ರಾಯಚೂರು: ಜೂ-19:
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ೨.೫ ಲಕ್ಷ ರೂ. ಬ್ಯಾಗ್ ಬಿಟ್ಟು ಹೋಗಿದ್ದನ್ನು ಗಮನಿಸಿದ ಬಸ್ ಚಾಲಕ ಹಾಗೂ ನಿರ್ವಾಹಕರು ಬ್ಯಾಗ್ ಸಮೇತ ಹಣವನ್ನು ಪ್ರಯಾಣಿಕರಿಗೆ ಹಿಂದಿರುಗಿಸಿದ ಘಟನೆ ರಾಯಚೂರು ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಾನವಿ ಮೂಲಕ ಸೋಮಶೇಖರ ಎಂಬುವರು ಹುಬ್ಬಳಿ- ಹೈದ್ರಾಬಾದ್ ಬಸ್‌ನಲ್ಲಿ ೨.೫ ಲಕ್ಷ ರೂ. ಇದ್ದ ಬ್ಯಾಗ್ ಬಿಟ್ಟು ರಾಯಚೂರು ಬಸ್ ನಿಲ್ದಾಣದಲ್ಲಿ ಇಳಿದು ಹೋಗಿದ್ದಾರೆ. ಚಾಲಕ ಹನಮಂತ್ ಮತ್ತು ನಿರ್ವಾಹಕ ಮಂಜುನಾಥ್ ಬ್ಯಾಗ್‌ನ್ನು ಹೈದ್ರಾಬಾದ್ ಲಗೇಜ್ ಕ್ಯಾರಿಯರ್‌ನಲ್ಲಿ ಪರಿಶೀಲನೆ ಮಾಡಿದಾಗ ಹಣ ಕಂಡು ಬಂದಿದ್ದು, ಅದರೊಂದಿಗೆ ಬ್ಯಾಂಕ್ ಬುಕ್ ಸಹ ಪತ್ತೆಯಾಗಿದೆ. ಅದರಲ್ಲಿದ್ದ ಫೋನ್ ನಂಬರ್ ಮೂಲಕ ಸೋಮ
ಶೇಖರ್‌ಗೆ ಕರೆ ಮಾಡಲಾಗಿದೆ. ಇಂದು ರಾಯಚೂರಿಗೆ ಬಸ್ ಬಂದ ವೇಳೆ ಅಧಿಕಾರಿಗಳ ಸಮಕ್ಷಮ ಸೋಮಶೇಖರ ಅವರಿಗ ಹಣ ಹಸ್ತಾಂತರ ಮಾಡಲಾಯಿತು.