ಮೊರಾಜಿ ದೇಸಾಯಿ ವಸತಿ ನಿಲಯಕ್ಕೆ ಭೇಟಿ ನೀಡಿ ಊಟ ಮಾಡಿದ ಡಿ.ಸಿ ನಿತೀಶ

Eshanya Times

ರಾಯಚೂರು:

ವಿದ್ಯಾರ್ಥಿಗಳಿಗೆ ಹಾಸ್ಟೇಲ್‌ನಲ್ಲಿದ್ದು ಓದುವ ಅವಕಾಶವಿದ್ದು ಯಾರಿಗೇನೂ ಕಡಿಮೆಯಿಲ್ಲದೆ ಕಷ್ಟಪಟ್ಟು ಓದುವ ಮೂಲಕ ಕಾಲವನ್ನು ಬಳಿಸಿಕೊಳ್ಳಬೇಕೆಂದು ನೂತನ ಜಿಲ್ಲಾಧಿಕಾರಿ ನೀತೀಶ ಹೇಳಿದರು.
ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಜೆ ಭೇಟಿ ಮಾಡಿ ಮಕ್ಕಳೊಂದಿಗೆ ಊಟ ಮಾಡಿ ಮಕ್ಕಳೊಂದಿಗೆ ಸಮಯ ಕಳೆದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಸರ್ಕಾರ ಉತ್ತಮ ಅವಕಾಶ ನಿಮಗೆ ನೀಡಿದೆ. ಸಮಯ ಕಳೆದು ಹೋದ ಮೇಲೆ ಬರುವದಿಲ್ಲ. ವಿದ್ಯಾರ್ಥಿ ಜೀವನದಲ್ಲಿಯೇ ಕಷ್ಟುಪಟ್ಟು ಓದುವ ಮೂಲಕ ಗುರಿ ತಲುಪಬೇಕು. ಶಿಕ್ಷಣ ಮುಗಿದ ಮೇಲೆ ಚಿಂತಿಸಿದರೆ ಕಾಲ ಮಿಂಚಿ ಹೋಗಿರುತ್ತದೆ. ಕೇವಲ ಪಶ್ಚತಾಪ ಪಡಬೇಕಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಶ್ರಮವಹಿಸಿ ಶಿಕ್ಷಣ ಪಡೆದು ಸದುಪಯೋಗ ಪಡೆಯಬೇಕೆಂದರು. ಈ ಸಂದರ್ಬದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಆರ್.ಕೆ.ದುರಗೇಶ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಹೇಶ ಪೋತ್ದಾರ, ಪ್ರಾಂಶುಪಾಲರು ಕಲ್ಪನಾ ಬಿರಾದಾರ್, ನಿಲಯಪಾಲಕರು ಹುಲಿಗೆಪ್ಪ, ಸಹಶಿಕ್ಷಕರಾದ ಸಾಬುಗೌಡ, ಶಾಂತಮೂರ್ತಿ, ವೆಂಕಟೇಶ್, ಭೀಮೇಶ್, ಶಾಂತಲಾ, ನಾಗರತ್ನ, ರಮೇಶ್, ಸರ್ವಮಂಗಳ, ರೆಹೇನ ಬೇಗಂ, ಈರಣ್ಣ, ಲೋಕೇಶ್ ಸೇರಿದಂತೆ ಇತರರು ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";