ಸಿಂಧನೂರು.ಫೆ.೨೮ –
ಎರಡು ಪ್ರತ್ಯೇಕ ಬೈಕ್ ಕಳ್ಳತನದ ಪ್ರಕರಣ ಬೇಧಿಸಿದ ನಗರ ಪೊಲೀಸ್ ಠಾಣೆಯ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿ, ೮ ಮೋಟಾರ್ ಸೈಕಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಡಿವೈಎಸ್ಪಿ ಬಿ.ಎಸ್.ತಳವಾರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಐ ಸುನಿಲ್ ಎಂ ಮೂಲಿಮನಿ ನೇತೃತ್ವದ ಪೊಲೀಸ್ ತಂಡ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಬೂಬ್ ಪಾಷಾ, ಅನಿಲಕುಮಾರ ಹಾಗೂ ಮಂಜುನಾಥ ಎನ್ನುವವರನ್ನು ಬಂಧಿಸಿ, ೮ ಬೈಕ್ಗಳು ಹಾಗೂ ೧.೮ ಲಕ್ಷ ರೂ.ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.ಸಿಂಧನೂರು ಪೊಲೀಸರ ಕಾರ್ಯಸಾಧನೆಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅಭಿನಂದಿಸಿದ್ದಾರೆ.