ರಾಯಚೂರು,ಆ.23: ಕರ ಪಾವತಿಸಿಲ್ಲವೆಂದು ನಗರಸಭೆ ಪೌರಾಯುಕ್ತರು ಅಂಗಡಿಗಳನ್ನು ಸೀಲ್ ಮಾಡುವ ಮುನ್ನ ಅಂಗಡಿ ಮಾಲೀಕರಿಗೆ ನೋಟಿಸ್ ನೀಡದೆ ಸೀಲಿಂಗ್ ಮಾಡುವುದು ಅನಪೇಕ್ಷಿತ ಮತ್ತು ಉದ್ಯಮಿಗಳ ಖ್ಯಾತಿಗೆ ಧಕ್ಕೆ ತರುವ ಅಸಭ್ಯ ಕಾರ್ಯವಾಗಿದೆ ಎಂದು ಜಿಲ್ಲಾ ವಾಣಿಜ್ಯೋಧ್ಯಮ ಸಂಘದ ಮಾಜಿ ಅಧ್ಯಕ್ಷ ತ್ರಿವಿಕ್ರಮ ಜೋಶಿ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಇತರೆ ಸಂಘಗಳು ಮತ್ತು ವರ್ತಕ ಸಂಸ್ಥೆಗಳು ಟ್ರೇಸ್ ಲೈಸೆನ್ಸ್ ಕುರಿತು ನಗರದ ಆಶಾಪೂರ ಕಲ್ಯಾಣ ಮಂಟಪದಲ್ಲಿ ಸಭೆ ನಡೆಯಿತು.
ಎಂಎಸ್‌ಎಂಇ, ಉದ್ಯಮ ನೋಂದಾಯಿತ ಸಂಸ್ಥೆಗಳು, ವ್ಯಾಪಾರ, ಅಂಗಡಿಗಳೂ, ಈ ಟ್ರೇಡ್ ಲೈಸೆನ್ಸ್ ಪೂರ್ವ ವೀಕ್ಷಣೆಯ ಅಡಿಯಲ್ಲಿ ಬರುವುದಿಲ್ಲವೆಂದರು.
ನಗರಸಭೆ ಕಾಯ್ದೆ ಪ್ರಕಾರ ಶುಲ್ಕ500 ರೂ. ಮೀರಬಾರದು, ಈಗಿನ ಶುಲ್ಕವು ಅತಿ ಹಚ್ಚಾಗಿದೆ.ಇದರ ಬಗ್ಗೆ ನಗರಸಭೆ ಅಧಿಕಾರಿಗಳು ಸ್ಪಷ್ಟಪಡಿಸಬೇಕು, ನಗರಸಭೆ 2018 ರಿಂದ ಶುಲ್ಕ ಸಂಗ್ರಹ ಮಾಡುವುದಕ್ಕೆ ಅಧಿಕಾರ ಹೊಂದಿದೆ. ಕೋವಿಡ್ ಸಂದರ್ಭದಲ್ಲಿ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ. ಯಾವುದೇ ವ್ಯಾಪಾರ ಚಟುವಟಿಕೆಯನ್ನು ಮಾಡಲಾಗಿಲ್ಲ, ಆ ಅವಧಿಗೆ ಕರ ಪಾವತಿಸುವುದು ಕಷ್ಟ, ಒಂದು ಸಮಿತಿಯನ್ನು ರಚಿಸಲು ಮತ್ತು ಈ ಎಲ್ ವಿಷಯಗಳನ್ನು ಸಂಭ0ದಪಟ್ಟ ಅಧಿಕಾರಿಗಳಿಗೆ ವಹಿಸಲು ನಿರ್ಧರಸಲಾಯಿತು.
ಅಗತ್ಯವಿದ್ದರೆ ಕಾನೂನು ತಜ್ಞರನ್ನು ನೇಮಿಸಿಕೊಳ್ಳವುದು, ವಾಣಿಜ್ಯೋಧ್ಯಮ ಸಂಘದ ನಿಯೋಗ ನಗರಸಭೆ ಸದಸ್ಯರ ನೇತೃತ್ವದಲ್ಲಿ ಪೌರಾಯುಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದೆಂದರು.
ಸಭೆಯ್ಲಿ ಮದ್ಯದ ಸಂಯೋಜನೆ, ಎಲೆಕ್ಟ್ರಕಲ್, ಕಿರಾಣಿ ಅಂಗಡಿಗಳ ಮಾಲೀಕರು,ಹಾರ್ಡವೇರ್ ಮತ್ತು ಸ್ಯಹಾನಟರಿ, ಬಟ್ಟೆ ಅಂಗಡಿ,ರಸಗೊಬ್ಬರ, ಸಗಟು ಮಾರಾಟಗಾರರು,ವೈದ್ಯಕೀಯ ಸಂಘದವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಕಮಲ ಕುಮಾರ ಕಾರ್ಯದರ್ಶಿ ಜಂಬಣ್ಣ,, ಸಾವಿತ್ರಿ ಪುರಷೋತ್ತಮ, ಗಾರಲದಿನ್ನಿ ಸಿದ್ದನಗೌಡ, ಮಾರಂ ತಿಪ್ಪಣ್ಣ, ಮಾರಂ ತಿಪ್ಪಣ್ಣ, ವಿ.ಲಕ್ಷ್ಮಿ ರೆಡ್ಡಿ, ಮಂಜುನಾತ ಹಾನಗಲ್, ಸಂದೀಪ್ ವಕೀಲ್, ಸ.ಎ.ಸಂಭವ್ ಬೋಹ್ರಾ ಉಪಸ್ಥಿತರಿದ್ದರು.
ಕರ ವಸೂಲಿ ಹೆಸರಿನಲ್ಲಿ ಅಂಗಡಿಗಳಿಗೆ ಬೀಗ ಜಡಿಯುವದು ಉದ್ಯಮಿಗಳ ಖ್ಯಾತಿಗೆ ಧಕ್ಕೆ ತರುವ ಅಸಭ್ಯ ಕಾರ್ಯ-ತ್ರಿವಿಕ್ರಮ ಜೋಶಿ
WhatsApp Group
Join Now