ರಾಯಚೂರು:ಆ-೧8:
ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛತೆಯಿಂದ ಕಾಪಾಡಿದಾಗ ಮಾತ್ರ ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ನಗರದ ಪ್ರತಿಯೊಬ್ಬರು ಸಂಪೂರ್ಣ ಸ್ವಚ್ಛತೆಗಾಗಿ ಜಾಗೃತಿ ಮೂಲಕ ಕಾಳಜಿ ವಹಿಸಬೇಕೆಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ತಿಳಿಸಿದರು.
ವಾರ್ಡ್ ನಂ ೧೪ ರ ನೇತಾಜಿ ನಗರದಲ್ಲಿ ನಗರಸಭೆ ವರಿಯಿಂದ ನಡೆಯುತ್ತಿರುವ ಸ್ವಚ್ಛತಾ ಕಾರ್ಯಕ್ರಮವನ್ನು ಪರಿಶೀಲಿಸಿದರು.
ನಮ್ಮ ಸುತ್ತಲಿನ ವಾತಾವರಣ ಸ್ವಚ್ಛತೆಯಿಂದ ಇದ್ದರೆ ಮಾತ್ರ ರೋಗರುಜನೆಗಳು ನಮ್ಮ ಬಳಿಗೆ ಬರುವುದಿಲ್ಲ.ಸ್ವಚ್ಚ ಮತ್ತು ಸುಂದರ ನಗರವನ್ನಾಗಿ ಮಾಡುವ ಜವಾಬ್ದಾರಿನಮ್ಮ ಮೇಲಿದೆ ಅದಕ್ಕಾಗಿ ಎಲ್ಲಂದರಲ್ಲಿ ಕಸವನ್ನು ಬಿಸಾಕದಂತೆ ಸಾರ್ವಜನಿಕರಿಗೆ ಸ್ವಚ್ಚತೆ ಅರಿವು ಮೂಡಿಸಿ ನಗರಸಭೆ ವಾಹನಗಳಿಗೆ ಕಸವನ್ನು ನೀಡಿ ಎಂದು ತಿಳಿಸಿದರು.
ಪೌರಕಾರ್ಮಿಕರು ಮನೆಮನೆಗೂ ತೆರಳುವಾಗ ಪ್ರತಿಯೊಂದು ಮನೆಯವರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ನಂತರ ಬಡಾವಣೆಯ ಜನರೊಂದಿಗೆ ಮಾತನಾಡಿ ಮೂಲಭೂತ ಸಮಸ್ಯೆಗಳನ್ನು ಆಲಿಸಿದರು. ಸ್ವಚ್ಚತೆ ಕುರಿತು ಜಾಗೃತಿ ವಹಿಸಿ ನಿಮ್ಮಿಂದ ರಾಯಚೂರು ನಗರದ ಸಂಪೂರ್ಣ ಸ್ವಚ್ಚತೆ ಸಾಧ್ಯವಾಗಲಿದೆ. ನಗರಸಭೆ ವಾಹನಗಳಿಗೆ ಕಸವನ್ನು ಬೇರ್ಪಡಿಸಿ ಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹ್ಮದ್ ಶಾಲಂ, ನಗರಸಭೆ ಸದಸ್ಯರಾದ ಹಾಜಿ ಹುಸೇನ್, ಫಿರೋಜ್ ಹಮ್ರಾಜ್, ಮಾಡಗಿರಿ ನರಸಿಂಹಲು, ತೇಜಪ್ಪ, ಪ್ರಶಾಂತ ವೆಂಕಟೇಶ, ಮಣಿಕಂಠ, ವಿನೋದ್ ಕುಮಾರ ಸೇರಿದಂತೆ ಅನೇಕರಿದ್ದರು.