ದೇವದುರ್ಗ : ತಾಲೂಕಿನ ಪಲಕನಮರಡಿ ಗ್ರಾಮ ಪಂಚಾಯತ್ ವ್ಯಾಪ್ತಿ ಮೂಡಲಗುಂಡ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದು ಬಸವರಾಜ ಶಿವಪ್ಪ(30 ವರ್ಷ)ಮೃತಪಟ್ಟ ಘಟನೆ ಜರುಗಿದೆ.
ಶಾಸಕಿ ಭೇಟಿ : ಸಿಡಿಲು ಬಡಿದು ಮೃತಪಟ್ಟ ಬಸವರಾಜ ಶಿವಪ್ಪ ಕುಟುಂಬಕ್ಕೆ ಶನಿವಾರ ಕ್ಷೇತ್ರದ ಶಾಸಕಿ ಕರೆಮ್ಮ ಗೋಪಾಲಕೃಷ್ಣ ನಾಯಕ ಭೇಟಿ ನೀಡಿ ತಕ್ಷಣವೇ ಸರ್ಕಾರದಿಂದ ಬರುವ ಪರಿಹಾರ ಧನವನ್ನು ವಿಳಂಬ ಮಾಡದೇ ಸ್ಥಳದಲ್ಲಿಯೇ ಪರಿಹಾರ ನೀಡಲು ಸೂಚಿಸಿರುವ ಪ್ರಯುಕ್ತ ತಕ್ಷಣವೇ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ 5 ಲಕ್ಷ ರೂಪಾಯಿ ಚೆಕ್‌ನ್ನು ಶಾಸಕರ ಮುಖಾಂತರ ನೀಡಿದರು.
ನಂತರ ಮಾತನಾಡಿದ ಶಾಸಕಿ ಕರೆಮ್ಮ ನಾಯಕ ಮುಂದಿನ ದಿನಗಳಲ್ಲಿ ಮೃತನ ಕುಟುಂಬಕ್ಕೆ ಹೆಚ್ಚಿನ ಪರಿಹಾರವನ್ನು ಸರ್ಕಾರದ ಮೂಲಕ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹಟ್ಟಿ, ಕಂದಾಯ ನಿರೀಕ್ಷಕ ದೇವರೆಡ್ಡಿ, ಮುಖಂಡ ಸಿದ್ದನಗೌಡ ಪಾಟೀಲ್, ರಾಮಣ್ಣ ನಾಯಕ, ರೇಣುಕಾಸ್ವಾಮಿ, ಲಕ್ಷ್ಮಣ ಊಟಿ, ಬಾಲಯ್ಯ ಇದ್ದರು.
ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ ಶಾಸಕರಿಂದ 5 ಲಕ್ಷ ಚೆಕ್ ವಿತರಣೆ
WhatsApp Group
Join Now