ಮಾಜಿ ಸೈನಿಕರ ಸಂಘದ 14ನೇ ವಾರ್ಷಿಕೋತ್ಸವ ಮಾಜಿ ಸೈನಿಕರ ಸೌಲಭ್ಯ,ಬೇಡಿಕೆಗಳು ಈಡೇರಿಸಲು ಪ್ರಾಮಾಣಿಕ ಪ್ರಯತ್ನ-ರಾಜಾ ಅಮರೇಶ್ವರ ನಾಯಕ

Eshanya Times

ರಾಯಚೂರು: ಫೆ-25:
ದೇಶದ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ ಸೈನಕರು ತಮ್ಮ ಕುಟುಂಬದ ನಿರ್ವಾಹಣೆಗೆ ಬೇಕಾದ ಸೌಲಭ್ಯಗಳು ಹಾಗೂ ಬೇಡಿಕೆಗಳು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ನಗರದ ಐಎಂಎ ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಮಾಜಿ ಸೈನಕರ ಸಂಘದ ೧೪ನೇ ವಾರ್ಷಿಕೋತ್ಸವ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತ, ಸೈನಿಕರು ೧೫ರಿಂದ ೨೦ ವರ್ಷ ದೇಶ ಕಾಯುವ ಕೆಲಸ ಮಾಡುತ್ತಾರೆ. ನಂತರ ನಿವೃತಿ ಹೊಂದಿ ಮಾಜಿ ಸೈನಿಕರಾಗುತ್ತಾರೆ. ಮಾಜಿ ಸೈನಿಕರಾದ ಮೇಲೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಮಾಜಿ ಸೈನಿಕರಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗದಲ್ಲಿ ಮೀಸಲಾತಿ, ನಿವೇಶನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಂಭAದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದರು. ಜಿಲ್ಲೆಯ ಸಚಿವರ ಇದ್ದು,ಅಭಿವೃದ್ದಿ ಕೆಲಸಳಿಗೆ ಪಕ್ಷ ಬೇಧ ಮರೆತು ಮಾಡುತ್ತಿದ್ದು, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿನ ಸಮಸ್ಯೆಗಳ ಬಗ್ಗೆ ಸಂಭAದಿಸಿದ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ಮಾಜಿ ಸೈನಿಕರು ತಮ್ಮ ಬೇಡಿಕೆಗಳನ್ನು ನೋವಿನಿಂದ ಹೇಳಿಕೊಂಡಿದ್ದು, ಬೇಸರ ಉಂಟಾಗಿದೆ. ಈ ಹಿಂದೆಯೇ ನನ್ನ ಗಮನಕ್ಕೆ ತಂದಿದ್ದಾರೆ. ಈಗಾಗಲೇ ಸಮಸ್ಯೆಗಳು ಇತ್ಯರ್ಥವಾಗುತ್ತಿದ್ದವು ಎಂದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ರಾಜ್ಯಾಧ್ಯಕ್ಷ ಕೆ.ಎಸ್. ಶಿವಣ್ಣ ಮಾತನಾಡಿ,ಸೈನಿಕರು ತಮ್ಮ ಪ್ರಾಣ ಪಣಕ್ಕಿಟ್ಟು ದೇಶದ ಗಡಿ ಭಾಗದಲ್ಲಿ ಕಎಲಸ ಮಾಡುತ್ತಿದ್ದು, ಸೈನಿಕರ ಬಗ್ಗೆ ಹೆಮ್ಮೆ ಪಟ್ಟು ಹೇಳುತ್ತಿದ್ದು, ಆದರೆ ಸೈನಿಕರು ಮಾಜಿ ಸೈನಿಕರಾದ ಮೇಲೆ ಜೀವನದ ಪರಸ್ಥಿತಿ ಕೆಳಮಟ್ಟಕ್ಕೆ ಇಳಿದಿದೆ. ಸರಕಾರದ ಕನಿಷ್ಠ ಸೌಲಭ್ಯಗಳು ದೊರಯುತ್ತಿಲ್ಲವೆಂದರು. ಜಾತಿಗೊಂದು ಭವನಗಳಿದ್ದು, ಮಾಜಿ ಸೈನಿಕರಿಗೆ ಭವನ ನೀಡಿಲ್ಲ, ಜಿಲ್ಲೆಯಲ್ಲಿ ೨೮೦ ಮಾಜಿ ಸೈನಿಕರು ಹಆಗೂ ೮೦ ಜನ ವೀರ ರಾಣಿಯರಿದ್ದಾರೆ. ಅವರಿಗೆ ವಸತಿ ವ್ಯವಸ್ಥೆ ಇಲ್ಲ, ೫ ಎಕರೆ ಭೂಮಿ ಮಂಜೂರುರಾಗಿದ್ದು, ಸರಕಾರ ಭೂಮಿ ನೀಡಲು ಮೀನಾಮೇಷ ಎಣಿಸುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಸಂಘದ ಕಛೇರಿ ಇದ್ದು, ಜಿಲ್ಲೆಯಲ್ಲಿ ಕಛೇರಿ ಇಲ್ಲವೆಂದರು. ಜಿಲ್ಲೆಯಲ್ಲಿ ಯುವಕರಿಗೆ ತರಬೇತಿ ನೀಡಿಲು ಜಾಗ ನೀಡಬೇಕು, ಸೈನಿಕ ಶಾಲೆ ಆರಂಭಿಸಬೇಕು, ಮಾಜಿ ಸೈನಿಕರ ಬೇಡಿಕೆಗಳು ಈಡೇರಿಸದಿದ್ದರೆ ಸೈನಿಕರಿಗೆ ನೀಡಿದ ಪದಕಗಳನ್ನು ಸರಕಾರಕ್ಕೆ ಹಿಂತಿರುಗಿಸ ವಿಧಾನ ಸೌಧದ ಮುಂದೆ ಆರೆ ಬೆತ್ತಲೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠದ ಶಾಂತಮಲ್ಲಾ ಶಿವಾಚಾರ್ಯರು, ಕಾಂಗ್ರೆಸ್ ಮುಖಂಡರ ರವಿ ಬೋಸರಾಜ್,ಶಿವಂ ಆಸ್ಪತ್ರೆ ಡಾ.ದೀಪಾ ಶ್ರೀಪಾಟೀಲ್, ಡಾ.ಶಂಕರ ಗುರು, ಬ್ಲಡ್ ಬ್ಯಾಂಕ್ ಅಧ್ಯಕ್ಷ ಅರುಣ ಕೆ.ಎನ್. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚನ್ನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";