ರಾಯಚೂರು: ಮೇ-27:
ನಗರದ ಮಹಾವೀರ ವೃತ್ತದಲ್ಲಿರುವ ಎಲೆಕ್ಟಿçÃಕಲ್ ವಾಹನ ಚಾರ್ಜ್ ಮಾಡುವ ಅಂಗಡಿಯಲ್ಲಿ ವಾಹನಕ್ಕೆ ಚಾರ್ಜ್ ಮಾಡುತ್ತಿರುವಾಗ ಏಕಾಏಕಿ ಬ್ಯಾಟರಿ ಸ್ಪೋಟಗೊಂಡು ಬೆಂಕಿ ಆವರಿಸಿ ಲಕ್ಷಾಂತರ ರೂ. ನಷ್ಟವಾದ ಘಟನೆ ನಡೆದಿದೆ.
ಗೀಗಾ ಫೆಬರ್ ನೆಟ್ ಎಂಬ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಅಂಗಡಿಯಲ್ಲಿದ್ದ ಮೂರು ಎಲೆಕ್ಟಿçÃಕ್ ವಾಹನಗಳು ಮತ್ತು ಹೊರಗಡೆ ನಿಲ್ಲಿಸಿದ ಇನ್ನೋಂದು ದ್ವೀಚಕ್ರವಾಹನ ಭಷ್ಮವಾದ ಘಟನೆ ನಡೆದಿದೆ. ಅಂಗಡಿಯ ಮೇಲಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ ಎಂಬ ಯುವಕ ಬೆಂಕಿಯಿAದ ಅಲ್ಲಿಂದ ಹಾರಿ ಬಿದ್ದು ಗಾಯಗೊಂಡಿದ್ದಾನೆ. ಬಟ್ಟೆ ಅಂಗಡಿಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದ್ದು, ಯಾವುದೇ ಜೀವ ಅಪಾವಾಗಿಲ್ಲವೆಂದು ಹೇಳಲಾಗುತ್ತಿದೆ. ಬೆಂಕಿ ಏಕಾಏಕಿ ಆವರಿಸಿದ್ದರಿಂದ ಪಕ್ಕದಲ್ಲಿಯೇ ಇದ್ದ ಬಟ್ಟೆ ಅಂಗಡಿ ಸೇರಿದಂತೆ ಇನ್ನೀತರ ಅಂಗಡಿಗಳಿಗೆ ಬೆಂಕಿ ಆವರಿಸಿಕೊಂಡು ಲಕ್ಷಾಂತರ ಮೌಲ್ಯದ ಆಸ್ತಿ ನಷ್ಟವಾಗಿದೆ. ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದರಿAದ ಸುತ್ತಮುತ್ತಲಿನ ಅಂಗಡಿಗಳಿಗೂ ಬೆಂಕಿ ಆವರಿಸಿತ್ತು. ಅಗ್ನಿ ಶಾಮಕದಳ ಎರಡು ವಾಹನಗಳು ಸ್ಥಳಕ್ಕೆ ಆಗಮಿಸಿ ಒಂದು ತಾಸಿಗೂ ಆಧಿಕಾ ಸಮಯ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಪಕ್ಕದ ೬ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ ಝಳ ತಗುಲಿ ಸುಟ್ಟು ಹೋಗಲು ಕಾರಣವಾಯಿತು. ಜನಬೀಡು ಪ್ರದೇಶವಾಗಿದ್ದರಿಂದ ಸಂಚಾರ ಸ್ಥಗೀತಗೊಂಡು ಸಾರ್ವಜನಿಕರು ಆತಂಕ ಪಡುವಂತಾಗಿತ್ತು. ನೂರಾರು ಜನ ಸ್ಥಳದಲ್ಲಿ ಜಮಾವಾಣಗೊಂಡಿದ್ದರಿAದ ಸಂಚಾರಕ್ಕೆ ತೊಂದರಯಾಯಿತು. ಅಗ್ನಿ ಶಾಮಕ ದಳ ಹರಸಾಹಸ ದಿಂದ ಬೆಂಕಿ ನಂದಿಸಲಾಯಿತು.