ರಾಯಚೂರು: ಮೇ-೨೭: ಪ್ರತಿ ವರ್ಷದಂತೆ ಕಾರಹುಣ್ಣಿಮೆ ಅಂಗವಾಗಿ ಮುನ್ನೂರು ಕಾಪು ಸಮಾಜ ದಿಂದ ೨೪ ವರ್ಷದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಜೂ.೨೧ ರಿಂದ ೨೩ರ ವರೆಗೆ ಮೂರು ಎತ್ತುಗಳು ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮುಂಗಾರು ಸಂಸ್ಕೃತಿಕ ರಾಯಚೂರು ಹಬ್ಬದ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಎ.ಪಾಪರೆಡ್ಡಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು ಜೂನ್ ೨೧ ರಂದು ರಾಯಚೂರಿನ ಹಾಗೂ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿವು ಎತ್ತುಗಳ ಸ್ಪರ್ಧೆ ಮಾತ್ರ ನಡೆಯಲಿದೆ. ಜೂ ೨೨ ಮತ್ತು ೨೩ ರಂದು ಕರ್ನಾಟಕ ರಾಜ್ಯ ಆಂದ್ರ ಪ್ರದೇಶ ಮತ್ತು ಇನ್ನೀತರ ರಾಜ್ಯಗಳಿಂದ ಆಗಮಿಸುವ ಭಾರಿ ಎತ್ತುಗಳ ಭಾರಿ ಭಾರದ ಕಲ್ಲು ಎಳೆಯುವ ಸ್ಪರ್ಧೆಗಳು ರಾಯಚೂರು ರಾಜೇಂದ್ರ ಗಂಜ್ ಬಯಲಿನಲ್ಲಿ ನಡೆಯಲಿವೆ ಎಂದರು.
ಜೂ.೨೧ ರಂದು ಒಂದುವರೆ ಟನ್ ಎತ್ತುಗಳು ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಕರ್ನಾಟಕದವರಿಗೆ ಮಾತ್ರ ಪ್ರವೇಶವಿದ್ದು, ಪ್ರಥಮ ಬಹುಮಾನ ೬೫ ಸಾ.ರೂ. ದ್ವೀತಿಯ ಬಹುಮಾನ ೫೫ ಸಾ.ರೂ.ತೃತೀಯ ಬಹುಮಾನ ೪೫ ಸಾ.ರೂ.ನಾಲ್ಕನೇ ಬಹುಮಾನ ೩೫ ಸಾ.ರೂ.ಐದನೇ ಬಹುಮಾನ ೩೦ ಸಾ.ರೂ.ಆರನೇ ಬಹುಮಾನ ೧೫ ಸಾ.ರೂ. ಏಳನೇ ಬಹುಮಾನ ೧೦ ಸಾ.ರೂ. ನೀಡಲಾಗುವುದೆಂದರು.
ಅದೇ ರೀತಿ ಜೂ.೨೨ರಂದು ೨ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ಇದ್ದು, ಇದು ಅಖಿಲ ಭಾರತ ಮುಕ್ತ ಅವಕಾಶವಿದ್ದು, ಎಲ್ಲಾ ರಾಜ್ಯದವರು ಭಾಗವಹಿಸಬಹುದಾಗಿದೆ. ಪ್ರಥಮ ಬಹುಮಾನ ೮೦ ಸಾ.ರೂ. ದ್ವೀತಿಯ ಬಹುಮಾನ ೬೫ ಸಾ.ರೂ.ತೃತೀಯ ಬಹುಮಾನ ೫೫ ಸಾ.ರೂ.ನಾಲ್ಕನೇ ಬಹುಮಾನ ೪೫ ಸಾ.ರೂ.ಐದನೇ ಬಹುಮಾನ ೪೦ ಸಾ.ರೂ.ಆರನೇ ಬಹುಮಾನ ೩೦ ಸಾ.ರೂ. ಏಳನೇ ಬಹುಮಾನ ೨೦ ಸಾ.ರೂ. ನೀಡಲಾಗುವುದೆಂದರು.
ಜೂ.೨೩ ರಂದು ಹಿರಿಯ ವಿಭಾಗದ ಅಖಿಲ ಭಾರತ ಮುಕ್ತ ಅವಕಾಶವಿದ್ದು, ಎರಡುವರೆ (೨, ೧/೨ )ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಾಗಿದ್ದು,
ಪ್ರಥಮ ಬಹುಮಾನ ೯೦ ಸಾ.ರೂ. ದ್ವೀತಿಯ ಬಹುಮಾನ ೭೫ ಸಾ.ರೂ.ತೃತೀಯ ಬಹುಮಾನ ೬೫ ಸಾ.ರೂ.ನಾಲ್ಕನೇ ಬಹುಮಾನ ೫೫ ಸಾ.ರೂ.ಐದನೇ ಬಹುಮಾನ ೪೫ ಸಾ.ರೂ.ಆರನೇ ಬಹುಮಾನ ೩೫ ಸಾ.ರೂ. ಏಳನೇ ಬಹುಮಾನ ೨೦ ಸಾ.ರೂ. ನೀಡಲಾಗುವುದೆಂದರು.
ಜೂ. ೨೨ ರಂದು ಕಾರಹುಣ್ಣಿಮೆ ಅಂಗವಾಗಿ ಶ್ರೀ ಮಾತಾ ಲಕ್ಷö್ಮಮ್ಮ ದೇವಿ ಮೆರವಣಿಗೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳು ಹಾಗು ನೆರೆ ಆಂದ್ರ ಪ್ರದೇಶ, ತೆಲಂಗಾಣ, ಕೇರಳ,ತಮಿಳು ನಾಡಿನಿಂದಲೂ ಕಲಾದಂಡಗಳು ಆಗಮಿಸಿಸಲಿದ್ದು, ಎತ್ತುಗಳೊಂದಿಗೆ ನಡೆಯಲಿರುವ ಮೆವಣಿಗೆ ನಗರದ ವಿವಿಧ ರಸ್ತಗಳಲ್ಲಿ ನಡೆಸಲಾಗುತ್ತದೆ ಎಂದರು.
ಜೂನ ೨೧ ರಂದು ಸಂಜೆ ೬ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗದ್ವಾಲ್ ರಸ್ತೆಯ ಶ್ರೀವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ನಡೆಸಯಲಿವೆ. ಕರ್ನಾಟಕ, ಮಹಾರಾಷ್ಟç, ರಾಜಸ್ಥಾನ,ಗುಜರಾತ, ಬೆಂಬೆಗಳಿAದ ಕಲಾತಂಡಗಳು ಭಾಗವಹಿಸಲಿವೆ. ಜೂ ೨೨ ರಂದು ಸಂಜೆ ೬ ಗಂಟೆಗೆ ನಗರದ ನಿಜಲಿಂಗಪ್ಪ ಕಾಲೋನಿ ಶ್ರೀಗನೇಶ ಗುಡಿ ದೇವಸ್ಥಾನದ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳುತ್ತವೆ ಎಂದರು.
ಜೂನ್ ೨೩ ರಂದು ಸಂಜೆ ೬ ಗಂಟೆಗೆ ಗಂಜ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳುತ್ತವೆ. ಜೂ.೨೩ ರಂದು ಸಂಜೆ ೫ ಗಂಟೆಗೆ ರಾಜೇಂದ್ರ ಗಂಜನಲ್ಲಿ ಕುಸ್ತಿ ಪಂದ್ಯ ನಡೆಯಲಿದೆ. ಕರ್ನಾಟಕ, ಮಹಾರಾಷ್ಟç ಪಂಜಾಬ್, ಆಂದ್ರ ದೆಹಲಿಗಳಿಂದ ಕುಸ್ತಿ ಪಟ್ಟುಗಳು ಭಾಗವಹಿಸಲಿದ್ದಾರೆಂದರು. ಅಂದು ಮಧ್ಯಾಹ್ನ ಶ್ರೀ ಲಕ್ಷö್ಮಮ್ಮ ದೇವಸ್ಥನದ ಬಳಿ ಕಲ್ಲು ಗುಂಡು, ಉಸುಕಿನ ಚೀಲ ಎತ್ತುವ ಸ್ಪರ್ಧೇಗಳು ನಡೆಯಲಿವೆ. ಮೂರು ದಿನ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲೆಯ ಜನರು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಕೃಷ್ಣಮೂರ್ತಿ, ಜಿ.ಬಸವರಾಜ್ ರೆಡ್ಡಿ,ಕ, ಭಂಗಿ ನರಸರೆಡ್ಡಿ,ಕ ಯು.ಗೋವಿಂದರೆಡ್ಡಿ,ಪೋಗಲ್ ಚಂದ್ರಶೇಖರ ರೆಡ್ಡಿ, ಶ್ರೀನವಾಸ ರೆಡ್ಡಿ, ಗುಡ್ಸಿನರಸರೆಡ್ಡಿ, ರಾಜೇಂದ್ರ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಸರಕಾರ ಅನುದಾನ ನೀಡಲಿ
ರಾಯಚೂರು:
ರೈತರ ಹಬ್ಬ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಮುನ್ನೂರು ಕಾಪು ಸಮಾಜ ಕಳೆದ ೨೪ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದು, ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಕಂಬಳದ ಮಾದರಿಯಲ್ಲಿ ರಾಜ್ಯ ಸರಕಾರ ಆರ್ಥಿಕ ನೆರವು ನೀಡಬೇಕೆಂದು ಆಚರಣೆ ಸಮಿತಿ ಅಧ್ಯಕ್ಷ ಎ.ಪಾಪಾರೆಡ್ಡಿ ಒತ್ತಾಯಿಸಿದರು.
ಕಂಬಳ ಆಚರಣೆಗೆ ರಾಜ್ಯ ಸರಕಾರ ಈಗಾಗಲೇ ಅನುದಾನ ಘೋಷಣೆ ಮಾಡಿದೆ. ಬಿಡುಗಡೆ ಮಾಡಿಲ್ಲ, ಅದೇ ರೀತಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ರೈತರಿಗಾಗಿ ಸಮಾಜ ದಿಂದಲೇ ನಿರ್ವಹಿಲಾಗುತ್ತಿದೆ. ಮತ್ತಷ್ಟು ಆದ್ದೂರಿಯಾಗಿ ಹಾಘೂ ವಿಭಿನ್ನವಾಗಿ ಆಚರಿಸಲು ರಾಜ್ಯ ಸರಕಾರ ಆರ್ಥಿಕ ನೆರವು ನೀಡುವ ಮೂಲಕ ಪ್ರೋತ್ಸಹ ನೀಡಬೇಕೆಂದರು. ಪ್ರತಿಬಾರಿ ಚುನಾಯಿತಿ ಪ್ರತಿನಿಧಿಗಳಿಗೆ ಮನವಿ ಮಾಡಲಾಗುತ್ತದೆ. ಸರಕಾರ ಯಾವುದೇ ಸ್ಪಂದನೆ ದೊರಕಿಲ್ಲವೆಂದರು. ಹಬ್ಬದ ಆಚರಣೆ ಸುಮಾರು ೫೦ ಲಕ್ಷಕ್ಕೂ ಹೆಚ್ಚು ಹಣ ಖರ್ಚು ಆಗುತ್ತದೆ. ಜಿಲ್ಲೆಯ ಹಬ್ಬವಾಗಿ ಆಚರಿಸಲು ಮೆರಗು ನೀಡಲು ಸರಕಾರ ಆರ್ಥಿಕ ನೆರವು ನೀಡಬೇಕೆಂದರು.