ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಕಾಂಪೌಂಡ್, ರಸ್ತೆ ನಿರ್ಮಾಣ- ಬೋಸರಾಜು
ರಾಯಚೂರು,ಸೆ.೧೯: ರಾಯಚೂರಿನ ವಾರ್ಡ್ ನಂ 5 ರ ಡ್ಯಾಡಿ ಕಾಲೋನಿಗೆ ಹೊಂದಿಕೊ0ಡಿರುವ ಕೆಇಬಿ ಕ್ವಾಟ್ರಸ್ ಗೆ 1 ಕೋಟಿ ರೂ ವೆಚ್ಚದಲ್ಲಿ 600 ಮೀಟರ್ ಕಾಂಪೌಂಡ್ ಗೋಡೆ ನಿರ್ಮಾಣ ಹಾಗೂ 1.5 ಕೋಟಿ ವೇಚ್ಚದಲ್ಲಿ ಲಿಂಗಸ್ಗೂರು ರಾಯಚೂರು ಮುಖ್ಯ ರಸ್ತೆಯ ಚೈತನ್ಯ ಆಸ್ಪತ್ರೆಯಿಂದ ಯಕ್ಲಾಸ್ ಪೂರ ಮುಖ್ಯ ರಸ್ತೆಯವರೆಗೆ ರಸ್ತೆ ಕಾಮಗಾರಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮೊಹ್ಮದ್ ಶಾಲಂ, ನಗರಸಭೆ ಅಧ್ಯಕ್ಷರಾದ ನರಸಿಂಹ ನರಸಿಂಹಲು ಮಾಡಗಿರಿ, ಮುಖಂಡರಾದ ಜಯಣ್ಣ, ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ಜಯಂತರಾವ್ ಪತಂಗೆ, ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಚಂದ್ರಶೇಖರ್ ನಿರ್ಜಾಪುರ್, ಮಾನ್ವಿ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರಾದ ದಾನನ ಗೌಡ, ನಗರಸಭೆ ಸದಸ್ಯರಾದ ಶರಣಗೌಡ ಬಲ್ಲಟಗಿ, ತಿಮ್ಮಾರಡ್ಡಿ, ಬಸವರಾಜ ದರೂರು, ಬಸವರಾಜ ಪಾಟೀಲ್ ಅತ್ತನೂರು, ಸಣ್ಣ ನರಸರೆಡ್ಡಿ, ಬಿ ರಮೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.