ರಾಯಚೂರು,ಸೆ.06: ಇಡಪನೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಂಬಲದಿನ್ನಿ ಸೀಮಾಂತರದ ಯರಾಗೇರಾ-ಕರ್ನೂಲ್ ರಸ್ತೆಯಲ್ಲಿರುವ ನಾಯರ ಪೆಟ್ರೋಲ್ ಬಂಕ್‌ನಲ್ಲಿ ಕಳವು ಮಾಡಿ ಪರಾರಿಯಾಗಿದ್ದ ಅಂತರರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೆ.3 ರಂದು ಪೆಟ್ರೋಲ್ ಬಂಕ್‌ನಲ್ಲಿ ಸುಮಾರು ರಾತ್ರಿ 2 ಗಂಟೆಗೆ ಐಫೋನ್-15, ಅಂದಾಜು 70 ಸಾ.ರೂ.ವಿವೋ ಫೋನ್ ಅಂದಾಜು 5 ಸಾ.ರೂ.ವಿವೂ ಮೋಬೈಲ್ ಅಂದಾಜು 8 ಸಾ.ರೂ.ವಿವೋ ಮೋಬೈಲ್ ಅಂದಾಜು 6 ಸಾ.ರೂ.ವಿವೋ ಮೋಬೈಲ್ ಅಂದಾಜು 5 ಸಾ.ರೂ. ಹೀಗೆ ಒಟ್ಟು 5 ಮೋಬೈಲ್ಅಂದಾಜು 95 ಸಾ.ರೂ. ಬೆಳೆ ಬಾಳುವ ಮೋಬೈಲ್‌ಗಳನ್ನು ಯಾರೋ ಕಳ್ಳರು ಕಳತನ ಮಾಡಿ ಪರಾರಿಯಾಗಿದ್ದರು. ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟ ಮಾದಯ್ಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಆರ್.ಜಿ.ಹರೀಶ,ಡಿವೈಎಸ್‌ಪಿ ಸತ್ಯನಾರಾಯಣರಾವ್ ಮಾರ್ಗದರ್ಶನದಲ್ಲಿ ಯರಗೇರಾ ಸಿಪಿಐ ನಿಂಗಪ್ಪ ನೇತೃತ್ವದಲ್ಲಿ ಪಿಎಸ್‌ಐ ಅವಿನಾಶ ಕಾಂಬಳೆ ಮತ್ತು ಸಿಬ್ಬಂದಿಯನ್ನೋಳಗೊ0ಡ ವಿಶೇಷ ತಂಡ ರಚಿಸಲಾಗಿತು.
ಈ ವಿಶೇಷ ತಂಡ ಸದರಿ ಪ್ರಕರಣದ ಆರೋಪಿ ಚಾಪಲಕೂರ ರಾಮಾಂಜಿನೇಯಲು ಚಾಪಲಕೂರ ಪೆದ್ದ ಸೋಮಪ್ಪ (27) ಸಾ.ಪೋಲಕಲ್ಲು ಮಂಡಲ0-ಸಿ.ಬೆಳಗಲ್ ತಾ.ಆಲೂರು ಜಿ.ಕರ್ನೂಲ್ ಈತನ್ನು ಬಂಧಿಸಿ ಆರೋಪಿತನಿಂದ ಒಂದು ಮೋಟಾರ್ ಸೈಕಲ್, ಕಳುವಾದ ಐದು ಮೊಬೈಲ್‌ಗಳು ಜಪ್ತಿ ಮಾಡಿದೆ.
ಪ್ರಕರಣವನ್ನು ಭೇದಿಸಿದ ವಿಶೇಷ ತಂಡದ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಆಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷರು,ಹೆಚ್ಚುವರಿ ಅಧೀಕ್ಷಕರು-೨ ಶ್ಲಾಘಿಸಿ ನಗದು ಬಹುಮಾನವನ್ನು ನೀಡಿದ್ದಾರೆ.