ಮಾನ್ವಿ : ಕರ್ನಾಟಕ ಹೂಗಾರ, ಜೀರ್ ಪೂಲ್ ಮಾಲಿ, ಪೂಲಾರಿ, ಪೂಜಾರ್, ಹೂವಾಡಿಗ, ಪೂಜಾರಿ, ಜೀರ್ ಸಮಾಜದ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ನೀಎಒರುವ ಮನವಿಯಲ್ಲಿ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಮಾನ್ವಿ ಘಟಕ ಒತ್ತಾಯಿಸಿದೆ.
ಈ ವೇಳೆ ಮಾತನಾಡಿದ ಅಧ್ಯಕ್ಷ ಶರಣಪ್ಪ ನಂದಿಹಾಳ ಅವರು ಕರ್ನಾಟಕ ಸರ್ಕಾರವು ಉಲ್ಲೇಖಿತ ಮೂಲಕ ಕರ್ನಾಟಕ ಮಾಲಿ-ಮಾಲಗಾರ್ ಹಾಗೂ ಹೂಗಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶಿಸಿರುತ್ತದೆ. ಆದರೆ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಿ, ಕರ್ನಾಟಕ ಹೂವಾಡಿಗ, ಹೂಗಾರ, ಹೂಗಾರ್, ಮಾಲಗಾರ್, ಮಾಲಿ, ಪೂಲ್ ಮಾಲಿ, ಫುಲ್ ಮಾಲಿ, ಪುಲಾರಿ, ಪೂಲಾರಿ, ಅನುಕೂಲಮಾಡಿಕೊಡಬೇಕು. ರಾಜ್ಯ ಸರ್ಕಾರವು ಹೂಗಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಿ, ಸಮಾಜದ ಕುಲಕಸುಬು ಅವಲಂಭಿಸಿದವರಿಗೆ ನಿಗಮದ ಮೂಲಕ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಅವರ ಜೀವನ ಸಾಗಿಸಲು ತಾವುಗಳು ಅನುಕೂಲಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂಧರ್ಬದಲ್ಲಿ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಮಾನವಿ ಘಟಕ ಮಾನ್ವಿ ಅಧ್ಯಕ್ಷ ಶರಣಪ್ಪ ಹೂಗಾರ ನಂದಿಹಾಳ, ಗೌರವಾಧ್ಯಕ್ಷ ಅಮರಗುಂಡಪ್ಪ ಹೂಗಾರ ಉಟಕನೂರು, ಸುನೀಲ್ ಹೂಗಾರ ನೀರಮಾನ್ವಿ ಪ್ರಧಾನ ಕಾರ್ಯದರ್ಶಿ, ವಿರುಪಾಕ್ಷ ಮಾನವಿ, ಮಹಾದೇವಪ್ಪ ಹೂಗಾರ ಕೊಟ್ನೆಕಲ್, ಜಗದೀಶ ಹೂಗಾರ ಕುರ್ಡಿ, ಚಂದ್ರು ಹೂಗಾರ ಬ್ಯಾಗವಾಟ, ನಾಗರಾಜ ಅಲ್ಲಾಳ, ಪ್ರಭು, ರವಿ ಗವಿಗಟ್, ಶರಣಪ್ಪ ಪೋತ್ನಾಳ, ಆನಂದ ಹೂಗಾರ, ಅಮರೇಶ ನಂದಿಹಾಳ, ದಿಡ್ಡೆಪ್ಪ, ಹನುಮಂತ, ಜಗದೀ, ಶರಣಬಸವ ಹೂಗಾರ, ವಿರುಪಾಕ್ಷಿ, ಶಿವು ಆರೋಲಿ ಸೇರಿದಂತೆ ಇನ್ನಿತರರಿದ್ದರು.