ರಾಯಚೂರು: ಜೂ-೧:
ಶಕ್ತಿನಗರದ ಕರ್ನಾಟಕ ವಿದ್ಯುತ್ ನಿಗಮದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದ್ದು, ಗುತ್ತಿಗೆ ಪಡೆದ ಸಂಸ್ಥೆ ಕನ್ನಡ ಮಾಧ್ಯಮವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದು, ಸಂಸ್ಥೆ ಮೇಲೆ ಕ್ರಮ ಕೈಗೊಂಡು ತಕ್ಷಣ ಕನ್ನಡ ಮಾಧ್ಯಮವನ್ನು ಪುನಃ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಕನ್ನಡ ಕ್ರಿಯಾ ಸಮಿತಿ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಶಕ್ತಿನಗರದ ಕರ್ನಾಟಕ ವಿದ್ಯುತ್ ನಿಗಮದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ೨೦೦೮ರಲ್ಲಿ ದಯಾನಂದ ಆಂಗ್ಲೋ ವೇದಿಕೆ ಸಂಸ್ಥೆಗೆ ಗುತ್ತಿಗೆ ನೀಡಲಾಯಿತು. ಎಲ್.ಕೆ.ಜಿ. ಯಿಂದ ೧೦ನೇ ತರಗತಿವರೆಗೆ ಕನ್ನಡ ಮಾಧ್ಯಮವನ್ನು ಪ್ರತಿ ವರ್ಷ ಒಂದೊAದು ತರಗತಿಯನ್ನು ಮುಚ್ಚುತ್ತಾ ಬಂದಿದೆ. ಇದೀಗ ೧೦ನೇ ತರಗತಿವರಗೆ ಸಂಪೂರ್ಣವಾಗಿ ಕನ್ನಡ ಮಾಧ್ಯಮ ಬಂದ್ ಮಾಡಿದ್ದಾರೆ. ಕೇವಲ ಇಂಗ್ಲಿಷ ಮಾಧ್ಯಮ ಮಾತ್ರ ನಡೆಯುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಕನ್ನಡ ಮಾಧ್ಯಮ ಶಾಲೆ ಅನುಮತಿ ಪಡೆದು ಇಂಗ್ಲಿಷ ಮಾಧ್ಯಮ ಶಾಲೆ ನಡೆಸುತ್ತಿದದ್ದಾರೆ. ಸರಕಾರಿ ಸಂಸ್ಥೆಯಾಗಿದ್ದು, ಶಾಲೆಯನ್ನು ಗುತ್ತಿಗೆ ನೀಡಿ ಕನ್ನಡ ಮಾಧ್ಯಮವನ್ನು ಬಂದ್ ಮಾಡಿದ್ದಾರೆ. ಕನ್ನಡ ಮಾಧ್ಯಮ ಬಂದ್ ಮಾಡಲೆಂದೇ ಗುತ್ತಿಗೆ ನೀಡಲಾಗಿದೆಯೇ ಎಂದು ಪ್ರಶ್ನಿಸಿಲಾಗಿದೆ.
ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ಧೇಶಕರಿಗೆ(ಡಿಡಿಪಿಐ) ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲವೆಂದು ದೂರಿದ್ದಾರೆ. ಕ್ರಮಕ್ಕೆ ಮುಂದಾಗದ ಡಿಡಿಪಿಐ ಅವರನ್ನು ಕರ್ತವ್ಯ ಲೋಪದಡಿಯಲ್ಲಿ ಸೇವೆಯಿಂದ ಅಮಾನತ್ತು ಮಾಡಬೇಕು, ಪುನಃ ಕನ್ನಡ ಮಾಧ್ಯಮ ಆರಂಭಿಸಬೇಕೆAದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ, ರಾಮಲಿಂಗಪ್ಪ ಕುಣಸಿ, ಸಿದ್ರಾಮಪ್ಪ ಮಾಲಿ ಪಾಟೀಲ್, ಬಶೀರ್ ಅಹ್ಮದ್ ಹೊಸಮನಿ, ಹನುಮೇಶ ಗೂಳಿ, ರುದ್ರಯ್ಯ ಗುಣಾರಿ, ವೀರಭದ್ರಯ್ಯ ಸ್ವಾಮಿ, ಮಹೇಂದ್ರ ಸಿಂಗ್, ಕೆ.ವೀರೇಶ ಬಆಬು, ರಫಿಕ್ ಅಹ್ಮದ್,ಮಲ್ಲಿಕಾರ್ಜುನ ನಡುವನಿ, ರಾಮಣ್ಣ ಮ್ಯಾದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.