ರಾಯಚೂರು: ಜೂ-14:
4 ವರ್ಷದೊಳಗಿನ ಮಕ್ಕಳಿಗೆ ಆರ್‌ಡಿಪಿಆರ್ ರೂಪಿಸುವ ಯಾವುದೇ ಕಾರ್ಯಕ್ರಮ ಮತ್ತು ೪ ರಿಂದ ೬ ವರ್ಷದೊಳಗಿನ ಮಕ್ಕಳ ಶಿಕ್ಷಣ ಇಲಾಖೆ ರೂಪಿಸುವ ಯೋಜನೆಗಳನ್ನು ಕೈ ಬಿಡಲು ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೃಹತ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಕಛೇರಿ ಮುಂದಿನ ಟಿಪ್ಪು ಸುಲ್ತಾನ್ ಗಾರ್ಡನಲ್ಲಿ ಪ್ರತಿಭಟನೆ ನಡೆಸಿ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಕೇಂದ್ರಗಳನ್ನು ಆರಂಭಿಸುವ ಬದಲು ಅಂಗನವಾಡಿ ಕೇಂದ್ರಗಳನ್ನು ಎಲ್‌ಕೆಜಿ ಮತ್ತು ಯುಕೆಜಿ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ಶಿಪಾರಸ್ಸು ಮಾಡಬೇಕೆಂದು ಒತ್ತಾಯಿಸಲಾಯಿತು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, 6 ವರ್ಷದೊಳಿಗನ ಮಕ್ಕಳಿಗೆ ಶೇ ೪೦ರಷ್ಟು ದೈನಿಕ ಬೆಳವಣಿಗೆ ಹಾಗೂ ಶೇ೮೫ರಷ್ಟು ಮಾನಸಿಕ ಬೆಳವಣಿಗೆಯಾಗುವುದರಿಮದ ೩-೬ ವರ್ಷದ ಮಕ್ಕಳ ಒಂದಡೆ ಕೂಡಿಸಿ ದೇಹದ ಅಂಗಾ0ಗಗಳ ಬೆಳವಣಿಗೆ ಮತ್ತು ಮೆದುಳಿನ ಬೆಳವಣಿಗೆ ಮತ್ತು ಮೆದುಲೀನ ಬೆಳವಣಿಗೆಗೆ ಬೇಕಾದ ಪುರಕ ಪೌಷ್ಠಿಕ ಆಹಾರ, ಆರೋಗ್ಯದ ಸವಲತ್ತುಗಳು, ಅನೌಪಚಾರಿಕೆ ಶಿಕ್ಷಣ ನೀಡುವುದಕ್ಕಾಗಿಯೇ 1976ರಲ್ಲಿ ಅಂಗನವಾಡಿ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ಈಗ 4 ವರ್ಷದ ಮಕ್ಕಳು ಸರಕಾರಿ ಶಾಲೆಗೆ ಹೋದರೆ ಅಂಗನವಾಡಿ ಕೇಂದ್ರಗಳು ಮಕ್ಕಳಿಲ್ಲದೆ ಕೇಂದ್ರಗಳಿಗೆ ಬರುವ ಅನುದಾನ ನಿಧಾನ ಗತಿಯಲ್ಲಿ ನಿಲ್ಲುತ್ತದೆ. ಅಲ್ಲದೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ.
ಶಿಕ್ಷಣ ಇಲಾಖೆಯಿಂದ ಪ್ರಾರಂಭಿಸುವ ಎಲ್‌ಕೆಜಿ ಮತ್ತು ಯುಕೆಜಿಗೆ ದಾಖಲಾಗುವ ಮಕ್ಕಳ ಐಸಿಡಿಎಸ್‌ನಲ್ಲಿ ಈಗಾಗಲೇ ದಾಖಲಾಗಿರುವುದರಿಂದ ಎರಡು ಕಡೆ ಮಕ್ಕಳು ದಾಖಲು ಆಗುತ್ತಾರೆ. ಶಿಕ್ಷಣ ಇಲಾಖೆ ಹೇಳಿ ಕೊಡುವ ಅನೌಪಚಾರಿಕ ಶಿಕ್ಷಣವನ್ನು ಮತ್ತು ಎಬಿಸಿಡಿ ಇಂಗ್ಲಿಷ್ ವರ್ಣಮಾಲೆ ಮತ್ತು ಪದಗುಂಚಗಳನ್ನು ಮಾತ್ರ ಬೋದಿಸುವುದು ಇರುತ್ತದೆ. ಮಕ್ಕಳ ಪೌಷ್ಠಿಕತೆಯಡೆಗೆ ಅವರ ಗಮನವಿರುವುದಿಲ್ಲವೆಂದು ದೂರಿದ್ದಾರೆ.
6 ವರ್ಷದ ಮಕ್ಕಳ ಸಂರಕ್ಷಣೆಗಾಗಿ ಜಾರಿಗೆ ತಂದ ಏಕೈಕ ಐಸಿಡಿಎಸ್ ಯೋಜನೆಯನ್ನು ಕಾಪಾಡಬೇಕು ಸೇರಿದಂತೆ ಅನೇಕ ಬೇಡಿಕೆಗಳು ಈಡೇರಿಸಲು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಹೆಚ್. ಪದ್ಮಾ, ಕಾರ್ಯದರ್ಶಿ ರಂಗಮ್ಮ ಅನ್ವಾರ್, ವರಲಕ್ಷಿö್ಮ, ಸಲೋಚಾನ ಅಧ್ಯಕ್ಷರು ಎಐಟಿಯುಸಿ, ಸರಸ್ವತಿ ಲಲಿತಾ, ಕೆ.ಜಿ.ವಿರೇಶ.ಶರಣ ಬಸವ, ಡಿ.ಹೆಚ್.ಕಂಬಳಿ ಸೇರಿದಂತೆ ಅನೇಕರು ಭಾಗವಹಿಸಿದರು.