ಜನ ವಿಧಾನಪರಿಷತ ಸದಸ್ಯರು ಕಾಂಗ್ರೆಸ್ ಪಕ್ಷದವರು ಇದ್ದರೆ. ಇದರಿಂದ ಕಾಂಗ್ರೆಸ್ ಪಕ್ಷದ ಐದು ಮತಗಳು ಹೆಚ್ಚಾಗಿವೆ.
ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದ ಹಿನ್ನಲೆಯಲ್ಲಿ ಸಾಜೀದ್ ಸಮೀರ್ ಅಥವಾ ಜಿಂದಪ್ಪನವರ ಹೆಸರು ಮುಂಚೂಣಿಯಲ್ಲಿ ಇದೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧಾರ ಅಂತಿಮ ನಿರ್ಧಾರವಾಗಬೇಕಾಗಿದೆ. ಮುಸ್ಲಿಂ ಸಮುದಾಯಕ್ಕೆ ಉಪಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳು ಹೆಚ್ಚಿದ್ದು, ಕಾಂಗ್ರೆಸ್ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಾಗಿದೆ.
ಬಿಜೆಪಿ ಪಕ್ಷ ಸಹ ೧೨ ಸದಸ್ಯರ ಬಲ ಹೊಂದಿದ್ದು, ವಾರ್ಡ ನಂ.೧೩ ಉಮಾ ರವೀಂದ್ರ ಜಲ್ದಾರ್ ವಾರ್ಡ ನಂ. ೬ರ ಬುಜಮ್ಮ ಶಂಕರಪ್ಪ ಇವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಉಪಾಧ್ಯಕ್ಷ ಸ್ಥಾಮನಕ್ಕೆ ಬಹುತೇಕರ ಹೆಸರುಗಳು ಕೇಳಿಬರುತ್ತಿವೆ. ಜೆಡಿಎಸ್ ಪಕ್ಷ ಮೂರು ಸದಸ್ಯರ ಬಲ ಹೊಂದಿದ್ದು, ಬಿಜೆಪಿ ಬೆಂಬಲಿಸಬಹುದೆAದು ಹೇಳಲಾಗುತ್ತಿದೆ. ಕೊನೆಯಲ್ಲಿ ಏನಾದರೂ ಸಂಭವಿಸುವ ಸಾಧ್ಯತೆಗಳು ಇವೆ. ಇನ್ನೂ ಚುನಾವಣೆ ದಿನಾಂಕ ಘೋಷಣೆಯಾಗಿಲ್ಲ, ಅಲ್ಲಿವರೆಗೂ ಕಾದು ನೋಡಬೇಕಾಗಿದೆ.