WhatsApp Group
Join Now
ಮಾನ್ವಿ: ಮಾನ್ವಿ ತಾಲೂಕಿನ ನಸಲಾಪುರ ಕ್ರಾಸ್ ಬಳಿ KA36 F1366 ಬಸ್ಸಿನ ಸ್ಟೇರಿಂಗ್ ರಾಡ್ ತುಂಡಾಗಿ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದಿದ್ದು ಬಸ್ ನಲ್ಲಿದ್ದ ಚಾಲಕ ಹಾಗೂ 40 ಜನ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ರವಿವಾರ 11.30 ಗಂಟೆಗೆ ಜರುಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ರಾಯಚೂರನಿಂದ ಮಾನ್ವಿ ಮೂಲಕ ಸಿಂಧನೂರು ಕಡೆ ತೆರಳುತ್ತಿದ್ದ ಈ ಬಸ್ಸಿಲ್ಲಿ 50 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು, ಮಾನ್ವಿಯಿಂದ ಹೊರಟಿದ್ದ ಬಸ್ಸಿನಲ್ಲಿ ಕೇವಲ 30 ಟಿಕೆಟ್ ವಿತರಿಸಲಾಗಿತ್ತು ಇನ್ನು ಕೆಲವರಿಗೆ ಟಿಕೆಟ್ ವಿತರಿಸಬೇಕಾಗಿತ್ತು ಅಷ್ಟರಲ್ಲಿ ಘಟನೆ ಜರುಗಿದೆ. ಸಾರಿಗೆ ಬಸ್ ಅಪಘಾತಕ್ಕೆ ಒಳಗಾದ ಹಿನ್ನೆಲೆ ಚಾಲಕ ಸೇರಿದಂತೆ 10 ಜನರಿಗೆ ಗಂಭೀರ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ರಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೂ30 ಜನ ಗಾಯಾಳುಗಳನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಈ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ರಿಮ್ಸ್ ಮತ್ತು ಮಾನ್ವಿ ತಾಲ್ಲೂಕು ಆಸ್ಪತ್ರೆಗೆ ರವಾನಿಸಿದರು. ಈ ಬಸ್ ಅಪಘಾತ ಘಟನೆಯು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭೇಟಿ: ನಸಲಾಪುರ ಕ್ರಾಸ್ ಬಳಿ ನಡೆದ ಬಸ್ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಹಂಪಯ್ಯನಾಯಕ ಅವರು ಗಾಯಗೊಂಡಿರುವವರ ಆರೋಗ್ಯ ವಿಚಾರಿಸಿ ಸಂತೈಸಿದ ನಂತರ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.