ರಾಯಚೂರು :
ನಗರದ ವಾರ್ಡ್ ನಂಬರ್ 21ರ ದೇವಿ ನಗರ ಬಡಾವಣೆಯಲ್ಲಿರುವ ರಾಜಕಾಲುವಿಗೆ ನಗರಸಭೆ ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯರುಗಳೊಂದಿಗೆ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಭೇಟಿ ನೀಡಿ ರಾಜಕಾಲುವೆಯ ಸ್ವಚ್ಛತೆಯ ಬಗ್ಗೆ ಪರಿಶೀಲಿಸಿದರು.
ರಾಜಕಾಲುವೆಗೆ ಹೆಚ್ಚಿನ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯದಂತೆ ಜನರಿಗೆ ಜಾಗೃತಿ ಮೂಡಿಸಬೇಕು. ಕಲುಷಿತ ತ್ಯಾಜ್ಯ ದೊಂದಿಗೆ ನೀರು ಹರಿಯದಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ, ಡೆಂಗ್ಯೂದಂತ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಶೀಘ್ರ ರಾಜಕಾಲುವೆ ಸಂಪೂರ್ಣ ಸ್ವಚ್ಛತೆಗಾಗಿ ಅಗತ್ಯ ಕ್ರಮಕೈಗೊಂಡು ರಾಜಕಾಲುವೆಯಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನರಸಿಂಹಲು ಮಾಡಗಿರಿ, ನಗರಸಭೆ ಸದಸ್ಯರಾದ ಜಿ ತಿಮ್ಮಾರೆಡ್ಡಿ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಅರುಣದೋತರ ಬಂಡಿ, ಗೋಪಾಲ್, ಶರಣಬಸವ ರಡ್ಡಿ, ಉರುಕುಂದಪ್ಪ, ವಿನೋದ್ ಕುಮಾರ್, ಮಹದೇವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.