ರಾಯಚೂರು: ಆ-9:
ಎಂಎಸ್ಪಿ ಜಾರಿ, ರೈತ ವಿರೋಧಿ ಮಸೂದೆಗಳ ವಾಪಸ್ಗೆ ಒತ್ತಾಯಿಸಿ, ವಹಿನಾಡು ಭೂಕುಸಿತ ಪ್ರದೇಶವನ್ನು ರಾಷ್ಟಿçÃಯ ವಿಪತ್ತು ಎಂದು ಘೋಷಿಸಿಸಲು ಹಾಗೂ ಕಾರ್ಪೊರೇಟ್ ಕಂಪನಿಗÀಳೇ ದೇಶ ಬಿಟ್ಟು ತೊಲಗಿ ಎಂದು ಒತ್ತಾಯಿಸಿ ಸಂಯುಕ್ತ ಹೋರಾಟ-ಕರ್ನಾಟಕ (ಎಸ್ಕೆಎಂ) ನೇತೃತ್ವದಲ್ಲಿ ಕಾರ್ಪೊರೇಟ್ ಕಂಪನಿಗಳ ಭೂತ ದಹನ ಮಾಡಿ ಪ್ರತಿಭಟನೆ ಮಾಡಲಾಯಿತು.
ಅಗಸ್ಟ್ ೯ ಕ್ವಿಟ್ ಇಂಡಿಯಾ ಚಳುವಳಿಯ ದಿನಾಚರಣೆ ಅಂಗವಾಗಿ ಶುಕ್ರವಾದಂದು ಸಂಯುಕ್ತ ಹೋರಾಟ-ಕರ್ನಾಟಕ (Sಏಒ) ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರ ಪ್ರಯುಕ್ತ ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ವಿವಿಧ ಈಡೇರಿಕೆಗೆ ಒತ್ತಾಯಿಸಿ ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿ ದಹನ ಪ್ರತಿಭಟನೆ ನಡೆಸಲಾಯಿತು.
ಕಾರ್ಪೋರೇಟ್ ಕಂಪನಿಗಳೇ- ಭಾರತ ಬಿಟ್ಟು ತೊಲಗಿ,ಕೃಷಿಯ – ಕಾರ್ಪೋರೇಟಿಕರಣ ನಿಲ್ಲಿಸಿ,ರೈತ ವೀರೋಧಿ – ವಿದ್ಯುತ್ ಖಾಸಗಿಕರಣ ಮಸೂದೆ ಹಿಂಪಡೆಯಿರಿ,ಭಾರತದ ಕೃಷಿ ಉದ್ಪಾದನೆ- ಮಾರುಕಟ್ಟೆ-ಸಂಗ್ರಹಣೆ ಮತ್ತು ವಿತರಣೆ ರೈತರು ಮತ್ತು ಸರಕಾದ ಆಧೀನದಲ್ಲಿಯೇ ಇರುವಂತೆ ಜೋಪಾನ ಮಾಡಬೇಕು,ಕೃಷಿಭೂಮಿ ರೈತರಲ್ಲೇ ಉಳಿಯುವಂತೆ ಸಂರಕ್ಷಿಸಬೇಕು,ಕೈಗಾರಿಕೆ- ರಾಷ್ಟಿçÃಯ ಹೆದ್ದಾರಿ- ರಾಜ್ಯ ಹೆದ್ದಾರಿ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸುವುದನ್ನು ನಿಲ್ಲಿಸಬೇಕು,ಕೃಷಿ ಉತ್ಪಾದನೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿAದ ಹೊರಗಿಡಬೇಕು,ಕೃಷಿ ಉತ್ಪನ್ನಗಳಿಗೆ ಡಾ/ ಸ್ವಾಮಿನಾಥನ್ ನೇತೃತ್ವದ ಸಮಿತಿಯ ಶಿಪಾರಸ್ಸಿನಂತೆ ಉತ್ಪಾದನಾ ವೆಚ್ಚ ೫೦% ಬೆಂಬಲ ಬೆಲೆಯನ್ನು ಕಾನೂನಾತ್ಮಕ ಗೊಳಿಸಬೇಕು,ಕೃಷಿ ಒಳಸುರಿಗಳ ಮೇಲಿನ ಉSಖಿ ಹಿಂಪಡೆಯಬೇಕು,ಕೃಷಿಗೆ ಅಂತರಿಕ ಸಹಾಯಧನವನ್ನು ಹೆಚ್ಚು ನೀಡಲೂ ಸೂಕ್ತ ಕ್ರಮ ಕೈಗೊಳ್ಳಬೇಕು.ರೈತ ಕಾರ್ಮಿಕರ ವಿರೋಧಿ ನೀತಿಗಳನ್ನು ವಾಪಸ್ ಪಡೆಯಬೇಕು ಸೇರಿದಂತೆ ಅನೇಕ ಬೇಡಿಕೆಗಳು ಈಡೇರಿಸಲು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಚಾಮರಸ ಮಾಲಿ ಪಾಟೀಲ, ಕೆ.ಜಿ.ವಿರೇಶ, ಬಸಲಿಂಗಪ್ಪ ಹೀರೆನೆಗನೂರು, ಖಾಜಾ ಅಸ್ಲಂ ಅಹ್ಮದ್, . ಮಾರೆಪ್ಪ ಹರವಿ, ಡಿ.ಎಸ್.ಶರಣಬಸವ,ಪ್ರಭಾಕರಪಾಟೀಲ್, ಬೂದೆಯ್ಯಸ್ವಾಮಿ, ಎಸ್. ಮಾರೆಪ್ಪ ವಕೀಲರು, ಶ್ರೀನಿವಾಸ್ ಕಲವಲದೂಡ್ಡಿ, ವಿ.ಮುದ್ದಕಪ್ಪ.ನಾಯಕ, ಆನಂದ, ಗೋವಿಂದ, ಅಂಜಿನೇಯ್ಯ ಕುರುಬದೂಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.