ರಾಯಚೂರು: ಮೇ-21:
ಜೂನ್ ಮೊದಲವಾರದಲ್ಲಿ ಮುಂಗಾರು ಪ್ರವೇಶಿಸುವ ಮುನ್ಸೂಚನೆಗಳಿದ್ದು, ರೈತರಿಗೆ ಬೇಕಾದ ಬೀಜ, ಗೊಬ್ಬರ ದಾಸ್ತಾನ ಮಾಡಲು ಬೇಕಿರುವ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಬರ ಪರಿಹಾರ ಹಾಗೂ ಮುಂಗಾರು ಸಿದ್ದತೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಇಲ್ಲಿಯವರಗೆ ಸುರಿದ ಮಳೆ ಕುರಿತು ಕೃಷಿ ಇಲಾಖೆ ಮಾಹಿತಿ ಪಡೆದು ಮಾತನಾಡುತ್ತ, ರಾಜ್ಯ ಮಟ್ಟದಿಂದ ಪೂರೈಕೆಯಾಗುವ ಬೀಜಗಳ ಬಢೆಇಕೆ ಅನುಗುಣವಾಗಿ ಪೂರೈಸಲು ಕ್ರಮಗಳನ್ನು ಕೈಗೊಳ್ಳಬೇಕು, ಪೂರೈಕೆಯಲ್ಲಿ ತೊಂದರೆಯಾದಲ್ಲಿ ಪೂರ್ವ ಮಾಹಿತಿನೀಡುವಂತೆ ಸೂಚಿಸಿದರು. ಕಳಪೆ ಬೀಜಗಳು ಮಾರಾಟವಾಗುತ್ತಿರುವ ದೂರಳಿದ್ದು ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಬೇಕು, ಯಾವುದೇ ಕೊರತೆಯಾಗದಂತೆ ಇಲಾಖೆ ಎಚ್ಚರಿಕೆ ವಹಿಸಬೇಕೆಂದು ಸಚಿವರು ಸೂಚಿಸಿದರು.
ಬರಪರಿಹಾರ ಹಣ ವಿತರಣೆಯನ್ನು ಸುಗಮವಾಗಿ ನಿರ್ವಹಿಸಿಬೇಕು, ಅನೇಕ ರೈತರಿಗೆ ಪರಿಹಾರ ತಲುಪದೇ ಇರುವ ದೂರುಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಮಾಹಿತಿ ನೀಡಿ ಮೊದಲ ಹಂತದಲ್ಲಿ ರೈತರಿಗೆ ಖಾತೆ ಪರಿಹಾರ ಹಣ ಜಮಾ ಮಾಡಲಾಗಿದೆ. ತಾಂತ್ರಿಕ ಸಮಸ್ಯೆ ಇರುವ ರೈತರಿಗೆ ಸಹಾಯಕವಾಣಿ ಸ್ಥಾಪಿಸಿ ದೂರುಗಳನ್ನು ಇತ್ಯರ್ಥಪಡಿಸಲು ಸೂಚಿಸಲಾಗಿದೆ. ಹತ್ತು ಹಂತದಲ್ಲಿ ಪರಿಹಾರ ವಿತರಣಾ ಕಾರ್ಯ ನಡೆಸಲಾಗುತ್ತಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಎಸ್‌ಎಫ್ ನಿಯಮಗಳಂತೆ ಪರಿಹಾರ ಕೈಗೊಳ್ಳಲಾಗುತ್ತಿದೆ. ತಾಂತ್ರಿಕ ಸಮಸ್ಯೆ ಇರುವ ರೈತರ ಖಾತೆಗಳ ಮಾಹಿತಿ ಕ್ರೋಢಿಕರಿಸಿ ಪರಿಹಾರ ವಿತರಣೆ ಗಮನ ನೀಡಲಾಗಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಲಾಗುತ್ತಿದೆ. ನಗರದ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳಿAದ ಆದ್ಯತೆ ಮೇಲೆ ನೀರು ಪೂರೈಸಲಾಗುತ್ತಿದೆ. ಸಿಂಧನೂರು, ದೇವದುರ್ಗ,ದ ರಾಯಚೂರು ನಗರದಲ್ಲಿ ನೀರಿನ ಸಮಸ್ಯೆಯಾಗಿದ್ದು, ದಿನ ಬಇಟ್ಟು ದಿನ ನೀರು ಪೂರೈಸಲಾಗುತ್ತಿದೆ. ತಾತ್ಕಾಲಿಕ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ತುಕಾರಂ ಪಾಂಡ್ವೆ, ಲಿಂಗಸೂಗೂರ ಮತ್ತು ರಾಯಚೂರು ಸಹಾಯಕ ಆಯುಕ್ತರು,ತಹಶೀಲ್ದಾರರು ಇತರೆ ಅಧಿಕಾರಿಗಳು ಭಾಗವಹಿಸಿದರು.