ಸುರಪುರ:ಅಮೇರಿಕದ ಸುದ್ಧಿಗೋಷ್ಠಿ ಒಂದರಲ್ಲಿ ಕಾಂಗ್ರೇಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಪಡಿಸಲಾಗುವುದು ಎಂದು ದಲಿತ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಆರೋಪಿಸಿ, ಹೇಳಿಕೆಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ಸುರಪುರ ಮಂಡಲ ಹಾಗೂ ಬಿ ಜೆ ಪಿ ಎಸ್ ಸಿ / ಎಸ್ ಟಿ ಮರ‍್ಚಾ ನಗರ ಹಾಗೂ ಗ್ರಾಮೀಣ ಮಂಡಲ ವತಿಯಿಂದ ಇಂದು ಸುರಪುರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ರ‍್ಕಾರಕ್ಕೆ ಬರೆದ ಮನವಿ ಗ್ರೇಡ-೨ ತಹಸಿಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಸಲ್ಲಿಸಿದರು.
ಈ ಸಂರ‍್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ),ಭಾರತೀಯ ಜನತಾ ಪಕ್ಷದ ಸುರಪುರ ಮಂಡಲ ಅಧ್ಯಕ್ಷ ವೇಣು ಮಾಧವ ನಾಯಕ,ರಾಜಾ ಮುಕುಂದ ನಾಯಕ , ಬಲಭೀಮ ನಾಯಕ ಬೈರಿಮಡ್ಡಿ,ರಂಗಪ್ಪ ನಾಯಕ, ಹುಣಸಗಿ ಮಂಡಲ ಅಧ್ಯಕ್ಷ ಸಂಗಣ್ಣ ವೈಲಿ ಸಾಹುಕಾರ,ಜಿಲ್ಲಾ ಪ್ರಧಾನ ಕರ‍್ಯರ‍್ಶಿ ಮೆಲಪ್ಪ ಗುಳಗಿ, ಎಸ್.ಸಿ ಮರ‍್ಚಾ ಜಿಲ್ಲಾ ಅಧ್ಯಕ್ಷ ಭೀಮಾಶಂಕರ ಬಿಲ್ಲವ್,ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರಕಾಶ್ ಸಜ್ಜನ್, ನಗರ ಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ, ಪಾರಪ್ಪ ಗುತ್ತಿಗೆದಾರ,ವೆಂಕಟೇಶ ಬೈರಿಮಡ್ಡಿ,ಜಿಲ್ಲಾ ಯುವ ಮರ‍್ಚಾ ಪ್ರಧಾನ ಕರ‍್ಯರ‍್ಶಿ ಜಗದೀಶ್ ಪಾಟೀಲ್, ಸುರಪುರ ಮಂಡಲ ಪ್ರಧಾನ ಕರ‍್ಯರ‍್ಶಿ ನಿಂಗಣ್ಣ ಐಕೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.